September 6, 2026
ಚಿತ್ರ ವರದಿವರದಿ

ಹೊಕ್ಕಾಡಿಗೋಳಿ: ಮುಹಿಯುದ್ದೀನ್ ಜುಮಾ ಮಸೀದಿ – ಸಿರಾಜುಲ್ ಹುದಾ ಮದರಸ ಸಿರಾಜುಲ್ ಹುದ ಯಂಗ್ ಮೆನ್ಸ್ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಹೊಕ್ಕಾಡಿಗೋಳಿ: ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಸಿರಾಜುಲ್ ಹುದಾ ಮದರಸ ಸಿರಾಜುಲ್ ಹುದ ಯಂಗ್ ಮೆನ್ಸ್ ಹೊಕ್ಕಡಿಗೋಳಿ ಇದರ ವತಿಯಿಂದ 79ನೇ ಸ್ವಾತಂತ್ರ್ಯ ದಿನಚರಣೆ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು. ಸಿರಾಜುಲ್ ಹುದಾ ಮದ್ರಸ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಮಾತ್ ಅಧ್ಯಕ್ಷರಾದ ಹೆಚ್ ಕೆ ಮುಹಮ್ಮದ್ ಶರೀಫ್ ರವರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಜಮಾತ್ ಕಾರ್ಯದರ್ಶಿ ಫಾರೂಕ್ ಹೊಕ್ಕಾಡಿಗೋಳಿ ಸ್ವಾಗತ ಭಾಷಣ ಮಾಡಿದರು. ಮಸೀದಿ ಖದೀಬರಾದ ಮುಹಮ್ಮದ್ ನಿಯಾಝ್ ಫೈಝಿ ದುಹಾದೊಂದಿಗೆ ಸ್ವಾತಂತ್ರದ ಬಗ್ಗೆ ಶುಭ ಸಂದೇಶ ನೀಡಿದರು. ಗೌರವಧ್ಯಕ್ಷ ಹೆಚ್ ಮಹಮ್ಮದ್ ಇಕ್ಬಾಲ್ ಸ್ವಾತಂತ್ರ್ಯಹೋರಾಟದ ಬಗ್ಗೆ ವಿವರಿಸಿದರು. ಮದರಸ ಮಕ್ಕಳು ಹಾಗೂ ಜಮಾತ್ ಬಾಂಧವರಿಗೆ ಮಸೀದಿ ವಿದ್ಯಾರ್ಥಿ ರಿಹಾನ್ ಅಹಮದ್ ಭಾವ ಸ್ವಾತಂತ್ರ್ಯದ ಹಾಡು ಹಾಡಿದರು.

ಈ ಕಾರ್ಯಕ್ರಮದಲ್ಲಿ ಸಿರಾಜುಲ್ ಹುದಾ ಯಂಗ್ ಮೆನ್ಸ್ ಅಧ್ಯಕ್ಷ ಹೆಚ್ ಕೆ ಲತೀಫ್, ಆಡಳಿತ ಕಮಿಟಿ ಸದಸ್ಯರು, ಯಂಗ್ ಮೆನ್ಸ್ ಸದಸ್ಯರು, ಜಮಾತ್ ಬಾಂಧವರು ಮತ್ತು ಮದ್ರಸ ಮಕ್ಕಳು ಉಪಸ್ಥಿತರಿದ್ದರು. ಸಿರಜುಲ್ ಹುದಾ ಯಂಗ್ ಮೆನ್ಸ್ ಕಾರ್ಯದರ್ಶಿ ಎಚ್ ಐ ರಫೀಕ್ ಧನ್ಯವಾದ ಸಮರ್ಪಿಸಿದರು. ರಾಷ್ಟ್ರ ಗೀತೆ ಹಾಡಿ ಸಿಹಿ ತಿಂಡಿ ವಿತರಣೆ ಮಾಡಿದ ನಂತರ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.

Related posts

ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಿಗೆ ಸ್ವಾಗತ

Suddi Udaya

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ.ಪೂ. ಕಾಲೇಜಿನಲ್ಲಿ ತರಗತಿ ಪ್ರತಿನಿಧಿಗಳ ಹಾಗೂ ಸ್ವಚ್ಛತಾ ಸೇನಾನಿಗಳ ಪದ ಪ್ರದಾನ ಸಮಾರಂಭ

Suddi Udaya

ಭಾರತೀಯ ಸೇನೆಗೆ ಆಯ್ಕೆಯಾದ ಮಿತ್ತಬಾಗಿಲು ಪುನೀತ್ ಕುಮಾರ್ ರಿಗೆ ಪಂಚಶ್ರೀ ಹಾರ್ಡ್ವೇರ್ ವತಿಯಿಂದ ಸನ್ಮಾನ

Suddi Udaya

ಎ.20: ಸಿಬಿಕೆ ಕಪ್-2025 ಹೊನಲು ಬೆಳಕಿನ ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಪಂದ್ಯಾಟ

Suddi Udaya

ಇಳಂತಿಲ ಗ್ರಾ. ಪಂ. ನ ಪ್ರಭಾರ ಅಧ್ಯಕ್ಷರಾಗಿ ಸವಿತಾ ಹೆಚ್. ಅಧಿಕಾರ ಸ್ವೀಕಾರ

Suddi Udaya

ಉಜಿರೆ ಮೆಸ್ಕಾಂ‍ನ ಸಹಾಯಕ ಇಂಜಿನಿಯರ್ ವಸಂತ ಟಿ. ರವರು ಮಂಗಳೂರು ವಿದ್ಯುತ್ ಉಪ ವಿಭಾಗದ ಸಹಾಯಕ ಇಂಜಿನಿಯರ್ ಹುದ್ದೆಗೆ ನಿಯೋಜನೆ

Suddi Udaya
error: Content is protected !!