September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್ ಡಿ ಎಂ ಪಪೂ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂವಾದ

ಉಜಿರೆ: ವಿದ್ಯಾರ್ಥಿಗಳು ಮೊದಲು ತಮ್ಮ ಮಾರ್ಗವನ್ನು ತಿಳಿಯಬೇಕು. ತಮಗೆ ಇಷ್ಟವಾದ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಆಗ ನಾವು ಜೀವನದಲ್ಲಿ ಸಾರ್ಥಕತೆ ಕಾಣಬಹುದು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಅಮೃತ್ ಹಾಗೂ ಪರೀಕ್ಷಿತ್ ಗೋಖಲೆ ಹೇಳಿದರು.

ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಆಯೋಜಿಸಿದ ಹಿರಿಯ ವಿದ್ಯಾರ್ಥಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ದ್ವಿತೀಯ ವಿಜ್ಞಾನದ ತರಗತಿಯಲ್ಲಿ ಅಮೃತ್ ಅವರು ಮೂಲ ವಿಜ್ಞಾನದ ವಿವಿಧ ಅವಕಾಶಗಳ ಬಗ್ಗೆ ಮಾತನಾಡಿದರು.
ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇದರ ಪ್ರಧಾನ ಸಂಯೋಜಕಿ ಅಂಜನಾ ಸ್ವಾಗತಿಸಿ , ಸಂಸ್ಕೃತ ಸಂಘದ ಉಪಾಧ್ಯಕ್ಷ ಯಶಸ್ವಿ ವಂದಿಸಿದರು . ಪ್ರಧಾನ ಕಾರ್ಯದರ್ಶಿ ಪ್ರಸನ್ನಾ ನಿರೂಪಿಸಿದರು.

ದ್ವಿತೀಯ ವಾಣಿಜ್ಯಶಾಸ್ತ್ರ ಹಾಗೂ ಕಲಾ ತರಗತಿಯಲ್ಲಿ ಪರೀಕ್ಷಿತ್ ಗೋಖಲೆ ಅವರು ವಾಣಿಜ್ಯಶಾಸ್ತ್ರದ ವಿವಿಧ ಅವಕಾಶಗಳ ಬಗ್ಗೆ ಮಾತನಾಡಿದರು.
ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇದರ ಸಹ ಸಂಯೋಜಕಿ ಶ್ರೀಪೂರ್ಣಾ ನಿರೂಪಿಸಿದರು. ಧರೆಶ್ ಸ್ವಾಗತಿಸಿ , ಸಿರಿ .ಜಿ. ಗೌಡ ವಂದಿಸಿದರು .

Related posts

ವೇಣೂರು: ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ ನಿರಂಜನ್ ಕೆ.ಎಸ್, ಕಾರ್ಯದರ್ಶಿಯಾಗಿ ದಯಾನಂದ ಭಂಡಾರಿ ಆಯ್ಕೆ

Suddi Udaya

ಮದ್ದಡ್ಕ ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಮುಸ್ತಾಕ್ ಅನುಮಾನಸ್ಪದ ಸಾವು ಪ್ರಕರಣ: ಪ್ರಕರಣಕ್ಕೆ ತಿರುವು ಪಡೆದ ಮತ್ತೊಂದು ಪ್ರಕರಣ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪರಿಸರದಲ್ಲಿ ಶ್ರಮದಾನ

Suddi Udaya

ಮುಂಡಾಜೆ: ಕೀರ್ತನಾ ಕಲಾತಂಡದಿಂದ ಕನಕ ಜಯಂತಿ ಆಚರಣೆ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘಕ್ಕೆ ತೆಲಂಗಾಣ ಸರಕಾರದ ಸಚಿವ ಪೊನ್ನಂ ಪ್ರಭಾಕರ್ ಭೇಟಿ

Suddi Udaya
error: Content is protected !!