September 6, 2026
ತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ದ.ಕ. ಜಿಲ್ಲಾ ಬಿ.ಎಂ.ಎಸ್ ವತಿಯಿಂದ ವಿಶ್ವಕರ್ಮ ಜಯಂತಿ ಅಂಗವಾಗಿ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ

ಬೆಳ್ತಂಗಡಿ: ದ.ಕ. ಜಿಲ್ಲಾ ಭಾರತೀಯ ಮಜ್ದೂರು ಸಂಘ (ಬಿ.ಎಂ.ಎಸ್) ವತಿಯಿಂದ ವಿಶ್ವಕರ್ಮ ಜಯಂತಿ ಅಂಗವಾಗಿ ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಭಾವಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಜಿಲ್ಲಾ ಕಾರ್ಯಾಲಯ, ತಾಲೂಕು ಶಾ, ಯೂನಿಯನ್ ಶಾ ಕೇಂದ್ರಗಳಲ್ಲಿ ಮತ್ತು ಕಾರ್ಯಕರ್ತರ–ಕಾರ್ಮಿಕರ–ಹಿತೈಷಿಗಳ ಮನೆಗಳಲ್ಲಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳಿಂದ ರಾಷ್ಟ್ರೀಯ ಕಾರ್ಮಿಕ ದಿನಾಚರಣೆಗೆ ವಿಶೇಷ ಕಳೆಗಟ್ಟಿತು. ದತ್ತೋಪಂತ್ ಥೆಂಗಡಿ ಜೀ ಸ್ಮರಣೆ ಜಿಲ್ಲಾ ಕೇಂದ್ರ ಕಾರ್ಯಾಲಯದಲ್ಲಿ ನಡೆದ ಪ್ರಧಾನ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಉಪನ್ಯಾಸಕರಾದ ಡಾ. ಮಾಧವ್ ಎಂ.ಕೆ. ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು, ಬಿ.ಎಂ.ಎಸ್ ಸಂಸ್ಥಾಪಕರಾದ ದತ್ತೋಪಂತ್ ಥೆಂಗಡಿ ಜೀ ಯವರ ಸಂಘಟನಾ ದೃಷ್ಟಿಕೋನ ಹಾಗೂ ಅವರ ದಾರ್ಶನಿಕತೆಯನ್ನು ಸ್ಮರಿಸಿದರು.

ಅವರು ಮಾತನಾಡಿ, “ದಕ್ಷಿಣ ಭಾರತದಲ್ಲಿ ಮತಾಂತರದ ಹಾವಳಿ ಹೆಚ್ಚಾಗಿದ್ದಾಗ ಜನತೆಗೆ ಆತ್ಮವಿಶ್ವಾಸ ತುಂಬಿದವರು ದತ್ತೋಪಂತ್ ಥೆಂಗಡಿ ಜೀ.ಅವರ ದೂರದೃಷ್ಟಿಯಿಂದಲೇ ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಸ್ಥಾಪನೆ ಸಾಧ್ಯವಾಯಿತು. ದೇಶದ ಶ್ರಮಜೀವಿಗಳ ಕನಸುಗಳನ್ನು ಸಾಕಾರಗೊಳಿಸುವ ಕಾರ್ಮಿಕರ ಸಂಘಟನೆ ಅಂದ್ರೆ ಅದು ಬಿ.ಎಂ.ಎಸ್. ಸಂಘಟನೆ. ಈ ಸಂಘಟನೆಯಲ್ಲಿ ಬದ್ದತೆ ಮತ್ತು ನಿಷ್ಠೆಗೆ ಮೊದಲ ಆದ್ಯತೆ ಇದೆ,” ಎಂದು ಹೇಳಿದರು. ಮುಂದುವರೆದು, “ಮೇ 1 ಪಾಶ್ಚಾತ್ಯ ಪ್ರಭಾವದ ದಿನ, ಆದರೆ ಜಗತ್ತಿನ ಮೊದಲ ಕಾರ್ಮಿಕ ವಿಶ್ವಕರ್ಮ ದೇವರು ಅವರ ಜಯಂತಿಯಂದೇ ನಮ್ಮ ಸಂಘಟನೆ ಕಾರ್ಮಿಕ ದಿನಾಚರಣೆ ಆಚರಿಸುವುದು ನಮ್ಮ ರಾಷ್ಟ್ರೀಯ ಅಸ್ಮಿತೆಯ ಸಂಕೇತ. ‘ರಾಷ್ಟ್ರ ಮೊದಲು’ ಎನ್ನುವುದೇ ನಮ್ಮ ಸಂಘಟನೆಯ ಧ್ಯೇಯ. ಭಾರತೀಯ ಸಂಸ್ಕೃತಿ ಎಲ್ಲರನ್ನು ಸಮಾನರೆಂದು ಕಾಣುತ್ತದೆ. ‘ಸರ್ವೇ ಜನಾ ಸುಖಿನೋ ಭವಂತು’ ಎಂಬುದು ನಮ್ಮ ತತ್ವ. ಸಮಾಜದಲ್ಲಿ ಸಂಪಾದನೆ ಇದ್ದರೂ ನೆಮ್ಮದಿ ಇಲ್ಲದ ಸ್ಥಿತಿ ಹೆಚ್ಚಾಗಿದೆ. ಆದರೆ ದೇಶಕಾರ್ಯಕ್ಕೆ ಸಮಯ ಮೀಸಲಿಡುವ ಮನೋಭಾವ ಬೆಳೆಸಬೇಕು,” ಎಂದು ಮನದಟ್ಟು ಮಾಡಿದರು. ಅವರು ಒತ್ತಿ ಹೇಳಿದರು: “ಆರೋಗ್ಯ, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ಭಾರತ, ಸಾಮರಸ್ಯ ಹಾಗೂ ನಾಗರಿಕ ಶಿಷ್ಟಾಚಾರ – ಇವು ಸಮಾಜದ ಪರಿವರ್ತನೆಯ ಮುಖ್ಯ ಹಾದಿಗಳು. ನಮ್ಮಲ್ಲಿ ನಾವು ಬದಲಾದರೆ ಸಮಾಜ ಬದಲಾಗುವುದು ಖಚಿತ.” ಎಂದರು.

ಸಂಘಟನೆಯ ಬೆಳವಣಿಗೆ – ಸಾಮೂಹಿಕ ಶ್ರಮದ ಫಲ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು ಮಾತನಾಡಿ, “ಜಿಲ್ಲೆಯಲ್ಲಿ ಸಂಘಟನೆಯ ಬೆಳವಣಿಗೆಗೆ ಸಂಘಟನೆಯ ಹಿರಿಯರ ಮಾರ್ಗದರ್ಶನ, ಸಂಘಪರಿವಾರದ ಹಿರಿಯರ ಸಲಹೆ, ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಸಹಕಾರ ಹಾಗೂ ಕಾರ್ಯಕರ್ತರ ಶ್ರಮವೇ ಕಾರಣವಾಗಿದೆ. ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರ, ಅಧಿಕಾರಿಗಳ, ಇಲಾಖೆಯ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ಮನವಿ, ಮಾತುಕತೆ, ಹೋರಾಟ ಮತ್ತು ಸಂವಾದಗಳನ್ನು ನಿರಂತರವಾಗಿ ನಡೆಸುತ್ತಿದ್ದೇವೆ. ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವುದು, ತೊಂದರೆಗೊಳಗಾದ ಕಾರ್ಮಿಕರಿಗೆ ಆರ್ಥಿಕ ನೆರವು ಒದಗಿಸುವುದು ಹಾಗೂ ಆತ್ಮವಿಶ್ವಾಸ ತುಂಬುವ ಕೆಲಸಗಳನ್ನು ಮಾಡಲಾಗಿದೆ. ಮುಂದೆಯೂ ಇದೇ ರೀತಿಯಾಗಿ ‘ಕಾರ್ಮಿಕರ ಸೇವೆಯೇ ರಾಷ್ಟ್ರಸೇವೆ’ ಎಂಬ ಭಾವನೆಯೊಂದಿಗೆ ಸಂಘಟನೆ ಕಾರ್ಯ ನಿರ್ವಹಿಸಲಿದೆ,” ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ರೋಹಿತಾಶ್ವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ ಸೇರಿದಂತೆ ಅನೇಕ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸತೀಶ್ ಶೆಟ್ಟಿ ಯವರು ಸ್ವಾಗತಿಸಿದರು, ರೋಹಿತಾಶ್ವ ವಂದನೆ ಸಲ್ಲಿಸಿದರು ಹಾಗೂ ಗೋಪಾಲ ಕೃಷ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು.

ಜಿಲ್ಲೆಯಾದ್ಯಂತ ನಡೆದ ಕಾರ್ಯಕ್ರಮಗಳಲ್ಲಿ ಸಂಘಟನೆಯ ಹಿರಿಯರಾದ ವಿಶ್ವನಾಥ್ ಶೆಟ್ಟಿ ಹಾಗೂ ರಾಜ್ಯ ಪದಾಧಿಕಾರಿಗಳಾದ ಜಯರಾಜ್ ಸಾಲ್ಯಾನ್, ರೇವತಿ ರತ್ನಾಕರ, ಪ್ರಜಿತ್ ಕಾಸರಗೋಡು, ಭಗವಾನ್ ದಾಸ್ ಉಳ್ಳಾಲ, ಜೊತೆಗೆ ಜಿಲ್ಲಾ ಪದಾಧಿಕಾರಿಗಳಾದ ಉದಯ ಕುಮಾರ್, ವಿಗ್ನೇಶ್, ವಸಂತ ಕುಮಾರ್ ಬಂಟ್ವಾಳ, ಕುಮಾರ್ ನಾಥ್ ಉಜಿರೆ, ನಾರಾಯಣ ಪೂಜಾರಿ ಬಂಟ್ವಾಳ, ಪ್ರಕಾಶ್ ಸುಳ್ಯ, ಮಧುಸೂಧನ್ ಸುಳ್ಯ, ಶಶಿ ಕುಮಾರ್ ಸುಳ್ಯ, ಚಂದ್ರಶೇಖರ ಕಡಬ, ಪುರಂದರ ರೈ ಕುಂಬ್ರ, ರಾಜೇಶ್ ಮರೀಲ್, ಗಿರೀಶ್ ಮಲ್ಲಿ ಪುತ್ತೂರು, ಉದಯ ಬೆಳ್ತಂಗಡಿ, ನಾಗರಾಜ್ ಬೆಳ್ತಂಗಡಿ,ರಘುಪತಿ ಬೆಳ್ತಂಗಡಿ, ಶ್ರೀಕಾಂತ್ ಬಂಟ್ವಾಳ, ರಾಜೇಶ್ ಸುವರ್ಣ ಮೂಡಬಿದ್ರೆ ಪ್ರಮೋದ್ ಪೆರಾಡಿ, ನಾಗೇಶ್ ವಿಟ್ಲ, ಪ್ರಶಾಂತ್, ಕಿರಣ್ ಕುಮಾರ್, ಶಶಿಧರ್ ಮಂಗಳೂರು, ಶಶಿಕಲಾ ಬೆಳ್ತಂಗಡಿ, ನಳಿನಿ ಬಂಟ್ವಾಳ, ಸಾಮೂವೆಲ್ ಮಂಗಳೂರು ಮೊದಲಾದವರು ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಮಿಕ ದಿನಾಚರಣೆಯನ್ನು ಯಶಸ್ವಿಗೊಳಿಸಿದರು.

Related posts

ಎಂ.ಎಸ್ಸಿ. ಅರಿವಳಿಕೆ ಮತ್ತು ಆಪರೇಷನ್ ಥಿಯೇಟರ್ ತಂತ್ರಜ್ಞಾನದಲ್ಲಿ ಧರ್ಮಸ್ಥಳದ ಕು| ನಿರೀಕ್ಷಾ ರವರಿಗೆ ಪ್ರಥಮ ರ್‍ಯಾಂಕ್‌

Suddi Udaya

ಪುದುವೆಟ್ಟು ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲಾ ವಿದ್ಯಾರ್ಥಿ ಸಂಸತ್ತು ಚುನಾವಣೆ

Suddi Udaya

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ : ಇಂಗ್ಲಿಷ್ ಮತ್ತು ಸಮಾಜಶಾಸ್ತ್ರ ವಿಷಯಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ

Suddi Udaya

ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿ ಮಂಡಲದ ವತಿಯಿಂದ ಮತದಾರರ ಚೇತನ ಅಭಿಯಾನದ ಪ್ರಯುಕ್ತ ಬಿ.ಎಲ್. ಎ. – 2 ಗಳ ಕಾರ್ಯಾಗಾರ

Suddi Udaya

ಉಜಿರೆ ಬೆನಕ ಹೆಲ್ತ್ ಸೆಂಟರ್ ನ ಡಾ. ಗೋಪಾಲಕೃಷ್ಣ ಕೆ ಅವರಿಗೆ “ಆಯುಷ್ ಶ್ರೀ” ಪ್ರಶಸ್ತಿ

Suddi Udaya

ಶ್ರೀ ಧ.ಮಂ. ಪ್ರಕೃತಿ ಮತ್ತು ಯೋಗ ಕಾಲೇಜು: ಯಶಸ್ವಿ ಚಿಣ್ಣರ ಯೋಗ ತರಬೇತಿ ಶಿಬಿರದ ಸಮಾರೋಪ

Suddi Udaya
error: Content is protected !!