ವರದಿ

ತಾಲೂಕಿನ ಪುಟಾಣಿಗಳಿಗೆ ಕೆಜಿ ಲೆಕ್ಕದಲ್ಲಿ ಆಕರ್ಷಕವಾದ ಬಟ್ಟೆ ಖರೀದಿಗೆ ಸುವರ್ಣಾವಕಾಶ ಬೆಳ್ತಂಗಡಿಯಲ್ಲಿ ನೂತನವಾಗಿ ಶುಭಾರಂಭಗೊಂಡ ಬೇಬಿ ಕ್ಲೌಡ್ ಕೆಜಿ ಮಾರ್ಟ್ ಕೆಜಿ ಲೆಕ್ಕದಲ್ಲಿ ಮಕ್ಕಳ ಉಡುಪು ನೀಡುವ ಈ ಉದ್ಯಮ ಸಫಲವಾಗಲಿ – ರಕ್ಷಿತ್ ಶಿವಾರಂ

ಬೆಳ್ತಂಗಡಿ: ತಾಲೂಕಿನ ಪುಟಾಣಿಗಳಿಗೆ ಕೆಜಿ ಲೆಕ್ಕದಲ್ಲಿ ಆಕರ್ಷಕವಾದ ಬಟ್ಟೆ ಖರೀದಿಗೆ ಬೇಬಿ ಕ್ಲೌಡ್ ಕೆಜಿ ಮಾರ್ಟ್ ಅವಕಾಶ ಕಲ್ಪಿಸಿದ್ದು ಬೆಳ್ತಂಗಡಿಯ ಬಸ್ ಸ್ಟ್ಯಾಂಡ್ ಬಳಿಯಿರುವ ಸಾಂತೋಮ್ ಟವರ್ಸ್ ನಲ್ಲಿ ಜು. 24ರಂದು ಶುಭಾರಂಭಗೊಂಡಿತು.

ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಂ ಬೆಳ್ತಂಗಡಿಯಲ್ಲಿ ವಿನೂತನ ಪ್ರಯತ್ನದೊಂದಿಗೆ ಮಕ್ಕಳ ಉತ್ತಮ ಗುಣಮಟ್ಟದ ವಸ್ತ್ರಗಳನ್ನು ಕೆಜಿ ಲೆಕ್ಕದಲ್ಲಿ ನೀಡುವ ಮಳಿಗೆಯ ಈ ಪ್ರಯೋಗಕ್ಕೆ ಯಶಸ್ವಿಯಾಗಿ ನಡೆಯಲಿ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿದೆ. ಅಜರುದ್ದೀನ್ ಅವರ ಈ ಹೆಜ್ಜೆ ಸಫಲಗೊಳ್ಳಲಿ ಎಂದು ಅಭಿಪ್ರಾಯಪಟ್ಟರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್,ಸಾಂತೋಮ್ ಟವರ್ ನಿರ್ದೇಶಕ ಬಿನೋಯಿ, ನಾವೂರು ಗ್ರಾಮ ಪಂಚಾಯತ್ ಸದಸ್ಯ, ಸ್ಥಾಪಕ ಹಸೈನರ್ ಎಂಕೆ, ಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್ ಎಸ್ ಕೊಯ್ಯುರು, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಮೆರಿಟಾ ಪಿಂಟೋ ಹಾಗೂ ಸೌಮ್ಯಲತಾ, ಅನುಗ್ರಹ ವಿದ್ಯಾ ಸಂಸ್ಥೆಯ ಮಾಲಕ ತಲಹತ್, ಝಿನತ್ ಉಜಿರೆ,ಇಮೇಜ್ ಮೊಬೈಲ್ ಮಾಲೀಕ ಮೊಹಮ್ಮದ್ ಹರ್ಷದ್ ಸಹಿತ ಮುಂತಾದವರು ಉಪಸ್ಥಿತರಿದ್ದರು.ಸಂಸ್ಥೆಯ ಮಾಲಕ ಅಜರ್ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ,ಸತ್ಕರಿಸಿದರು.

ಇಮೇಜ್ ಮೊಬೈಲ್ ನ ಎಲ್ಲರೂ ಸಹಕರಿಸಿದರು.ಹುಟ್ಟಿದ ಮಗುವಿನಿಂದ ಹಿಡಿದು ಹತ್ತು,ಹದಿನಾಲ್ಕು ವರ್ಷದ ಮಕ್ಕಳವರೆಗೆ ಉತ್ತಮ ಗುಣಮಟ್ಟದ ಬಟ್ಟೆಗಳು ಕೆಜಿ ಲೆಕ್ಕದಲ್ಲಿ ದೊರೆಯಲಿದೆ.ಒಂದು ಕೆಜಿಗೆ ರೂ. 999,ಒಂದು ಪೀಸ್ ಬಟ್ಟೆಗೆ ರೂ.19 ರಿಂದ ಪ್ರಾರಂಭ,ರೂ.499 ಕ್ಕೆ ಬ್ರಾಂಡೆಡ್ ಸರ್ಪಲೆಸ್ ಬಟ್ಟೆಗಳು ದೊರೆಯುತ್ತದೆ ಎಂದು ಇಮೇಜ್ ಗ್ರೂಪ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.ಮಾಹಿತಿಗಾಗಿ 9731209508,9901309508 ಈ ನಂಬರನ್ನು ಸಂಪರ್ಕಿಸಬಹುದು.

Related posts

ಶಿಬಾಜೆ ಗ್ರಾ.ಪಂ. ನಲ್ಲಿ ರೋಜ್ ಗಾರ್ ದಿನಾಚರಣೆ

Suddi Udaya

ಡೆಂಗ್ಯೂ ಜ್ವರದಿಂದ ಬಳಲಿ ವಿಶ್ರಾಂತಿಯಲ್ಲಿದ್ದ ಬದ್ಯಾರು ನಿವಾಸಿ ದಿವಾಕರ ಶೆಟ್ಟಿ ಅಸ್ವಸ್ಥಗೊಂಡು ನಿಧನ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಅಕ್ರಮ ಕಲ್ಲು ಕೋರೆ ವಿಷಯದಲ್ಲಿ ದಾಖಲಾದ ಎರಡು ಪ್ರಕರಣ: ರದ್ದುಗೊಳಿಸುವಂತೆ ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Suddi Udaya

ಗುರುವಾಯನಕೆರೆ ಗೆಳೆಯರ ಬಳಗ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!