September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬಿಜೆಪಿಗರೇ, ಸರ್ಕಾರದ ವಿರುದ್ಧ ಸುಳ್ಳು ಆರೋಪ ನಿಲ್ಲಿಸಿ, ತಾಲೂಕಿಗೆ ನೀಡಿದ ಅಭಿವೃದ್ಧಿ, ಯೋಜನೆ ಗಮನಿಸಿ: ಅಭಿವೃದ್ಧಿ ಅನುದಾನಗಳ ಪಟ್ಟಿಗಳೊಂದಿಗೆ ಯುವ ಕಾಂಗ್ರೆಸ್ ಬೆಳ್ತಂಗಡಿ ವತಿಯಿಂದ ಪೋಸ್ಟರ್ ಅಭಿಯಾನ

ಬೆಳ್ತಂಗಡಿ:ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ನಂತರ, ಗ್ಯಾರಂಟಿ ಯೋಜನೆಗಳನ್ನು ಜನತೆಗೆ ಯಶಸ್ವಿಯಾಗಿ ನೀಡಿ, ಅಭಿವೃದ್ಧಿ ಮತ್ತು ಯೋಜನೆಗಳಿಗೆ ಅನುದಾನಗಳು ನೀಡುತ್ತಿದ್ದಾರೆ.ಆದರೆ ವಿರೋಧ ಪಕ್ಷ ಬಿಜೆಪಿ ಸುಳ್ಳು ಮತ್ತು ವ್ಯರ್ಥ ಆರೋಪವನ್ನು ಮಾಡುತ್ತಿದ್ದು ಸರ್ಕಾರ ಅಭಿವೃದ್ಧಿಗೆ ಅನುದಾನವನ್ನು ನೀಡುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ನಂತರ ತಾಲೂಕಿಗೆ ನೀಡಿರುವ ಅಭಿವೃದ್ಧಿ ಯೋಜನೆಗಳ,ಅನುದಾನಗಳ ಪಟ್ಟಿಗಳೊಂದಿಗೆ ಜು.30 ರಂದು ಯುವ ಕಾಂಗ್ರೆಸ್ ಬೆಳ್ತಂಗಡಿ ವತಿಯಿಂದ ಪೋಸ್ಟರ್ ಅಭಿಯಾನವನ್ನು ನಡೆಸಲಿದ್ದಾರೆ.ಪೋಸ್ಟರ್ ಅಭಿಯಾನದ,ಬಿತ್ತಿ ಪತ್ರವನ್ನು ಇಂದು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಬ್ರಾಹಿಂ ನವಾಜ್, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹಕ್ಕಿಮ್ ಕೊಕ್ಕಡ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿತೇಶ್,ಯುವ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ಅಝರ್ ನಾವುರು,ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಅರುಣ್ ಲೋಬೊ, ನವೀನ್ ಗೌಡ ಸವಣಾಲು,ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮೆಲಂತಬೆಟ್ಟು,ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಮಹಮದ್ ಸಿದ್ದಿಕ್ ಮೆಲಂತಬೆಟ್ಟು, ಅವಿನಾಶ್ ಮೇಲಂತಬೆಟ್ಟು, ಜಾನ್ಸನ್ ಕೊಕ್ಕಡ, ವಿನಯ್ ಉಜಿರೆ, ಗಣೇಶ್ ಕಣಿಯೂರು ಉಪಸ್ಥಿತರಿದ್ದರು

Related posts

ಡಿ.14: ಅನಾರು ಹಾ.ಉ.ಸ. ಸಂಘದ ನೂತನ ಕಟ್ಟಡ “ಕ್ಷೀರ ವಾರಿಧಿಯ” ಉದ್ಘಾಟನೆ

Suddi Udaya

ದ.ಕ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ: ಆರೆಂಜ್ ಅಲರ್ಟ್ ಘೋಷಣೆ ಇಂದು (ಜೂ.12) ದ.ಕ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ

Suddi Udaya

ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುವ ‘ಸ್ವಾತಂತ್ರ್ಯ ಸಂಭ್ರಮ’ — ಮುಳಿಯ ಗೋಲ್ಡ್ & ಡೈಮಂಡ್ಸ್‌ನಿಂದ ವಿಶೇಷ ವಿಡಿಯೋ ಸ್ಪರ್ಧೆ

Suddi Udaya

ಕಲ್ಮಂಜ ಲಕ್ಷ್ಮಣ ಭಂಡಾರಿ ನಿಧನ

Suddi Udaya

ಶಿರ್ಲಾಲು :ಬೆಳ್ತಂಗಡಿ ಕೋಟಿ ಚೆನ್ನಯ ಕ್ರೀಡಾಕೂಟ 2025 ರ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿ ಯಕ್ಷಗಾನ ಮೇಳದ ಪ್ರಧಾನ ಸಂಚಾಲಕರಾಗಿ ಲ. ನಿತ್ಯಾನಂದ ನಾವರ ನೇಮಕ

Suddi Udaya
error: Content is protected !!