September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜು.23: ದೆಹಲಿಯಲ್ಲಿ ಬಿಎಮ್ಎಸ್ ಇದರ 70ನೇ ವರ್ಷದ ಕಾರ್ಯಕ್ರಮಗಳ ಸಮಾರೋಪ : ಬೆಳ್ತಂಗಡಿ ಶ್ರೀ ಮಂಜುನಾಥೇಶ್ವರ ಸಭಾಭಾವನದಲ್ಲಿ ನೇರಪ್ರಸಾರ

ಬೆಳ್ತಂಗಡಿ : ಭಾರತೀಯ ಮಾಜ್ದೂರ್ ಸಂಘ ಇದರ ನೇತೃತ್ವದಲ್ಲಿ ಭಾರತೀಯ ಮಾಜ್ದೂರು ಸಂಘ ಬೆಳ್ತಂಗಡಿ ತಾಲೂಕು ಸಮಿತಿಯ ಸಹಭಾಗಿತ್ವದಲ್ಲಿ ಬಿಎಮ್ಎಸ್ ಇದರ 70ನೇ ವರ್ಷದ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ದೆಹಲಿಯಲ್ಲಿ ನಡೆಯಲಿದೆ.

ಇದರಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘ ಇದರ ಸರ ಸಂಘ ಚಾಲಕರಾದ ಡಾ. ಮೋಹನ್ ಜೀ ಭಾಗವತ್ ರವರು ಸಮಾರೋಪ ಭಾಷಣವನ್ನು ಮಾಡಲಿದ್ದಾರೆ ಇದರ ನೇರಪ್ರಸಾರದ ಕಾರ್ಯಕ್ರಮ ಶ್ರೀ ಮಂಜುನಾಥೇಶ್ವರ ಪಿನಾಕಿ ಸಭಾಭಾವನ ಸಂತೆಕಟ್ಟೆ ಬೆಳ್ತಂಗಡಿ ಇಲ್ಲಿ ಜು.23 ರಂದು ಬೆಳ್ಳಿಗೆ ಸಮಯ 11 ಗಂಟೆಗೆ ನಡೆಯಲಿದೆ.

ಇದರ ನೇರ ಪ್ರಸಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಮಿತಿ ಅಧ್ಯಕ್ಷ ಉದಯ ಬಿ ಕೆ, ಮುಖ್ಯ ಅತಿಥಿಗಳಿಗಾಗಿ ಆರ್ ಎಸ್.ಎಸ್ ಇದರ ಪುತ್ತೂರು ಜಿಲ್ಲೆಯ ಜಿಲ್ಲಾ ಸಹ ಬೌದ್ದಿಕ್ ಪ್ರಮುಖರಾದ ಸುಬ್ರಾಯ ಪುಣಚ, ಬಿ.ಎಮ್.ಎಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ್ ಉಜಿರೆ, ಆಟೋ ರಿಕ್ಷಾ ಯೂನಿಯನ್ ಇದರ ತಾಲೂಕು ಸಮಿತಿಯ ಅಧ್ಯಕ್ಷ ಕೃಷ್ಣ ಬೆಳಾಲು, ರಬ್ಬರ್ ಟ್ಯಾಪರ್ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗರಾಜ ಪಿ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ಸಮಸ್ತ ಬಿ.ಎಮ್.ಎಸ್ ಸಂಘಟನೆಯ ಕಾರ್ಯಕರ್ತರು, ಕಾರ್ಮಿಕ ಬಂಧುಗಳು, ರಾಷ್ಟ್ರ ಚಿಂತನೆಯ ಸಂಘ ಪರಿವಾರ ಸಂಘಟನೆಯ ಎಲ್ಲಾ ಹಿರಿಯರು, ಪ್ರಮುಖರು, ಉಪಸ್ಥಿತಿರುತ್ತಾರೆ.

Related posts

ಮರೋಡಿ: ಹಲ್ಲೆ, ಜೀವ ಬೆದರಿಕೆ ಆರೋಪ, ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿಯಲ್ಲಿ ಶ್ರೀ ಸಾಯಿ ರೇಕಿ ತರಬೇತಿ ಕೇಂದ್ರ ಶುಭಾರಂಭ

Suddi Udaya

ಮುಂಡಾಜೆ: ನಿರಂತರ ಮಳೆಯಿಂದಾಗಿ ಮುಂಡ್ರುಪ್ಪಾಡಿ ಪರಿಸರದಲ್ಲಿ ತೋಟಕ್ಕೆ ನುಗ್ಗಿದ್ದ ನೀರು: ಅಪಾರ ಹಾನಿ

Suddi Udaya

ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಕಳ್ಳರು: ನಾಲ್ಕು ಕಾಣಿಕೆ ಡಬ್ಬಿಗಳ ಕಳವು

Suddi Udaya

ವಾಣಿ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ವಾಗ್ಮಿ ದಾಮೋದರ ಶರ್ಮ ಸಂವಾದ

Suddi Udaya

ಮಚ್ಚಿನ: ಕಲ್ಲಗುಡ್ಡೆ ರಸ್ತೆಯಲ್ಲಿ ತುಂಬಿದ ನೀರು

Suddi Udaya
error: Content is protected !!