September 6, 2026
ಅಪಘಾತಜಿಲ್ಲಾ ಸುದ್ದಿವರದಿ

ಚಾರ್ಮಾಡಿ ಘಾಟ್‌ನಲ್ಲಿ ದುರ್ಘಟನೆ – ಯುವಕ ಪ್ರಪಾತಕ್ಕೆ ಬಿದ್ದು ಗಂಭೀರ ಗಾಯ: ಹೈವೇ ಪಟ್ರೊಲ್ ಸಿಬ್ಬಂದಿ ಗಳಿಂದ ರಕ್ಷಣೆ

ಚಾರ್ಮಾಡಿ: ಪ್ರಕೃತಿ ಸೌಂದರ್ಯದಿಂದ ಹೆಸರುವಾಸಿಯಾದ ಚಾರ್ಮಾಡಿ ಘಾಟ್‌ನಲ್ಲಿ ಅಪಘಾತ ಸಂಭವಿಸಿ, 21 ವರ್ಷದ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಮೂತ್ರವಿಸರ್ಜನೆಗಾಗಿ ಪ್ರಪಾತದ ಅಂಚಿನತ್ತ ಹೋದಾಗ, ಕಾಲು ಜಾರಿ ಸುಮಾರು 30 ಅಡಿ ಆಳಕ್ಕೆ ಬಿದ್ದಿದ್ದು, ಚಕ್ ಮಕ್ಕಿ ಗ್ರಾಮದ ನಿವಾಸಿ ಮುಸಮ್ಮಿಲ್ (21) ಗಾಯಗೊಂಡಿದ್ದಾನೆ. ತಕ್ಷಣ ಹೈವೇ ಪಟ್ರೊಲ್ ಸಹಾಯಕ್ಕೆ ಧಾವಿಸಿ, ಅವನನ್ನು ಎತ್ತಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಮಂಗಳೂರು ಆಸ್ಪತ್ರೆಗೆ ರವಾನಿಸಿದರು.

ಚಾರ್ಮಾಡಿ ಘಾಟ್ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಭಾಗವಾಗಿದ್ದು, ಪ್ರವಾಸಿಗರು ಆಗಾಗ ಭೇಟಿ ನೀಡುವ ಸ್ಥಳವಾಗಿದೆ. ಮಳೆಗಾಲದಲ್ಲಿ ರಸ್ತೆ ಮತ್ತು ಪ್ರಪಾತದ ಅಂಚು ಜಾರುವಿಕೆ ಅಪಾಯವಾಗಿದೆ. ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕೆಪಿಎಸ್ ಪುಂಜಾಲಕಟ್ಟೆ ಪ್ರೌಢಶಾಲೆ ಮತ್ತು ಪದವಿಪೂರ್ವ ವಿಭಾಗದ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಮಂಗಳೂರು ವಿವಿ ಅಂತರ್ ಕಾಲೇಜು ನೆಟ್‌ಬಾಲ್ ಪಂದ್ಯಾಟ : ಉಜಿರೆಯ ಎಸ್‌.ಡಿ.ಎಂ ಚಾಂಪಿಯನ್ಸ್

Suddi Udaya

ಫೆ.20 ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಸಾಂಸ್ಕೃತಿಕ ವೈಭವ

Suddi Udaya

ಇಂಡಿಯಾ ಬುಕ್ ಆಫ್ ರೆಕಾರ್ಡ್, ಏಷ್ಯಾ ಬುಕ್ ಆಫ್ ರೆಕಾರ್ಡ್ ಸಾಧನೆಗೈದ ಶ್ರದ್ಧಾ ಶೆಟ್ಟಿ ಎಣಿoಜೆ ರವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ವರ್ತಕರ ಸಂಘ ಹಾಗೂ ಬೆಳ್ತಂಗಡಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ವತಿಯಿಂದ ಸ್ವಾತಂತ್ರ ದಿನಾಚರಣೆ

Suddi Udaya

ಬೆಳಾಲು: ಅಕ್ರಮವಾಗಿ ಮದ್ಯ ಶೇಖರಣೆ: ಧರ್ಮಸ್ಥಳ ಪೊಲೀಸರಿಂದ ದಾಳಿ: ಆರೋಪಿ‌ ಪರಾರಿ

Suddi Udaya
error: Content is protected !!