July 23, 2026
ವರದಿ

ಮಾಲಾಡಿ: ಅಮೃತ ಸಂಜೀವಿನಿ ಒಕ್ಕೂಟದ ಮಹಾಸಭೆ

ಮಾಲಾಡಿ: ಅಮೃತ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಮಾಲಾಡಿ ಇದರ ಮಹಾಸಭೆಯು ಸೆ.20ದಂದು ಪಂಚಾಯತ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷೆ ರೂಪ ಇವರ ಅದ್ಯಕ್ಷತೆಯಲ್ಲಿ ನಡೆಯಿತು.

lcrp ಶಕುಂತಲಾ ಇವರ ಪ್ರಾರ್ಥನೆ ಮೂಲಕ ಮಹಾಸಭೆಯನ್ನು ಪ್ರಾರಂಭಿಸಿದರು. ಕೃಷಿ ಸಖಿ ಪಲ್ಲವಿ ಎಲ್ಲರನ್ನು ಸ್ವಾಗತಿಸಿದರು. ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಸೆಲೆಸ್ಟ್ರಿನ್ ಡಿಸೋಜ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ. ಸಂಜೀವಿನಿ ಸದಸ್ಯರು ಸ್ವ ಉದ್ಯೋಗ ಮಾಡುವುದರ ಬಗ್ಗೆ ಮತ್ತು ಪ್ರೇರಣದಾಯಕ ಮಾತುಗಳನ್ನಾಡಿದರು. Mbk ಯಾದ ಶಾರದ ವಾರ್ಷಿಕ ವರದಿ ಹಾಗೂ ಒಕ್ಕೂಟದ ಕಾರ್ಯದರ್ಶಿ ಸುನಿತಾ ಐತಲ್ ಖರ್ಚು -ವೆಚ್ಚ ಹಾಗೂ ಆಸ್ತಿ ಜವಾಬ್ದಾರಿಯನ್ನು ಮಂಡಿಸಿದರು ನಂತರ ಚಪ್ಪಾಳೆಯ ಮೂಲಕ ವರದಿಯನ್ನು ಅನುಮೋದಿಸಲಾಯಿತು.

ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರತಿಮಾ ಮೇಡಂ ಅವರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM)ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಸಂಜೀವಿನಿ ಯೋಜನೆಯ ದ್ಯೇಯೋದೇಶ ದ ಬಗ್ಗೆ ಜೀವನೋಪಾಯ ಚಟುವಟಿಕೆ ಬಗ್ಗೆ ಹಾಗೂ ಇತರ ಹಲವಾರು ವಿಷಯಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು. ಸಮುದಾಯದ ಆರೋಗ್ಯ ಅಧಿಕಾರಿಗಳಾದ ಜಯಶ್ರೀ ಮತ್ತು ಐಶ್ವರ್ಯ ಇವರು ಗಳು ಆರೋಗ್ಯ ಮತ್ತು ಪೊಸಣ್ ಅಭಿಯಾನ (FNHW) ಬಗ್ಗೆ ಸದಸ್ಯರಿಗೆ ಮಾಹಿತಿಯನ್ನು ನೀಡಿದರು. ಮಾದಕ ವ್ಯಸನ ಮುಕ್ತ ಪ್ರತಿಜ್ಞೆ ಯನ್ನು mbk ಶಾರದ ಇವರು ಮಾಡಿದರು.

ಸಂಪೂರ್ಣ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಛತಾ ಹೀ ಸೇವಾ ,ಈ ಅಯೋಜನೇಯಳಲ್ಲಿ ಗ್ರಾಮ ಪಂಚಾಯತ್ ನ ಸದಸ್ಯರಾದ ತುಳಸಿ ರವರು ,ಮಾತಾನಾಡಿ ಸಮುದಾಯದಲ್ಲಿ ಸ್ವಚ್ಛತೆಯನ್ನು ಬಲಪಡಿಸಲು ಘನತ್ಯಾಜ್ಯಗಳನ್ನು ಹೊರಗೇ ಬಿಸಾಡದೆ ಕಸ ವಿಲೇವರಿ ವಾಹನಕ್ಕೆ ಹಾಕುದಾರ ಬಗ್ಗೆ ಸ್ವಚ್ಛತೆ ಕಾಪಡುವುದು ಕರ್ತವ್ಯ. ಸಮುದಾಯದ ಭಾಗವಹಿಸುವಿಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ಅಭಿಯಾನದ ಪ್ರತಿಜ್ಞೆ ಯನ್ನು ಲೆಕ್ಕ ಸಹಾಯಕರಾದ ಗೀತಾ ಮೇಡಂ ಮಾಡುವುದರ ಮೂಲಕ ಮಹಾಸಬೆಯಲ್ಲಿ ಯಶಸ್ವಿಗೊಳಿಸಲಾಯಿತು.

ಪ್ರಧಾನಮಂತ್ರಿಯವರ ಹುಟ್ಟುಹಬ್ಬದ ಪ್ರಯುಕ್ತ, ವೈಕ್ತಿಕವಾಗಿ ಗ್ರಾಮ ಪಂಚಾಯತ್ ನ ಸದಸ್ಯರಾದ ತುಳಸಿ ಬಿ ಮತ್ತು ಜಯಂತಿ ಇವರುಗಳು ಅಮೃತ ಸಂಜೀವಿನಿ ಒಕ್ಕೂಟಕ್ಕೆ ಫ್ಯಾನ್ ನ್ನು ಕೊಡುಯಾಗಿ ನೀಡಿದರು. ಬಿ ಸಿ ಸಖಿ ಸವಿತಾ ಧನ್ಯವಾದ ನೀಡಿದರು. ಶ್ರೀ ವಿನಾಯಕ ಸಂಜೀವಿನಿ ಸಂಘ ದ ಸದಸ್ಯರಾದ ಶ್ರೀಮತಿ ತುಳಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ರಾಷ್ಟ್ರಗೀತೆಯೊಂದಿಗೆ ಸಭಾ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.

Related posts

ಬೆಳ್ತಂಗಡಿ ವಕೀಲರ ಸಂಘದ ನಿಯೋಗದಿಂದ ಹೈಕೋರ್ಟ್ ರಿಜಿಸ್ಟ್ರಾರ್ ರಾಧಾ ರವರ ಭೇಟಿ; ನೂತನ ನ್ಯಾಯಾಲಯ ಸಂಕೀರ್ಣ ಶಂಕು ಸ್ಥಾಪನೆಯ ರೂಪುರೇಷೆಗಳ ಬಗ್ಗೆ ಚರ್ಚೆ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ

Suddi Udaya

ಬೆಳ್ತಂಗಡಿ ಸರ್ಕಾರಿ ಮಾದರಿ ಹಿ.ಪ್ರಾ ಶಾಲೆಯಲ್ಲಿ ಸಂಭ್ರಮ ಶನಿವಾರಕ್ಕೆ ಚಾಲನೆ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತು ಹಾಕಿದ ದೂರು ಪ್ರಕರಣ: ದೂರುದಾರ ಸಾಕ್ಷಿಯು ನೀಡಿರುವ ಅಸ್ಥಿಪಂಜರದ ಅವಶೇಷಗಳನ್ನು, ಪಂಚರ ಸಮ್ಮುಖದಲ್ಲಿ ಪೊಲೀಸರು ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ: ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು: ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್‌ ಕೆ.

Suddi Udaya

ಶ್ರೀ ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆ ಬಗ್ಗೆ ಬೆಳ್ತಂಗಡಿ ವಲಯದ ಪೂರ್ವಭಾವಿ ಸಭೆ

Suddi Udaya

ಹೊಸಪಟ್ಣ ಸ.ಕಿ.ಪ್ರಾ. ಶಾಲೆಯಲ್ಲಿ ಪರಿಸರ ದಿನಾಚರಣೆ

Suddi Udaya
error: Content is protected !!