22.9 C
ಪುತ್ತೂರು, ಬೆಳ್ತಂಗಡಿ
March 7, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಎಕ್ಸೆಲ್ ನಲ್ಲಿ ಎನ್ ಡಿ ಎ ತರಗತಿಗಳ ಓರಿಯಂಟೇಶನ್

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ ಇಲ್ಲಿನ ಎನ್ ಡಿ ಎ ತರಗತಿಗಳ ಓರಿಯಂಟೇಶನ್ ವಿದ್ಯಾ ಸಾಗರ ಕ್ಯಾಂಪಸ್ ನಲ್ಲಿ ನಡೆಯಿತು.
ಭಾರತೀಯ ಸೇನೆಯ ವಿಶ್ರಾಂತ ಮೇಜರ್ ಜನರಲ್ ಎಂ.ವಿ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡರು.

ಯಾವುದೇ ಸಾಧನೆ ಮಾಡಲು ಏಕಾಗ್ರತೆ ಬೇಕು. ಏಕಾಗ್ರತೆ ಹಾಗೂ ಇಚ್ಛಾ ಶಕ್ತಿ ಸಾಧಕನಾಗಿರಬೇಕಾದ ಎರಡು ಪ್ರಮುಖ ಅರ್ಹತೆಗಳು ಎಂದು ಭಾರತೀಯ ಸೇನೆಯ ವಿಶ್ರಾಂತ ಜನರಲ್ ಮೇಜರ್ ಎಂ.ವಿ ಭಟ್ ಹೇಳಿದರು.


ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಮಾತನಾಡಿ, ದೇಶ ಸೇವೆ ಮಾಡುವ ಉನ್ನತ ಮಟ್ಟದ ಅವಕಾಶ, ಎನ್ ಡಿ ಎ ಕ್ಲಿಯರ್ ಮಾಡಿದ ವಿದ್ಯಾರ್ಥಿಗಳಿಗೆ ಲಭಿಸುತ್ತದೆ. ಹೀಗಾಗಿ ಎನ್ ಡಿ ಎ ಪರೀಕ್ಷೆಗಳನ್ನು ಗಂಭೀರವಾಗಿ ಸ್ವೀಕರಿಸಿ ಎಂದರು.

ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ ಮಾತನಾಡಿ, ದೇಶ ಸೇವೆಯೇ ಈಶ ಸೇವೆ ಎಂದು ತಿಳಿದು, ಬದುಕಲು ಎನ್ ಡಿ ಎ ತರಬೇತಿ ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದರು. ಎನ್ ಡಿ ಎ ಸಂಯೋಜಕ ಜೋಸ್ಟಮ್ ಎ ಟಿ ,ಎನ್. ಡಿ. ಎ ತರಬೇತಿಯ ಬಗ್ಗೆ ವಿವರವಾಗಿ ತಿಳಿಸಿದರು.
ವಿದ್ಯಾರ್ಥಿಗಳಾದ ವರ್ಷಾ ಎನ್ ಸ್ವಾಗತಿಸಿದರು. ರಕ್ಷಾ ವೆಂಕಟ್ ಮತ್ತು ರೀತು ಕೆ ನಿರೂಪಿಸಿದರು. ಸುಧನ್ವ ವಂದಿಸಿದರು.

Related posts

ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ಹಾಗೂ ಕ್ರಾಸ್ ಸಂಸ್ಥೆ ಬೆಂಗಳೂರು ನೇತೃತ್ವದಲ್ಲಿ ಒಕ್ಕೂಟ ಬಲವರ್ಧನೆ ಬಗ್ಗೆ ತರಬೇತಿ ಕಾರ್ಯಾಗಾರ

Suddi Udaya

ಉಜಿರೆ: ನಿವೃತ್ತ ಕಾಫಿ ಬೋರ್ಡ್ ಅಧಿಕಾರಿ ಸೀತಾರಾಮ ಪುತ್ರಾಯ ನಿಧನ

Suddi Udaya

ಕೊಕ್ಕಡ: ಎಂಡೋ ಪೀಡಿತ ವಿಶೇಷ ಚೇತನರಿಗೆ ಉಚಿತ ಬಸ್ ಪಾಸ್ ವಿತರಣೆ

Suddi Udaya

ಉಜಿರೆ: ಯಕ್ಷಬಿಂದು ಕಲಾರಾಧನಾ ಪ್ರತಿಷ್ಠಾನದ ವಿಜ್ಞಾಪನಾ ಪತ್ರ ಬಿಡುಗಡೆ

Suddi Udaya

ಬೆಳ್ತಂಗಡಿ ‘ಶಾಂತಿಶ್ರೀ ‘ ಜೈನ ಮಹಿಳಾ ಸಮಾಜ ವತಿಯಿಂದ ‘ಆಹಾರೋತ್ಸವ ‘ ಕಾರ್ಯಕ್ರಮ

Suddi Udaya

ಇಂದಬೆಟ್ಟು ವಲಯದ ಗುರಿಪಳ್ಳ ಕಾರ್ಯಕ್ಷೇತ್ರದಲ್ಲಿ ‘ಬೆಳಕು’ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ

Suddi Udaya
error: Content is protected !!