September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಧರ್ಮಸ್ಥಳ: ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಸ್ಕಾರ್ಫ್ ಡೇ, ಕಾರ್ಗಿಲ್ ದಿನಾಚರಣೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

ಧರ್ಮಸ್ಥಳ: ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾರ್ಗಿಲ್ ದಿನ ಹಾಗೂ ಸ್ಕಾರ್ಫ್ ಡೇಯನ್ನು ಭಾರತ್ ಸ್ಕೌಟ್ಸ್ ಗೈಡ್ಸ್ ವತಿಯಿಂದ ಆಚರಿಸಲಾಯಿತು.

ಶಾಲೆಯ ಸ್ಕೌಟ್ಸ್-ಗೈಡ್ಸ್ ಕಬ್ಸ್-ಬುಲ್‌ಬುಲ್ ವಿದ್ಯಾರ್ಥಿಗಳು ಮಣ್ಣಿನ ಹಣತೆಯಲ್ಲಿ ದೀಪವನ್ನು ಬೆಳಗಿಸಿ ಅದನ್ನು ಭಾರತದ ನಕ್ಷೆಯ ಸುತ್ತಲೂ ಇರಿಸಿ ಕಾರ್ಗಿಲ್‌ನಲ್ಲಿ ಮಡಿದ ವೀರಯೋಧರಿಗೆ ವಿನೂತನವಾಗಿ ನಮನವನ್ನು ಸಲ್ಲಿಸಿದರು.

ಸ್ಕೌಟ್ ಮಾಸ್ಟರ್ ಆಶಾ ಕಾರ್ಗಿಲ್ ವಿಜಯೋತ್ಸವ ಹಾಗೂ ಸ್ಕಾರ್ಫ್ ಡೇ ಯ ಕುರಿತಾಗಿ ಮಾಹಿತಿಯನ್ನು ನೀಡಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಮೂಡಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ೯ ಮಂದಿ ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಅವರ ನಿಸ್ವಾರ್ಥ ಸೇವೆಗಾಗಿ ಸ್ಕಾರ್ಫ್ ತೊಡಿಸಿ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಸರಸ್ವತಿ ಮತ್ತು ಶ್ರೀಮತಿ ಸುಜಾತಾ ಅವರ ಕಾರ್ಯ ಗಮನಿಸಿ ಅವರನ್ನು ಅಭಿನಂದಿಸಿದ್ದಕ್ಕಾಗಿ ಶಾಲೆಗೆ ಧನ್ಯವಾದ ಸಲ್ಲಿಸಿದರು.

ಕಬ್ ಮಾಸ್ಟರ್ ಹೇಮಾವತಿ ಜೈನ್ ಆಶಾ ಕಾರ್ಯಕರ್ತೆಯರ ಕಿರುಪರಿಚಯ ಮಾಡಿದರು. ಶಾಲಾ ಮುಖ್ಯಶಿಕ್ಷಕಿ ಪರಿಮಳ ಎಂ.ವಿ. ಪ್ರಾಸ್ತಾವಿಕವಾಗಿ ಮಾತನಾಡಿ ಆಶಾ ಕಾರ್ಯಕರ್ತೆಯರ ಕೆಲಸ ಹಾಗೂ ಸಮಾಜಮುಖಿ ಕೆಲಸಗಳನ್ನು ವಿವರಿಸಿದರು. ಸ್ಕೌಟ್ಸ್ ಮಾಸ್ಟರ್ ಆಶಾ ನಿರೂಪಿಸಿ, ಗೈಡ್ ಕ್ಯಾಪ್ಟನ್ ಗೀತಾ ವಂದಿಸಿದರು. ಸ್ಕೌಟ್ಸ್ ಮಾಸ್ಟರ್ ಶಶಿಕಲಾ, ಶ್ರೀಮತಿ ಜ್ಯೋತಿ, ಗೈಡ್ ಕ್ಯಾಪ್ಟನ್ ದೀಕ್ಷ ಶೀಭಾ, ಪ್ಲಾಕ್ ಲೀಡರ್ ಸೌಮ್ಯ, ಕಬ್ ಮಾಸ್ಟರ್ ಅಮೃತ ವಿ ಶೆಟ್ಟಿ ಸಹಕರಿಸಿ ದರು.

Related posts

ಎಕ್ಸೆಲ್ ಪದವಿ ಪೂರ್ವ ಕಾಲೇಜು: ಸಿ ಇ ಟಿ ಯಲ್ಲಿ ಅತ್ಯುತ್ತಮ ಫಲಿತಾಂಶ

Suddi Udaya

ಬೆಳ್ತಂಗಡಿ ಕ್ಯಾಂಪ್ಕೋ ಶಾಖೆಯಿಂದ ನಿವೃತ್ತಿ ಹೊಂದಿದ ಶ್ರೀಧರ ಕೆ. ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಗುರುವಾಯನಕೆರೆ ಶ್ರೀ ವೇದವ್ಯಾಸ ಶಿಶುಮಂದಿರದ ಮಾತೃ ಮಂಡಳಿ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ಉಜಿರೆ ನಿವಾಸಿ ಲಲಿತಾ ಪೂಜಾರಿ ನಿಧನ

Suddi Udaya

ಬೆಳ್ತಂಗಡಿ: ಜೀವನ ಕೌಶಲ ತರಬೇತಿ ಕಾರ್ಯಾಗಾರ

Suddi Udaya

ಬಳಂಜ: ಉದ್ಯಮಿ, ಕೃಷಿಕ ರಾಕೇಶ್ ಹೆಗ್ಡೆಯವರ ಇಕೋಫ್ರೆಶ್ ಫಾರ್ಮ್ ನಲ್ಲಿ ಬೆಳೆದ ಪ್ರಥಮ ಬೆಳೆ: ಡ್ರ್ಯಾಗನ್ ಫ್ರೂಟ್ ನ್ನು ಬಳಂಜ ಶಾಲಾ ವಿದ್ಯಾರ್ಥಿಗಳಿಗೆ ವಿತರಣೆ, ಫ್ರೂಟ್ ಸವಿದು ಸಂಭ್ರಮಿಸಿದ ವಿದ್ಯಾರ್ಥಿಗಳು

Suddi Udaya
error: Content is protected !!