September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ನಾವೂರು: ನಿoರ್ದಿ ಬಳಿ ರಸ್ತೆಗೆ ಬಿದ್ದ ಮರ ಗ್ರಾ.ಪಂ. ನಿಂದ ತೆರವು ಕಾರ್ಯ

ನಾವೂರು: ನಿನ್ನೆ (ಜು.8)ರಾತ್ರಿ ಸುರಿದ ಭಾರಿ ಮಳೆಗೆ ನಿoರ್ದಿ ರಸ್ತೆ ಬದಿಯ ಮರ ಬೆಳ್ತಂಗಡಿ -ಕಿಲ್ಲೂರು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ವಿಷಯ ತಿಳಿದ ತಕ್ಷಣ ಗ್ರಾ.ಪಂ. ಮರ ತೆರವು ಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷರು ಹಾಲಿ ಸದಸ್ಯ ಗಣೇಶ್ ಗೌಡ ನಾವೂರು ಹಾಗೂ ಪಂಚಾಯತ್ ಸದಸ್ಯ ಹಸೈನಾರ್, ಸ್ಥಳೀಯರಾದ ಎ.ಕೆ. ಅಬ್ಬಾಸ್, ಸತೀಶ್ ಸುವರ್ಣ, ಮಾಧವ ಗೌಡ ಒಳಗುಡ್ಡೆ, ಹಮೀದ್ ನಿoರ್ದಿ ರವರು ಮರವನ್ನು ತೇರವುಗೊಳಿಸಲು ಸಹಕರಿಸಿದರು.

ಸಾಲುಗಟ್ಟಿ ನಿಂತ ವಾಹನಗಳನ್ನು ಬದಲಿ ರಸ್ತೆಗಳಾದ ನವಗ್ರಾಮ ಜನತಾ ಕಾಲನಿ ಹಾಗೂ ಪಾಲೇದಬೆಟ್ಟು – ನಾವೂರು ರಸ್ತೆಯಲ್ಲಿ ಕಳಿಸಲಾಯಿತು.ರಸ್ತೆ ಬದಿಯಲ್ಲಿ ಹಲವಾರು ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಈಗಾಗಲೇ ಗ್ರಾ.ಪಂ. ನಿಂದ ಮನವಿ ಮಾಡಿದ್ದು ಮರ ತೆರವುಗೊಳಿಸಲು ಅನುಮತಿ ನೀಡಿರುತ್ತಾರೆ.

ಸಾರ್ವಜನಿಕರಿಗೆ ತೊಂದರೆ ಆಗುವ ಮೊದಲು ಮರ ತೆರವು ಗೊಳಿಸಿ ಮುಂದೆ ನಡೆಯುವ ಅನಾಹುತವನ್ನು ತಪ್ಪಿಸಬೇಕಾಗಿ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆ ಅಧಿಕಾರಿಗಳಲ್ಲಿ ಪಂಚಾಯತ್ ನ ಮನವಿಯಾಗಿದೆ.

Related posts

ಮಲವಂತಿಗೆ: ಮೇಗಿನ ಕರಿಯಾಲು ನಿವಾಸಿ ಕೆ. ಸಂಜೀವ ಗೌಡ ನಿಧನ

Suddi Udaya

ನಿರಂತರ ಮಳೆ: ಮದ್ದಡ್ಕ ಆಲಂದಿಲ ಮದರಸ ಬಳಿ ಚರಂಡಿ ಇಲ್ಲದೆ‌ ರಸ್ತೆಯಲ್ಲೇ ಹರಿದ ನೀರು

Suddi Udaya

ಬೆಳ್ತಂಗಡಿ: ನಿತ್ಯಾನಂದ ನಾವರರವರು ಒಂದೇ ದಿನದಲ್ಲಿ112 ಜೀವ ವಿಮಾ ಪಾಲಿಸಿ ಮಾಡಿ ಒನ್ ಡೇ ಸೆಂಚುರಿಯನ್ ಸಾಧನೆ

Suddi Udaya

ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನೆಯ ತಾಲೂಕು ಮಟ್ಟದ ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ: ರೂ. 2. 43 ಲಕ್ಷ ನಿವ್ವಳ ಲಾಭ.

Suddi Udaya

ತೋಟತ್ತಾಡಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ದಿನಕರ ನಾಯಕ್ ಬೆಳ್ತಂಗಡಿ ಮಾದರಿ ಶಾಲೆಗೆ ವಗಾ೯ವಣೆ

Suddi Udaya
error: Content is protected !!