September 6, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ಗೇರುಕಟ್ಟೆ: ಹುಚ್ಚು ನಾಯಿ ರೋಗ ನಿರೋಧಕ ಉಚಿತ ಲಸಿಕೆ

ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ಹಾಗೂ ಬೆಳ್ತಂಗಡಿ ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ಅ.16 ಪಂಚಾಯತ್ ವಠಾರದಲ್ಲಿ ಪಂಚಾಯತ್ ಅಧ್ಯಕ್ಷ ದಿವಾಕರ ಎಂ. ಲಸಿಕೆಯನ್ನು ಪಶು ವೈದ್ಯರಾದ ಡಾ.ರವಿ ಕುಮಾರ್ ಅವರಿಗೆ ಹಸ್ತಾಂತರಿಸಿದರು.

ಭಾರತವನ್ನು ರೇಬೀಸ್ ರೋಗ ಮುಕ್ತವಾಗಿ ಮಾಡುವ ಉದ್ದೇಶದಿಂದ ಸರಕಾರವು ಕಾರ್ಯಕ್ರಮ ಹಮ್ಮಿಕೊಂಡಿದೆ. ಆದುದರಿಂದ ಸಾಕು ನಾಯಿಗಳು, ಬೀದಿ ನಾಯಿ ಮತ್ತು ಬೆಕ್ಕುಗಳ ತಾಲೂಕಿನಲ್ಲಿರುವ ಗ್ರಾಮ ಪಂಚಾಯತ್, ಸಂಘ, ಸಂಸ್ಥೆಗಳ ಸಹಭಾಗಿತ್ವದಲ್ಲಿ ಪಶು ಸಂಗೋಪನೆ ಇಲಾಖೆಯ ವತಿಯಿಂದ ಸಾರ್ವಜನಿಕರಲ್ಲಿ ಮತ್ತು ಶಾಲಾ, ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಿದೆ ಎಂದು ಬೆಳ್ತಂಗಡಿ ಪಶು ಸಂಗೋಪನೆ ಪಶುವೈದ್ಯ ಡಾ. ರವಿ ಕುಮಾರ್ ಹೇಳಿದರು.

ನಿವೃತ್ತ ಸೈನಿಕ ಸುಭ್ರಮಣಿ ಹಾಗೂ ಆಶೋಕ ಆಚಾರ್ಯ ಅವರ ನಾಯಿಗಳಿಗೆ ಸಾಂಕೇತಿಕವಾಗಿ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. ಸಾರ್ವಜನಿಕರ ಸಾಕು ನಾಯಿ,ಬೆಕ್ಕುಗಳಿಗೆ ಲಸಿಕೆ ಹಾಕಿಸಲು ಕಳಿಯದಲ್ಲಿ 7 ಮತ್ತು ನ್ಯಾಯತರ್ಪು ಗ್ರಾಮದಲ್ಲಿ 10 ಪ್ರಮುಖ ಕೇಂದ್ರಗಳನ್ನು ಗುರುತಿಸಿ, 2 ವೈದ್ಯರ ತಂಡಗಳನ್ನು ಮಾಡಿದರು.

ಸುಮಾರು 130 ಹೆಚ್ಚು ನಾಯಿ,ಬೆಕ್ಕುಗಳಿಗೆ ಲಸಿಕೆ ನೀಡಿದರು.ಪಶುಪಾಲನೆ ಇಲಾಖೆಯ ಸಿಬ್ಬಂದಿಗಳಾದ ಡಾ.ರಮೇಶ್‌. ಸಹಾಯಕ ಚಂದ್ರ ಕುಮಾರ್, ದೀರಾಜ್ ಪಶು ಸಖಿ ರೂಪಾ,ಪಂಚಾಯತ್ ಸಿಬ್ಬಂದಿಗಳಾದ ರವು ಹೆಚ್.,ಸುರೇಶ್ ಗೌಡ ಹೆಚ್,ಸಿಬ್ಬಂದಿಗಳು ಮತ್ತಿತರರಿದ್ದರು.ಕಳಿಯ ಗ್ರಾಮ ಪಂಚಾಯತ್ ಪ್ರಭಾರ ಪಿ.ಡಿ.ಓ.ಕುಂಞ ಕೆ. ನಿರೂಪಿಸಿ,ವಂದಿಸಿದರು.

Related posts

ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಕೆಸರಡ್ ಒಂಜಿ ದಿನ” ಕಾರ್ಯಕ್ರಮ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಮೋಡ್ ವೀಲ್‌ಚೇರ್ ವಿತರಣೆ

Suddi Udaya

ಅರಸಿನಮಕ್ಕಿ: ಉಡ್ಯೆರೆ ನಿವಾಸಿ ಪೂವಪ್ಪ ಗೌಡ ಹೃದಯಾಘಾತದಿಂದ ನಿಧನ

Suddi Udaya

ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ನಾವೂರು ಯುನೈಟೆಡ್ ಸ್ಪೋರ್ಟ್ಸ್ ಹಾಗೂ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿ ಮಹಮ್ಮದ್ ಅರ್ಷದ್

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಸಮಿತಿ ಮಾಸಿಕ ಸಭೆ

Suddi Udaya
error: Content is protected !!