September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿ

ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಗಣೇಶ ಚತುರ್ಥಿ ದಿನದಂದು ಸೇವಾ ರಶೀದಿಗಳಿಂದ ಒಟ್ಟು ರೂ. 16,62,947 ಹಣ ಸಂಗ್ರಹ : 8000 ಭಕ್ತರಿಂದ ಅನ್ನ ಪ್ರಸಾದ ಸ್ವೀಕಾರ

ಕೊಕ್ಕಡ: ಗಣೇಶ ಚತುರ್ಥಿ ದಿನದಂದು ಬಯಲು ಆಲಯ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸೇವಾ ರಶೀದಿಗಳಿಂದ ಒಟ್ಟು ರೂ. 16,62,947 ಹಣ ಸಂಗ್ರಹವಾಗಿದೆ ಎಂದು ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಮಾಹಿತಿ ನೀಡಿದ್ದಾರೆ.

ಅವಲಕ್ಕಿ ಪಂಚಕಜ್ಜಾಯದ ರಶೀದಿ ಸಂಖ್ಯೆಗಳು 11455, ಅಪ್ಪ ಪ್ರಸಾದ 11215, ಕಡ್ಲೆ ಪಂಚಕಜ್ಜಾಯ 3117, ಲಾಡು ಪ್ರಸಾದ 4635, ಮೋದಕ ಪ್ರಸಾದ 5004 ಮತ್ತು ಗಣಹೋಮ ವಿಶೇಷ ಸೇವೆಗೆಂದು 25 ರಶೀದಿಗಳನ್ನು ಮಾಡಲಾಗಿದೆ.

ಚತುರ್ಥಿ ದಿನದಂದು ದೇಗುಲದಲ್ಲಿ ಅಂದಾಜು 8000 ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದ್ದಾರೆ. ಗಂಟೆ ಗಣಪತಿ ಎಂದೇ ಪ್ರಸಿದ್ಧಿಯಾಗಿರುವ ಸೌತಡ್ಕ ದೇವಸ್ಥಾನಕ್ಕೆ ಚತುರ್ಥಿ ದಿನದಂದು ಬೇರೆ ಬೇರೆ ತಾಲೂಕು, ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು.

Related posts

ಕಿಲ್ಲೂರು ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ಗೆ ರೂ. 25 ಲಕ್ಷ ಅನುದಾನ ಮಂಜೂರು: ಪ್ರತಾಪ್ ಸಿಂಹ ನಾಯಕ್

Suddi Udaya

ಬೆಳ್ತಂಗಡಿ: ಸ್ಥಗಿತಗೊಂಡ ಬಸ್ ನಿಲ್ದಾಣದ ಕಾಮಗಾರಿ; ಶಾಸಕ ಹರೀಶ್ ಪೂಂಜರಿಂದ‌ ಅಧಿಕಾರಿಗಳೊಂದಿಗೆ ಸಭೆ

Suddi Udaya

ಮುಂಡಾಜೆ: ಮೈಸೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟ ಸಮಾರೋಪ 

Suddi Udaya

ನಡ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ರೂ.1 ಕೋಟಿ ಅನುದಾನ ಮಂಜೂರು :ರಕ್ಷಿತ್ ಶಿವರಾಂ

Suddi Udaya

ಪಿಯುಸಿ ಫಲಿತಾಂಶ: ಎಸ್‌ಡಿಎಂ ಪಿಯು ಕಾಲೇಜಿಗೆ ಶೇ.98.78 ಫಲಿತಾಂಶ

Suddi Udaya

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ -1 ಆಗಿ ಸಮರ್ಥ ಆರ್ ಗಾಣಿಗೇರಾ ನೇಮಕ

Suddi Udaya
error: Content is protected !!