September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಲಿಯೋ ಕ್ಲಬ್ ನ ಪದಗ್ರಹಣ ಸಮಾರಂಭ

ಬೆಳ್ತಂಗಡಿ : ಲಿಯೋ ಕ್ಲಬ್ ಬೆಳ್ತಂಗಡಿ ಇದರ ಪದಗ್ರಹಣ ಸಮಾರಂಭವು ಬಲಿಪ ರೆಸಾರ್ಟ್ ನಡದಲ್ಲಿ ಜರುಗಿತು.

ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ ಲಿಯೋ ಲಯನ್ ಡಾ. ರಂಜಿತಾ ಶೆಟ್ಟಿ ಯವರು ನೂತನ ತಂಡದ ಪದಗ್ರಹಣವನ್ನು ನೆರವೇರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಲಿಯೋ ಅಧ್ಯಕ್ಷೆ ಲಿಯೋ ಶ್ರೀನಿಧಿ ಶೆಟ್ಟಿಯವರು ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಮುಖ್ಯ ಅತಿಥಿಗಳಾಗಿ ಪ್ರಾಂತ್ಯಾಧ್ಯಕ್ಷ ಲಯನ್ ಜಗದೀಶ್ಚಂದ್ರ ಭಾಗವಹಿಸಿದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಮುರಳಿ ಬಲಿಪ, ಕಾರ್ಯದರ್ಶಿ ಲಯನ್ ಅಮಿತಾನಂದ ಹೆಗ್ಡೆ, ಕೋಶಾಧಿಕಾರಿ ಲಯನ್ ಸುಭಾಷಿನಿ, ಲಿಯೋ ಕ್ಲಬ್ ನ ಮಾರ್ಗದರ್ಶಕ ಲಯನ್ ಕೃಷ್ಣ ಕೆ ಆಚಾರ್ಯ, ಲಯನ್ ಡಾ.ದೇವಿ ಪ್ರಸಾದ್ ಬೊಲ್ಮಾ, ಕಳೆದ ಸಾಲಿನ ಕೋಶಾಧಿಕಾರಿ ಲಿಯೊ ಅಭಿಜ್ಞಾ ಬೊಲ್ಮಾ, ಪ್ರಸ್ತುತ ಸಾಲಿನ ಲಿಯೋ ಕ್ಲಬ್ ನ ಅಧ್ಯಕ್ಷೆ ಲಿಯೋ ಭಾಷಿಣಿ, ಕೋಶಾಧಿಕಾರಿ ಲಿಯೋ ಗ್ಲೆನ್ ಮೋನಿಸ್ ಉಪಸ್ಥಿತರಿದ್ದರು.

ನಿಕಟ ಪೂರ್ವ ಅಧ್ಯಕ್ಷ ಲಿಯೊ ಅಪ್ಸರ ಗೌಡ ಸ್ವಾಗತಿಸಿದರು. ಕಾರ್ಯದರ್ಶಿ ಲಿಯೋ ದೀಕ್ಷಿತ್ ಧನ್ಯವಾದ ನೀಡಿದರು.

Related posts

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಭೇಟಿ

Suddi Udaya

ಕುವೆಟ್ಟು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮಂಗಳೂರು ವಿವಿ ಸ್ನಾತಕ ಪದವಿ ಪರೀಕ್ಷೆ ಫಲಿತಾಂಶ: ಎಂ.ಎಸ್.ಡಬ್ಲ್ಯೂನಲ್ಲಿ ಅಜಿರದ ಯಶಸ್ವಿನಿಗೆ ಪ್ರಥಮ ರ‍್ಯಾಂಕ್

Suddi Udaya

ಆ.24: ಬೆಳ್ತಂಗಡಿ ತೋಟಗಾರಿಕೆ ಇಲಾಖೆ ವತಿಯಿಂದ ಬಂದಾರು ಹಾಗೂ ಮೊಗ್ರು ಗ್ರಾಮದ ರೈತರಿಗೆ ಅಡಿಕೆ ಎಲೆಚುಕ್ಕೆ ರೋಗ ಹಾಗೂ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ

Suddi Udaya

ತೆಕ್ಕಾರು: ಗಾಳಿ ಮಳೆಗೆ ಅಡಿಕೆ ಗಿಡ ಹಾಗೂ ಮನೆಗೆ ಮರ ಬಿದ್ದು ಹಾನಿ

Suddi Udaya

ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿಗೆ ಬಂದಾರಿನ ಚಂದ್ರಹಾಸ ಕುಂಬಾರ ಆಯ್ಕೆ

Suddi Udaya
error: Content is protected !!