23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ: ಸಂಘವು ರೂ. 32.31 ಕೋಟಿ ವ್ಯವಹಾರ, ರೂ. 49.24 ಲಕ್ಷ ನಿವ್ವಳ ಲಾಭ

ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆಯು ಸೆ. 7ರಂದು ಕೃಷಿ ಪತ್ತಿನ ಸಹಕಾರಿ ಸಂಘದ ಕನಸು ರೈತ ಸಭಾಭವನದಲ್ಲಿ ಜರುಗಿತು.

ಸಂಘದ ಅಧ್ಯಕ್ಷ ಪಿ ಜಯರಾಜ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು 32,31,82,518.48 ವ್ಯವಹಾರ ನಡೆಸಿ, ವಾರ್ಷಿಕ ಹಾಲು ಖರೀದಿ 18,30,216.1 ಲೀಟರ್ , ಒಟ್ಟು ಮೊತ್ತ 6,60,57212, ರೂ. 49,24,391.64 ನಿವ್ವಳ ಲಾಭ, ರೂ. 27,47,646 ಉತ್ಪಾದಕರಿಗೆ ಬೋನಸ್ ನೀಡಿದೆ ಎಂದರು.

ಸುಮಾರು ರೂ. 88000 ವನ್ನು 22 ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮೂಲಕ ನೀಡಲಾಯಿತು. ಸದಸ್ಯರ ಕ್ಷೇಮನಿಧಿಯಿಂದ ಸುಮಾರು ರೂ. 95000 ಗಳನ್ನು ಆರ್ಥಿಕ ಸಹಾಯಧನ ನೀಡಲಾಯಿತು.

ಸಂಘದ ಮಾಜಿ ನಿರ್ದೇಶಕ ಸೇಸಪ್ಪ ಸಾಲಿಯಾನ್ ರವರು ಹಾಲಿಗೂ ಪಶು ಆಹಾರದ ದರಕ್ಕೂ ವಿಪರೀತ ಏರುಪೇರು ಇದ್ದು ಕನಿಷ್ಢ ರೂ. 50 ಪ್ರತಿ ಲೀಟರ್ ಗೆ ದೊರೆಯುವ ಬಗ್ಗೆ ಒಕ್ಕೂಟ, ಕರ್ನಾಟಕ ಹಾಲು ಮಹಾಮಂಡಳಿ ಪತ್ರ ಬರೆಯುವಂತೆ ಮಹಾಸಭೆಯಲ್ಲಿ ನಿರ್ಣಹಿಸಬೇಕೆಂದು ಒತ್ತಾಯಿಸಿದರು. ಮಹಾಸಭೆಗೆ ಆಗಮಿಸಿದ ವಾರ್ಷಿಕ ಅವಧಿಯಲ್ಲಿ ಹಾಲು ಪೂರೈಸಿದ ಎಲ್ಲಾ ಸದಸ್ಯರಿಗೆ ಕುಕ್ಕರ್ ನೀಡಲಾಯಿತು. ಹಾಗೂ ಅತೀ ಹೆಚ್ಚು ಹಾಲು ಪೂರೈಸಿದ 10 ಜನ ಸದಸ್ಯರು ಹಾಗೂ 10000 ಲೀಟರ್ ಗಿಂತ ಅಧಿಕ ಹಾಲು ಪೂರೈಸಿದ 25ಜನ ಸದಸ್ಯರನ್ನು ಗೌರವಿಸಲಾಯಿತು.

ಈ ವೇಳೆ ಮುಖ್ಯಮಂತ್ರಿ ಪದಕ ಪಡೆದ ಎಂ ಪ್ರವೀಣ್, ಏಕಾಂಗಿಯಾಗಿ 2-3 ದನಗಳನ್ನು ಸಾಕಿಕೊಂಡು ಹೈನುಗಾರಿಕೆ ನಡೆಸುತ್ತಿರುವ ಶ್ರೀಮತಿ ಸರಸ್ವತಿ ಹಾಗೂ ಹೇರಾಜೆ ಸರಕಾರಿ ಶಾಲೆಯನ್ನು ಆರಂಭಿಸಿದ ಅಬ್ದುಲ್ ರಹಿಮಾನ್ ಪಿ.ಕೆ ರವರನ್ನು ಸನ್ಮಾನಿಸಲಾಯಿತು.

ಶ್ರೀಮತಿ ಪ್ರಮೀಳಾ ಪ್ರಾರ್ಥಿಸಿದರು. ನಿರ್ದೇಶಕ ಜನಾರ್ದನ ಗೌಡ ಸ್ವಾಗತಿಸಿದರು. ಒಕ್ಕೂಟದ ಅನುದಾನಗಳ ಬಗ್ಗೆ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ವಿವರಿಸಿದರು. ಕಾರ್ಯದರ್ಶಿ ಜಯರಾಜ್ ನಿರೂಪಿಸಿ, ನಿರ್ದೇಶಕ ಪಿ ಕೃಷ್ಣಪ್ಪ ವಂದಿಸಿದರು,

Related posts

ಅತ್ಯಂತ ಕುತೂಹಲ ಕೆರಳಿಸಿದ ಮಡಂತ್ಯಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಚುನಾವಣೆ : ಅಧ್ಯಕ್ಷರಾಗಿ ಜೋಯಲ್ ಗಾಡ್ಫಿ ಮೆಂಡೋನ್ಸಾ, ಹಾಗೂ ಉಪಾಧ್ಯಕ್ಷರಾಗಿ ಕಾಂತಪ್ಪ ಗೌಡ ಆಯ್ಕೆ

Suddi Udaya

ಮುಂಡಾಜೆ ಯುವ ವಾಹಿನಿ ಸಂಚಲನಾ ಸಮಿತಿ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಗಡಾಯಿಕಲ್ಲಿನಲ್ಲಿ ಕಾಣಿಸಿಕೊಂಡಬೆಂಕಿ

Suddi Udaya

ರಾಜ್ಯದ ರೈತರ, ಮಠ ಮಂದಿರಗಳ ಜಾಗದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ದಾಖಲು ಮಾಡಿರುವುದನ್ನು ವಿರೋಧಿಸಿ ಬಿಜೆಪಿ ಮಂಡಲದ ವತಿಯಿಂದ ಆಡಳಿತ ಸೌಧದ ಎದುರು ಬೃಹತ್ ಪ್ರತಿಭಟನೆ

Suddi Udaya

ಬೆಳ್ತಂಗಡಿ : ಹುಣ್ಸೆಕಟ್ಟೆ ಕ್ರಾಸ್ ಗೇರುಕಟ್ಟೆ ಪರಪ್ಪು, ಕೊಯ್ಯೂರು ಸರ್ಕಾರಿ ಬಸ್ ಸಂಚಾರ ಪ್ರಾರಂಭ

Suddi Udaya

ಬೆಳ್ತಂಗಡಿ ಮಂಜುಶ್ರೀ ಜೆಸಿಐ ವತಿಯಿಂದ ಜೂನಿಯರ್ ಜೇಸಿ ಪದಗ್ರಹಣ ಹಾಗೂ ಯೂತ್ ಡೇ ಕಾರ್ಯಕ್ರಮ

Suddi Udaya
error: Content is protected !!