September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ವಲಯದ ಕಾನರ್ಪ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

ಮುಂಡಾಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಮುಂಡಾಜೆ ವಲಯದ ಕಾನರ್ಪ ಕಾರ್ಯಕ್ಷೇತ್ರದ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮುಂಡಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ತಾಲೂಕಿನ ಯೋಚನಾಧಿಕಾರಿ ಯಶೋಧರ ಜ್ಞಾನ ವಿಕಾಸ ಕೇಂದ್ರದ ಹುಟ್ಟು ಹಿನ್ನಲೆ ಮಹಿಳೆಯರಲ್ಲಾದ ಪರಿವರ್ತನೆ ಬಗ್ಗೆ ತಿಳಿಸುತ್ತಾ ಕೇಂದ್ರದಲ್ಲಿ ಉತ್ತಮ ಮಾಹಿತಿಗಳನ್ನೂ ನೀಡಲಾಗುತ್ತಿದ್ದು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ತಾಲೂಕಿನಲ್ಲಿ 25 ಚಾಲ್ತಿ ಕೇಂದ್ರಗಳಿಗೆ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದು ಪ್ರಭುದ್ಧತೆಯನ್ನು ಹೊಂದಿದ ಸದಸ್ಯರಿಗೆ ಪ್ರಬುದ್ಧತೆ ನೀಡಿ ಹೊಸ ಸಂಘಗಳಿಗೆ ಹೊಸ ಕೇಂದ್ರ ಮಾಡುವರೇ ಅವಕಾಶವನ್ನು ಕಲ್ಪಿಸಲಾಗುತ್ತಿದೆ ಎಂದರು .

ಯಂಗ್ ಚಾಲೆಂಜರ್ಸ್ ಕ್ಲಬ್ ಸಂಚಾಲಕರು ಹಾಗೂ ತಾಲೂಕು ಜನಜಾಗೃತಿ ವೇದಿಕೆ ಸದಸ್ಯರಾದ ನಾಮದೇವ್ ರವರು ಅವಕಾಶಗಳನ್ನು ಬಳಸಿಕೊಂಡಾಗ ಸಾಧನೆ ಸಾಧ್ಯ ಈ ದಿನ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಹಮ್ಮಿಕೊಂಡಿದ್ದು ಕ್ಷೇತ್ರದ ಯಾವುದೇ ಕಾರ್ಯಕ್ರಮಕ್ಕೂ ನಾವು ಜೊತೆಯಾಗಿರುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ್ ಬಂಗೇರ, ಶ್ರೀಧರ ಜೈನ್, ಒಕ್ಕೂಟ ಅಧ್ಯಕ್ಷ ಸತೀಶ್ ನಾಯ್ಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾನರ್ಪ ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ಕಡಿರುದ್ಯಾವರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರತ್ನಾವತಿಯವರು ವಹಿಸಿದ್ದರು. ಮೇಲ್ವಿಚಾರಕರಾದ ಜನಾರ್ದನ್, ಸೇವಾಪ್ರತಿನಿಧಿ ಲೀಲಾವತಿ ಉಪಸ್ಥಿತರಿದ್ದರು.

ಸಮನ್ವಯಧಿಕಾರಿ ಮಧುರಾ ವಸಂತ್ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಕೇಂದ್ರದ ಸದಸ್ಯರಾದ ಪುಷ್ಪವತಿ ಸ್ವಾಗತಿಸಿ, ರಾಧಾ ವಂದಿಸಿದರು. ಜ್ಞಾನವಿಕಾಸ ಸಂಯೋಜಕ ಶರ್ಮಿಳ ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಸದಸ್ಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು.

Related posts

ನೆರಿಯ: ಗಂಡಿಬಾಗಿಲು ನಿವಾಸಿ ಗಂಗಯ್ಯ ಗೌಡ ನಿಧನ

Suddi Udaya

ಜ.13-14: ರೆಖ್ಯ ಗುಡ್ರಾದಿ ಶ್ರೀ ಗುಡ್ರಾಮಲ್ಲೇಶ್ವರ ದೇವಸ್ಥಾನದ ವರ್ಷಾವಧಿ ಉತ್ಸವ

Suddi Udaya

ವಿಜಯ ರತ್ನ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಗೆ ಒಲಿದ ವಿದ್ಯಾಸಿರಿ ಗೌರವ

Suddi Udaya

ಅರುವ ‘ನಮ ಮಾತೆರ್ಲ ಒಂಜೇ ‘ ಕಲಾ ತಂಡದ ಪದಾಧಿಕಾರಿಗಳ ಆಯ್ಕೆ

Suddi Udaya

ಮಡಂತ್ಯಾರು ಸೊಸೈಟಿಯಿಂದ ಅಧ್ಯಕ್ಷ ಜೋಯೇಲ್ ಮೆಂಡೋನ್ಸಾ ಅವರ ನೇತೃತ್ವದಲ್ಲಿ ಕಚ್ಚಾರಸ್ತೆಗಳ ದುರಸ್ತಿ: ಸಹಕಾರಿಯಿಂದ ಸಮೃದ್ಧಿ ಆಶಯದೊಂದಿಗೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಜ್ಜೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ರವರಿಂದ ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!