24 C
ಪುತ್ತೂರು, ಬೆಳ್ತಂಗಡಿ
July 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಗೆ, ಅಮೆರಿಕ – ನಾರ್ಥ್ ಕೆರೊಲಿನಾ ವಿವಿ ವೈದ್ಯಕೀಯ ವಿದ್ಯಾರ್ಥಿಗಳ ಭೇಟಿ

ಕಕ್ಕಿಂಜೆ: ಇಲ್ಲಿಯ ಶ್ರೀ ಕೃಷ್ಣ ಆಸ್ಪತ್ರೆಗೆ ನಾರ್ಥ್ ಕೆರೊಲಿನಾ ವೈದ್ಯಕೀಯ ವಿಧ್ಯಾರ್ಥಿಗಳ ತಂಡವು ಯೇನೆಪೊಯ ದಂತ ವೈದ್ಯಕೀಯ ಕಾಲೇಜು ದೇರಳಕಟ್ಟೆ ಮಂಗಳೂರು ಇವರ ಸಹಕಾರದೊಂದಿಗೆ ಜು.25 ರಂದು ಭೇಟಿ ನೀಡಿ ಗ್ರಾಮೀಣ ಪ್ರದೇಶದ ವೈದ್ಯಕೀಯ ಸೇವೆ ಎದುರಿಸುವ ಸವಾಲುಗಳು ಮತ್ತು ಶ್ರೀ ಕೃಷ್ಣ “ಯೋಗಕ್ಷೇಮ” (ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ) ಇದರ ಬಗ್ಗೆ ಚರ್ಚಿಸಿದರು,ಮತ್ತು ಗ್ರಾಮೀಣ ಪ್ರದೇಶದ ಆರೋಗ್ಯ ಸೇವೆಯ ಬಗ್ಗೆ ಮಾಹಿತಿ ಪಡೆದರು.

ಆಸ್ಪತ್ರೆಯ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೈದ್ಯಕೀಯ ನಿರ್ದೇಶಕರಾದ ಡಾ.ಮುರಳಿಕೃಷ್ಣ ಇರ್ವತ್ರಾಯ ಮಾತನಾಡಿ ನಗರ ಪ್ರದೇಶಗಳಲ್ಲಿ ಸೌಲಭ್ಯಗಳ ಲಭ್ಯತೆ ಹೆಚ್ಚು ಇದ್ದು ಯಾವುದೇ ರೀತಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು. ಆದರೆ ಹಳ್ಳಿ ಪ್ರದೇಶಗಳಲ್ಲಿ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ನಿಭಾಯಿಸಲು ಕಷ್ಚಕರವಾಗಿದ್ದು, ಮತ್ತು ವೈದ್ಯಕೀಯ ಸಿಬ್ಬಂದಿಗಳ ಕೊರತೆ ಇತರ ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕಿ ಡಾ.ವಂದನಾ ಎಂ ಇರ್ವತ್ರಾಯ, ಮುಖ್ಯ ವೈದ್ಯಾಧಿಕಾರಿ ಡಾ.ಅಲ್ಬಿನ್ ಜೋಸೆಫ್, ವೈದ್ಯಾಧಿಕಾರಿಗಳಾದ ಡಾ. ಮೌಲ್ಯ, ಡಾ. ಶಾರೂನ್, ದಂತ ವೈದ್ಯಾಧಿಕಾರಿ ಡಾ. ಮಹಮ್ಮದ್ ಮಿಫ್ರಾ, ಆಡಳಿತಾಧಿಕಾರಿ ಶ್ರೀಮತಿ ಜ್ಯೋತಿ ವಿ ಸ್ವರೂಪ್, ಯೇನೆಪೊಯ ದಂತ ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿ ಡಾ.ಪ್ರಮಾದ ಪ್ರಭಾಕರ್, ಡಾ.ಅಲಿ, ಮ್ಯಾನೇಜರ್ ಭರತ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಧರ್ಮಸ್ಥಳಕ್ಕೆ ಭೇಟಿ

Suddi Udaya

ಗೋಪಾಲಕೃಷ್ಣ ದೇವಸ್ಥಾನ ಬೆಂದ್ರಾಳ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಆಟೋಟ ಸ್ಪರ್ಧೆ

Suddi Udaya

ಉಡುಪಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರಾಗಿ ಧರಣೇಂದ್ರ ಕೆ. ಜೈನ್ ಆಯ್ಕೆ

Suddi Udaya

ಬೆಳ್ತಂಗಡಿ : ತಿಥಿ ಕಾರ್ಯಕ್ರಮ ಪದಾಥ೯ಕ್ಕೆ ಬಡಿಸಲು ನಾಲ್ಕು ಆಮೆಗಳ ಬೇಟೆ: ನಾಲ್ಕು ಮಂದಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಮಡಂತ್ಯಾರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಗ್ರಾಹಕರ ಸಭೆ

Suddi Udaya

ತ್ರೋಬಾಲ್ ಪಂದ್ಯಾಟ: ಪದ್ಮುಂಜ ಸ.ಪ.ಪೂ. ಕಾಲೇಜಿಗೆ ದ್ವಿತೀಯ ಸ್ಥಾನ

Suddi Udaya
error: Content is protected !!