September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಪೆರಿಂಜೆ ಮದರಸದಲ್ಲಿ ಇಶಲ್ ಮದೀನ ಕಾರ್ಯಕ್ರಮ

ವೇಣೂರು: ಪೆರಿಂಜೆಯ ಮುನವ್ವರುಲ್ ಇಸ್ಲಾಮಿಕ್ ಮದರಸದಲ್ಲಿ ಮಿಲಾದ್ ಪ್ರಯುಕ್ತ ಮದರಸ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆ ‘ಇಶಲ್ ಮದೀನ’ ಕಾರ್ಯಕ್ರಮವು ಮದರಸ ಸಮಿತಿಯ ಅಧ್ಯಕ್ಷ ಅಶ್ರಫ್ ಗಾಂಧಿನಗರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮದರಸದ ಧರ್ಮಗುರುಗಳಾದ ಅಶ್ರಫ್ ಅಲ್ ಅಝಹರಿ ಸುಳ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಡ್ಡಂದಡ್ಕ ಮಸೀದಿಯ ಖತೀಬರಾದ ಖಲಂದರ್ ಶಾಫಿ ಬಾಖವಿ ಖಾಮಿಲ್ ಮನ್ನಾನಿ ಕರಾಯ ಅವರು ಮಿಲಾದ್ ಸಂದೇಶ ನೀಡಿದರು.

ಪಡ್ಡಂದಡ್ಕ ಮಸೀದಿ ಕಮಿಟಿಯ ಅಧ್ಯಕ್ಷ ಕೆ. ಇಸ್ಮಾಯಿಲ್ ಪೆರಿಂಜೆ, ಪತ್ರಕರ್ತ ಹೆಚ್. ಮುಹಮ್ಮದ್ ವೇಣೂರು, ಮದರಸ ಸಮಿತಿಯ ಗೌರವಾಧ್ಯಕ್ಷ ಯಾಕೂಬ್ ಪೆರಿಂಜೆ, ಮುಹಮ್ಮದ್ ಶಾಫಿ ಕಿರೋಡಿ, ನಝೀರ್ ಪೆರಿಂಜೆ, ಪಿ.ವಿ.ಅಬ್ದುಲ್ ರಹ್ಮಾನ್ ಪೆರಿಂಜೆ ಮುಂತಾದವರು ಈ ಸಂದರ್ಭದಲ್ಲಿ ಭಾಗವಹಿಸಿ ಶುಭಹಾರೈಸಿದರು. ‌

ಪಡ್ಡಂದಡ್ಕ ಮಸೀದಿ ಕಮಿಟಿಯ ಪ್ರಧಾನ ಕಾರ್ಯದರ್ಶಿ ರಫೀಕ್, ಜೊತೆ ಕಾರ್ಯದರ್ಶಿ ಅಬ್ದುಸ್ಸಲಾಂ ಶಾಂತಿನಗರ, ಲೆಕ್ಕ ಪರಿಶೋಧಕ ಇದ್ರಿಸ್ ಪೂಲಬೆ, ಸದಸ್ಯ ಅಶ್ರಫ್ ಕಿರೋಡಿ, ಶಾಂತಿನಗರ ಮದರಸ ಸಮಿತಿಯ ಅಧ್ಯಕ್ಷ ಪಿ.ಹೆಚ್. ಅಶ್ರಫ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತೌಫೀಕ್ ಸ್ವಾಗತಿಸಿ ಮಿಶಾಲ್ ವಂದಿಸಿದರು. ಹಾಫಿಲ್ ಕಾರ್ಯಕ್ರಮ ನಿರೂಪಿಸಿದರು.

Related posts

ರೈತರ, ಯುವಜನರ, ಬಡವರ, ಮಧ್ಯಮ ವರ್ಗದವರ ವಿರೋಧಿ ಬಜೆಟ್: ರಕ್ಷಿತ್ ಶಿವರಾಂ

Suddi Udaya

ರೆಖ್ಯ: ಸಾರ್ವಜನಿಕ ಶ್ರೀ ಕೃಷ್ಣಾ ಜನ್ಮಾಷ್ಟಮಿ ಆಚರಣಾ ಸಮಿತಿ ರಚನೆ

Suddi Udaya

ಕಳೆಂಜ ನಂದಗೋಕುಲ ಗೋಶಾಲೆಗೆ ಉಜಿರೆ ಕಿರಣ್ ರಾವ್ ಕುಟುಂಬಸ್ಥರಿಂದ ರೂ.5ಲಕ್ಷ ದೇಣಿಗೆ

Suddi Udaya

ಉರುವಾಲು: ಕುಪ್ಪೆಟ್ಟಿ ರಸ್ತೆಯಲ್ಲಿ ಬೃಹತ್ ಹೊಂಡ: ಸ್ಥಳೀಯರಿಂದ ರಸ್ತೆಯ ಮಧ್ಯೆ ಕೆಂಪು ವಸ್ತ್ರವಿಟ್ಟು ಎಚ್ಚರಿಕೆಯ ಸೂಚನೆ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವ: ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಭೇಟಿ

Suddi Udaya

ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ.12ರಷ್ಟು ಡಿವಿಡೆಂಡ್ ಘೋಷಣೆ

Suddi Udaya
error: Content is protected !!