ಬೆಳ್ತಂಗಡಿ: ಶಿಕ್ಷಣ ಇಲಾಖೆ ನಡೆಸುವ ಇಸಿಒ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶಿಕ್ಷಕ ಎಡ್ವರ್ಡ್ ಡಿ’ ಸೋಜ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಹೊಸಕೋಟೆ ತಾಲೂಕಿನ ಶಿಕ್ಷಕರ ಮಾರ್ಗದರ್ಶಕರು ಆಗಬೇಕೆಂಬ ಹಿರಿಯ ಶಿಕ್ಷಕರ ಅಪೇಕ್ಷೆಯಂತೆ ಅವರು ಈ ಪರೀಕ್ಷೆಯನ್ನು ಬರೆದಿದ್ದಾರೆ. ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಗಿರುವ ಇವರು ಬೆಳ್ತಂಗಡಿ ತಾಲೂಕಿನ ಕಟ್ಟದಬೈಲು ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾಯ೯ನಿವ೯ಹಿಸಿದ್ದರು. ಪ್ರಸ್ತುತ ಸ. ಹಿ. ಪ್ರಾ.ಶಾಲೆ ಕಂಬಳಿ ಪುರ,ಬೆಂಗಳೂರು ಇಲ್ಲಿ ಮುಖ್ಯಶಿಕ್ಷಕರಾಗಿರುತ್ತಾರೆ.











