September 6, 2026
ಚಿತ್ರ ವರದಿಧಾರ್ಮಿಕವರದಿಸಂಘ-ಸಂಸ್ಥೆಗಳು

ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮಾಸಿಕ ಸಭೆ

ಬೆಳ್ತಂಗಡಿ: ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿಯ ಮಾಸಿಕ ಸಭೆಯು ಜೂ.29ರಂದು ಸಂಘದ ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ರಾಘವೇಂದ್ರ ರವರ ಮನೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸತೀಶ್‌ ಎಚ್‌. ಎಲ್‌. ವಹಿಸಿದ್ದರು.

ತಾಲೂಕು ಮರಾಟಿ ಸಂಘದಿಂದ ಇದೇ ಪ್ರಥಮ ಬಾರಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಅ.12ರಂದು ಗುರುವಾಯನಕೆರೆಯ ಹವ್ಯಕ ಭವನದಲ್ಲಿ ನಡೆಸುವುದೆಂದು ನಿರ್ಧರಿಸಲಾಯಿತು. ಅದೇ ದಿನ ವಾರ್ಷಿಕ ಮಹಾಸಭೆಯನ್ನು ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ವಾರ್ಷಿಕ ಮಹಾಸಭೆಯಲ್ಲಿ ಈ ಬಾರಿಯ ಎಸ್. ಎಸ್. ಎಲ್. ಸಿ ಮತ್ತು ಪಿಯುಸಿಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಸಾಧನಾ ಪುರಸ್ಕಾರ ನೀಡುವ ಬಗ್ಗೆ ಚರ್ಚಿಸಲಾಯಿತು. ತಾಲೂಕಿನ ಮರಾಟಿ ಸಮಾಜದ ಅರ್ಹ ವಿದ್ಯಾರ್ಥಿಗಳು ಈ ಕೂಡಲೇ ಸಂಘಕ್ಕೆ ತಮ್ಮ ಅಂಕ ಪಟ್ಟಿಯೊಂದಿಗೆ ಮಾಹಿತಿ ನೀಡುವಂತೆ ವಿನಂತಿಸಲಾಯಿತು.

ಸಭೆಯಲ್ಲಿ ಗೌರವಾಧ್ಯಕ್ಷ ಕೊರಗಪ್ಪ ನಾಯ್ಕ, ಉಪಾಧ್ಯಕ್ಷರಾದ ವಸಂತ ನಾಯ್ಕ, ಪ್ರಭಾಕರ ನಾಯ್ಕ, ಕಾರ್ಯದರ್ಶಿಗಳಾದ ಸುರೇಶ್ ಎಚ್. ಎಲ್., ಪವಿತ್ರಾ ಲೋಕೇಶ್, ಕೋಶಾಧಿಕಾರಿ ಹರೀಶ್ ಪೆರಾಜೆ, ಸಂಘಟನಾ ಕಾರ್ಯದರ್ಶಿ ಪ್ರಸಾದ್ ನಾಯ್ಕ, ಕ್ರೀಡಾ ಕಾರ್ಯದರ್ಶಿ ರವಿ ನಾಯ್ಕ ಬಡಕೋಡಿ, ಮಾಧ್ಯಮ ಕಾರ್ಯದರ್ಶಿ ಶರತ್ ನಾಯ್ಕ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಕಾರ್ಯಕಾರಿ ಸಮಿತಿ ಸದಸ್ಯರಾದ ರಜನೀಶ್ ನಾಯ್ಕ, ಚಂದ್ರಾವತಿ, ವಿಶಾಲ ಹಾಗೂ ಇತರರು ಭಾಗವಹಿಸಿದ್ದರು. ರಾಘವೇಂದ್ರ ನಾಯ್ಕ ಸ್ವಾಗತಿಸಿ, ಶರತ್ ನಾಯ್ಕ ವಂದಿಸಿದರು.

Related posts

ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನ: ನಡ ಸರಕಾರಿ ಪ್ರೌಢಶಾಲೆಗೆ ಶೇ. 100 ಫಲಿತಾಂಶ

Suddi Udaya

ಕಣಿಯೂರು: ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

Suddi Udaya

ಮಾದರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರಿಯಾನ್ಷ್ ಮುಂಡಾಜೆ :ಎಂಡೋ ಪೀಡಿತ ಬಾಲೆಗೆ ಆಹಾರದ ಕಿಟ್, ಆರ್ಥಿಕ ನೆರವು ಹಸ್ತಾಂತರ

Suddi Udaya

ಕೇಳ್ತಾಜೆ: ಸಿರಾಜುಲ್ ಹುದಾ ಮದರಸ ಹಾಗೂ ಜುಮ್ಮಾ ಮಸ್ಜಿದ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಮಚ್ಚಿನದಲ್ಲಿ ಪಿಕಪ್ ಹಾಗೂ ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ ದ್ವಿಚಕ್ರ ಸವಾರರಿಬ್ಬರು ಮೃತ್ಯು

Suddi Udaya

ಅಡಿಕೆ ಆಮದು ನಿಷೇಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಮಾ.7 ರಂದು ದ.ಕ ಜಿಲ್ಲಾಧಿಕಾರಿ ಕಛೇರಿ ಎದುರು ಬೃಹತ್ ಪ್ರತಿಭಟನೆ

Suddi Udaya
error: Content is protected !!