ಗ್ರಾಮಾಂತರ ಸುದ್ದಿಚಿತ್ರ ವರದಿ

ದಯಾ ವಿಶೇಷ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಲಾಯಿಲ: ದಯಾ ವಿಶೇಷ ಶಾಲೆಯಲ್ಲಿ ಭಾರತದ 79 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸ್ವಾತಂತ್ರೋತ್ಸವದ ದ್ವಜಾರೋಹಣ ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕ ವಂ.ಫಾ.ವಿನೋದ್ ಮಸ್ಕರೇನಸ್ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಲಯನ್ ವಸಂತ ಶೆಟ್ಟಿ ಶ್ರದ್ಧ ಪಾಸ್ಟ್ ರೀಜ್ಯನ್ ಚೇರಮಾನ್ ಬೆಳ್ತಂಗಡಿ ಉಪಸ್ಥಿತರಿದ್ದರು. ನಂತರ ಆಯೋಜಿಸಿದ ಸಭಾ ಕಾರ್ಯಾಕ್ರಮವು, ನಿರ್ದೇಶಕರಾದ ವಂ.ಫಾ.ವಿನೋದ್ ಮಸ್ಕರೇನಸ್ ರವರ ಅಧ್ಯಕ್ಷತೆಯಲ್ಲಿ ನೆರವೇರಿತು.

ವಂ.ಫಾ.ಜೋಸ್ ಆಯಾಂಕುಡಿ, ಧರ್ಮಗುರುಗಳು, ಸೈಂಟ್ ತೋಮಸ್ ಚರ್ಚ್ ಗಂಡಿಬಾಗಿಲು ಇವರು ಉದ್ಘಾಟಿಸಿ ಶುಭಾಶಯಗಳನ್ನು ಕೋರಿದರು.


ನಂತರ ಸೈಂಟ್ ಮಿಲಾಗ್ರಿಸ್ ಕೋಪರೇಟಿವ್ ಸೊಸೈಟಿ ಬೆಳ್ತಂಗಡಿ ಇಲ್ಲಿನ ಶಾಖಾ ವ್ಯವಸ್ಥಾಪಕ ಸುಮಂತ್ ಎಮ್ ರವರು ಹಾಗೂ ಅಲ್ಲಿನ ಸಿಬ್ಬಂದಿ ವೃಂದದವರು ಆಗಮಿಸಿ ಮಕ್ಕಳಿಗೆ ಸ್ವಾತಂತ್ರೋತ್ಸವದ ಅಂಗವಾಗಿ ಸೊಸೈಟಿಯ ವತಿಯಿಂದ ಶಾಲೆಯ ಎಲ್ಲಾ 150 ಮಕ್ಕಳಿಗೆ ಉಡುಗೊರೆಯನ್ನು ಹಾಗೂ ಸಿಹಿತಿಂಡಿಗಳನ್ನು ನೀಡಿದರು. ನಂತರ ಮಾತನಾಡಿದ ಅವರು ಸಂಸ್ಥೆಗೆ ಶುಭಹಾರೈಸಿ, ಸೈಂಟ್ ಮಿಲಾಗ್ರಿಸ್ ಕೋಪರೇಟಿವ್ ಸೊಸೈಟಿಯ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
. ಮುರಳಿ ಬಲಿಪ, ಖ್ಯಾತ ನ್ಯಾಯವಾದಿಗಳು ಬೆಳ್ತಂಗಡಿ ಇವರು ಮಾತನಾಡಿ ನಾವು ಇಂದು ಇಂತಹ ಸಮಾರಂಭಗಳನ್ನು ಮಾಡಬೇಕಾದರೆ ಅದಕ್ಕೆ ಮುಖ್ಯ ಕಾರಣಕರ್ತರು ನಮ್ಮ ದೇಶದ ಸೈನಿಕರು ಹಾಗೂ ಅವರು ನಮಗಾಗಿ ಮಾಡಿದ ತ್ಯಾಗ. ಸೈನಿಕರು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶಕ್ಕಾಗಿ ಮಾಡಿದ ಸೇವೆಯನ್ನು ಸ್ಮರಿಸಿ, ದಯಾ ಶಾಲೆಯು ಜಾತಿ, ಮತ ಭೇದವೆನ್ನದೆ ನಮ್ಮ ತಾಲೂಕಿನ ವಿಶೇಷ ಚೇತನ ಮಕ್ಕಳಿಗೆ ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದರು.


ನಂತರ ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ವಂ.ಫಾ.ವಿನೋದ್ ಮಸ್ಕರೇನಸ್ ರವರು ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿದ ಎಲ್ಲಾ ದಾನಿಗಳನ್ನು, ಸಂಘ ಸಂಸ್ಥೆಗಳನ್ನು ಸ್ಮರಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸ್ಥೆಯನ್ನು ಹಾಗೂ ಮಕ್ಕಳನ್ನು ಪ್ರೋತ್ಸಾಹಿಸಿದ ಎಲ್ಲಾ ಅತಿಥಿಗಣ್ಯರನ್ನು ಅಭಿವಂದಿಸಿದರು.


ಕಾರ್ಯಕ್ರಮದಲ್ಲಿ ದಯಾ ವಿಶೇಷ ಶಾಲೆಯ ಮಕ್ಕಳು ದೇಶ ಪ್ರೇಮವನ್ನು ಪ್ರತಿಬಿಂಬಿಸುವ ವಿವಿಧ ಹಾಡು, ಅಭಿನಯ, ನೃತ್ಯ, ಕಾರ್ಯಕ್ರಮಗಳನ್ನು ನೆರವೇರಿಸಿಕೊಟ್ಟರು. ಇಂದಿನ ಮಧ್ಯಾಹ್ನದ ವಿಶೇಷ ಭೋಜನವನ್ನು ಸೈಂಟ್ ತೋಮಸ್ ಚರ್ಚ್ ಗಂಡಿಬಾಗಿಲು ಇಲ್ಲಿನ ಸೈಂಟ್ ವಿನ್ಸೆಂಟ್ ಡಿ ಪೌಲ್ ಸೊಸೈಟಿಯ ವತಿಯಿಂದ ನೀಡಲಾಯಿತು.


ಕಾರ್ಯಕ್ರಮದಲ್ಲಿ ಲಯನ್ ವಸಂತ ಶೆಟ್ಟಿ ಶ್ರದ್ಧ ಪಾಸ್ಟ್ ರೀಜ್ಯನ್ ಚೇರಮಾನ್ ಬೆಳ್ತಂಗಡಿ, ಶಾಲಾ ಮಕ್ಕಳ ಪೋಷಕರ ಪ್ರತಿನಿಧಿಯಾಗಿ ತೋಮಸ್ ಮೇನಾಚೇರಿ, ಮಕ್ಕಳ ಪ್ರತಿನಿಧಿಯಾಗಿ ಕುಮಾರಿ ಮೇಘಾ ಡಿ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಮಿಸ್ ಮೆರಿನ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸೈಂಟ್ ತೋಮಸ್ ಚರ್ಚ್ ಗಂಡಿಬಾಗಿಲಿನ ಸಹ ಗುರುಗಳು ಫಾ. ವಿಲಿಯಂ, ಸೈಂಟ್ ವಿನ್ಸೆಂಟ್ ಡಿ ಪೌಲ್ ಸೊಸೈಟಿಯ ಸದಸ್ಯರು, ಸೈಂಟ್ ಮಿಲಾಗ್ರಿಸ್ ಕೋಪರೇಟಿವ್ ಸೊಸೈಟಿಯ ಸಿಬ್ಬಂದಿಗಳು, ಶಾಲಾ ಮಕ್ಕಳ ಪೋಷಕರು, ಸಿ.ಕೆ.ಎಸ್.ಕೆ ಸಿಬ್ಬಂದಿಗಳು, ದಯಾ ಶಾಲೆಯ ಸಿಬ್ಬಂದಿಗಳು ಹಾಗೂ ಮಕ್ಕಳು ಉಪಸ್ಥಿತರಿದ್ದರು.


ಶಿಕ್ಷಕಿ ಧನ್ಯಾ ಕೆ.ವಿ ಸ್ವಾಗತಿಸಿ, ಶಿಕ್ಷಕಿ ಚಿರಂಜೀವಿ ಯವರು ವಂದಿಸಿ, ಶಿಕ್ಷಕಿ ಐಶ್ವರ್ಯ ಹಾಗೂ ಜಯಮಣಿ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಮಡಂತ್ಯಾರು ಸಿಎ ಬ್ಯಾಂಕ್ ನೇತೃತ್ವದಲ್ಲಿ ದ.ಕ. ಜಿಲ್ಲಾ ಮಟ್ಟದ 72ನೇ ಸಹಕಾರ ಸಪ್ತಾಹಕ್ಕೆ ಚಾಲನೆ: ಮಡಂತ್ಯಾರು ನಗರದಲ್ಲಿ ಆದ್ದೂರಿಯ ಮೆರವಣಿಗೆ, ಸಾಧಕ 72 ಮಂದಿಗೆ ಕೃಷಿ ಸಿಂಧೂರ ಪ್ರಶಸ್ತಿ ಹಾಗೂ 86ಮಂದಿ ಸಾಧಕರಿಗೆ ಕ್ಷೀರ ರತ್ನ ಪ್ರಶಸ್ತಿ ಪ್ರದಾನ

Suddi Udaya

ಉಜಿರೆ :ಶ್ರೀ ಧ.ಮಂ. ವಸತಿ ಪ.ಪೂ. ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲುವ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂ.ಅ.ಸೆ. ಶಾಲೆಯ ವಿದ್ಯಾರ್ಥಿ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಪ್ರತಿಯೊರ್ವರ ಕನಸಿನ ಮನೆಗೆ ಸೌಂದರ್ಯದ ಸ್ಪರ್ಶ ನೀಡುವ ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ‘ಕನಸಿನ ಮನೆ’ ಸಂಸ್ಥೆಗೆ 35 ಸಂಭ್ರಮ

Suddi Udaya

ಕೊಯ್ಯೂರು: ಮಲೆಬೆಟ್ಟು, ಬಜಿಲ ಒಕ್ಕೂಟದ 38ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟಗಳ ಪದಗ್ರಹಣ

Suddi Udaya

ಉಜಿರೆ ಬದ್ರಿಯಾ ಜುಮ್ಮಾ ಮಸ್ಜಿದ್ ಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya
error: Content is protected !!