September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ತೋಟತ್ತಾಡಿ ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ನಲ್ಲಿ ಗುರುಜಯಂತಿ ಆಚರಣೆ

ತೋಟತ್ತಾಡಿ: ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ತೋಟತ್ತಾಡಿಯಲ್ಲಿ ಸೆ.07 ರಂದು ಶ್ರೀ ನಾರಾಯಣ ಗುರುಗಳ 171ನೇ ವರ್ಷದ ಗುರುಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಬೆಳಿಗ್ಗೆ ಗುರುಪೂಜೆ ಬಳಿಕ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಬಾಲಕೃಷ್ಣ ಸೌತಡ್ಕ ಉದ್ಘಾಟನೆ ಮಾಡಿದರು.

ಸಂಘದ ಸದಸ್ಯರ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ತೆರ್ಗಡೆಯಾದ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಆಟೋಟ ಸ್ಪರ್ಧೆ ಯ ಬಹುಮಾನವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸುರೇಶ್. ಎಮ್.ಎನ್., ಯೂನಿಯನ್ ಕೌಸಿಲರಾದ ಉನಿಕೃಷ್ಣನ್, ಉಪಾಧ್ಯಕ್ಷ ಶಿವರಾಜನ್, ಗೌರವ ಅಧ್ಯಕ್ಷ ಚಿದಾನಂದ, ಮಹಿಳಾ ಸಂಘ ಅಧ್ಯಕ್ಷೆ ಸಿಂಧು ಅಜಿತ್, ಯೂತ್ ಮೂಮೆಂಟ್ ಅಧ್ಯಕ್ಷ ಸುಧೀರ್ ಹಾಗೂ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮನೋಜ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಜನ ಭಾಗಿಯಾಗಿ 20 ಬಗೆಯ ಪದಾರ್ಥಗಳು ಹಾಗೂ ಪಾಯಸದೊಂದಿಗೆ ಚದಯ ಸದ್ಯ ಸವಿದರು.

Related posts

ಒಡಿಶಾದ ರೈಲು ದುರಂತದಲ್ಲಿ ಪಾರಾದ ವೇಣೂರಿನ ಪ್ರಯಾಣಿಕರು

Suddi Udaya

ಎ.16-21: ಬೆಳ್ತಂಗಡಿ ಮಹಿಳಾ ವೃಂದದ ಆಶ್ರಯದಲ್ಲಿ ಝೇಂಕಾರ ಬೇಸಿಗೆ ಶಿಬಿರ

Suddi Udaya

ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ: ತೇಜಲ್ ಕೆ.ಆರ್ ಮುಂಡಾಜೆ ರವರಿಗೆ ಬೆಳ್ಳಿಯ ಪದಕ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ

Suddi Udaya

ಶಿರ್ಲಾಲು: ಶ್ರೀ ರಾಮ ದೇವರ ಪ್ರತಿಷ್ಠೆ ಮತ್ತು ಲೋಕಾರ್ಪಣೆ: ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಭಜನಾ ಕಾರ್ಯಕ್ರಮ

Suddi Udaya
error: Content is protected !!