September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗೇರುಕಟ್ಟೆಯಲ್ಲಿ ಶ್ರೀ ದುರ್ಗಾ ಟ್ರೇಡರ್ಸ್ ಶುಭಾರಂಭ

ಗೇರುಕಟ್ಟೆ : ಇಲ್ಲಿಯ ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಶ್ರೀ ದುರ್ಗಾ ಟ್ರೇಡರ್ಸ್ ಅ.24 ರಂದು ಶುಭಾರಂಭಗೊಂಡಿದೆ.
ಕೃಷಿ ಪತ್ತಿನ ಸಹಕಾರ ಸಂಘದ ಹಿರಿಯ ನಿರ್ದೇಶಕ ಹರಿದಾಸ ಪಡಂತ್ತಾಯ ದೀಪ ಪ್ರಜ್ವಲನೆ ಮಾಡಿದರು.


ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು ಅಧ್ಯಕ್ಷತೆ ವಹಿಸಿ, ಉದ್ಯಮ ಯಶಸ್ವಿಯಾಗಲಿ ಹಾಗೂ ಕೃಷಿ ಪತ್ತಿನ ಸಹಕಾರ ಸಂಘವು ಸಹಕಾರ ನೀಡುವುದು ಹಾಗೂ ಕೃಷಿಕರ ಉತ್ಪನ್ನಗಳಿಗೆ ಉತ್ತಮ ದರ ನೀಡುವ ಮೂಲಕ ವ್ಯಾಪಾರ ವಹಿವಾಟು ಅಭಿವೃದ್ಧಿ ಹೊಂದಲು ಅವಕಾಶ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ, ನಿರ್ದೇಶಕ ಶೇಖರ ನಾಯ್ಕ, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್. ಶೆಟ್ಟಿ, ಮೈರಳ್ಕೆ ಕಿರಾತ ಮೂರ್ತಿ ದೇವಸ್ಥಾನದ ಅಧ್ಯಕ್ಷ ಗೋಪಾಲ ಶೆಟ್ಟಿ, ಕೆ., ನಾಳ ದೇವಸ್ಥಾನದ ಅಧ್ಯಕ್ಷ ಹರೀಶ್ ಕುಮಾರ್ ಬಿ., ಹಿರಿಯರಾದ ಪೂವಪ್ಪ ಶೆಟ್ಟಿ, ಶ್ರೀಮತಿ ಶಾರದ ಉಮನಾಥ್ ಶೆಟ್ಟಿ, ಉಪಸ್ಥಿತರಿದ್ದು ಶುಭ ಹಾರೈಸಿದರು.


ಬೆಳ್ತಂಗಡಿ ಸುಮುಖ ಟ್ರೇಡರ್ಸ್ ಮಾಲಕ ಸದಾನಂದ ಶೆಟ್ಟಿ, ಆಕ್ಷಯ ಎಲೆಕ್ಟ್ರಿಕಲ್ ಮಾಲೀಕರ ಪುರಂದರ ಶೆಟ್ಟಿ, ಉದ್ಯಮಿ ಸಂತೋಷ್ ಶೆಟ್ಟಿ, ಹಿರಿಯರಾದ ಬಾಬು ಶೆಟ್ಟಿ,ಮಡಂತ್ಯಾರು ಗ್ರಾಮ ಪಂಚಾಯತ್ ಸದಸ್ಯ ಕಿಶೋರ್ ಶೆಟ್ಟಿ, ರಾಜಶೇಖರ ಶೆಟ್ಟಿ ಭಂಡಾರಿ ಗುಡ್ಡೆ, ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಣಾಧಿಕಾರಿ ಕವಿತಾ ಶೆಟ್ಟಿ, ಸಿಬ್ಬಂದಿಗಳು, ಸ್ಥಳೀಯ ವರ್ತಕರು ಹಾಗೂ ಸಿಬ್ಬಂದಿಗಳು ಸಂಸ್ಥೆಯ ಪಾಲುದಾರರ ಕುಟುಂಬಸ್ಥರು ಮತ್ತಿತರರಿದ್ದರು.


ಸಂಸ್ಥೆ ಪಾಲುದಾರರಾದ ಪ್ರಶಾಂತ್ ಶೆಟ್ಟಿ ಸಂಬೊಳ್ಯ ಹಾಗೂ ರಾಜೇಶ್ ಶೆಟ್ಟಿ ಉಳಗುಡ್ಡೆ ಸ್ವಾಗತಿಸಿ, ಸತ್ಕರಿಸಿ, ಕೃಷಿಕರ ಉತ್ಪನ್ನಗಳನ್ನು ಉತ್ತಮ ಬೆಲೆಯಲ್ಲಿ ಖರೀದಿಸುವುದಾಗಿ ಹೇಳಿ, ಕೃಷಿಕರ ಸಹಕಾರ ಯಾಚಿಸಿದರು.
ಅಂಚೆ ಇಲಾಖೆ ನಿವೃತ್ತ ಅಂಚೆ ಪಾಲಕರಾದ ವಿಠ್ಠಲ ಶೆಟ್ಟಿ ಉಪ್ಪಡ್ಕ ನಿರೂಪಿಸಿದರು.

Related posts

ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದಿಂದ
ಮಕ್ಕಳ ಶಿಕ್ಷಣಕ್ಕಾಗಿ ರೂ. 2೦ ಸಾವಿರ ನೆರವು

Suddi Udaya

ಆರಂಬೋಡಿ : ಪಿಲ್ಲಂಬುಗೋಳಿ ಕಾಂತರಬೆಟ್ಟು ರಸ್ತೆಯನ್ನು ದುರಸ್ತಿಗೊಳಿಸುವಂತೆ ಗ್ರಾಮ ಪಂಚಾಯತ್ ಗೆ ಮನವಿ

Suddi Udaya

ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ವ್ಯಕ್ತಿ ಆತ್ಮಹತ್ಯೆ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಿಂದ ಮರಣ ನಿಧಿ ಪತ್ರ ಹಸ್ತಾಂತರ

Suddi Udaya

ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯಿಂದ ಹಾವೇರಿ ರಾಣಿ ಬೆನ್ನೂರಿನಲ್ಲಿ ಕಾರ್ಯಕ್ರಮ

Suddi Udaya

ಅರಸಿನಮಕ್ಕಿ: ಅಡಿಕೆಗೆ ಔಷಧಿ ಸಿಂಪಡನೆ ಮಾಡುವ ವೇಳೆ ವಿದ್ಯುತ್ ಶಾಕ್: ವ್ಯಕ್ತಿ ಸಾವು

Suddi Udaya
error: Content is protected !!