September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉದ್ಯಮಿ ಶಶಿಧರ ಶೆಟ್ಟಿ ಬರೋಡರಿಂದ ಕಾಶಿ ಶೆಟ್ಟಿಯವರ ಸ್ಮರಣಾರ್ಥ ಬಡ ಬಂಟ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು

ಬೆಳ್ತಂಗಡಿ: ತಾಲೂಕಿನ ಬಂಟರ ಸಂಘವನ್ನು ಸಾಲಮುಕ್ತಗೊಳಿಸುವಲ್ಲಿ ಬಹಳ ದೊಡ್ಡ ಕೊಡುಗೆಯನ್ನು ನೀಡಿರುವ ಬಂಟರ ಯಾನೆ ನಾಡವರ ಸಂಘ(ರಿ)ದ ಗೌರವ ಮಾರ್ಗದರ್ಶಕರಾಗಿರುವ ನವಶಕ್ತಿಯ ಉದ್ಯಮಿ ಶಶಿಧರ ಶೆಟ್ಟಿ ಬರೋಡರು, ತಮ್ಮ ತಾಯಿ ಕಾಶಿ ಶೆಟ್ಟಿಯವರ ಸ್ಮರಣಾರ್ಥ ಬೆಳ್ತಂಗಡಿ ತಾಲೂಕಿನ ಬಡ ಬಂಟ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಘೋಷಿಸಿದ್ಧಾರೆ.

ಬಂಟರ ಸಂಘದ ಮೂಲಕ ಅನುಷ್ಠಾನಗೊಳ್ಳಲಿರುವ ಈ ಯೋಜನೆಯನ್ವಯ ಪ್ರಥಮ ಹಂತದಲ್ಲಿ ಬೆಳ್ತಂಗಡಿ ತಾಲೂಕಿನ 9 ವಲಯಗಳಿಗೆ ತಲಾ ಒಂದರಂತೆ ಒಟ್ಟು ಒಂಬತ್ತು ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ತಲಾ ರೂ . 2,00,000/-( ರೂಪಾಯಿ ಎರಡು ಲಕ್ಷ ಮಾತ್ರ) ಧನಸಹಾಯವನ್ನು ನೀಡಲಾಗುತ್ತದೆ. ಬಂಟರ ಸಂಘದ ವಲಯ ಸಮಿತಿಯ ಪದಾಧಿಕಾರಿಗಳು ತಮ್ಮ ವಲಯದಿಂದ ಸಹಾಯ ಯೋಗ್ಯ ಕುಟುಂಬವನ್ನು ಗುರುತಿಸಿ, ತಾಲೂಕು ಸಮಿತಿಗೆ ಶಿಫಾರಸು ಮಾಡಿ, ಸೂಕ್ತ ಪರಿಶೀಲನೆಯ ನಂತರ ಬಂಟರ ಸಂಘದಿಂದ ಅನುಮೋದನೆಗೊಂಡ ಮನೆಯ ನಿರ್ಮಾಣದ ಸಂಪೂರ್ಣ ಉಸ್ತುವಾರಿಯನ್ನು ವಲಯ ಸಮಿತಿಯವರು ವಹಿಸಿಕೊಳ್ಳುತ್ತಾರೆ. ಮನೆ ನಿರ್ಮಾಣಕ್ಕೆ ತಗಲುವ ಹೆಚ್ಚುವರಿ ವೆಚ್ಚವನ್ನು ಶ್ರಮದಾನದ ಮೂಲಕ, ಅಗತ್ಯ ಸಾಮಗ್ರಿಗಳನ್ನು ಒದಗಿಸುವ ಮೂಲಕ ಅಥವಾ ಆರ್ಥಿಕ ನೆರವು ನೀಡುವ ಮೂಲಕ ಸ್ಥಳೀಯವಾಗಿ ಕ್ರೋಢೀಕರಿಸಬೇಕಾಗುತ್ತದೆ. ನಿಗದಿಪಡಿಸಿದ ಅವಧಿಯ ಒಳಗೆ ಕನಿಷ್ಠ ಸೌಲಭ್ಯಗಳನ್ನು ಒಳಗೊಂಡ ಸುಂದರ ಮನೆಯನ್ನು ನಿರ್ಮಿಸಿ ಕೊಡುವ ರೀತಿ ವ್ಯವಸ್ಥೆ ಕಲ್ಪಿಸಿಬೇಕಾಗುತ್ತದೆ. ವಲಯ ಸಮಿತಿಯ ಪದಾಧಿಕಾರಿಗಳು ಈ ವಿಚಾರವನ್ನು ಆದ್ಯತೆಯಲ್ಲಿ ಪರಿಗಣಿಸಿ ತಮ್ಮ ವಲಯದಿಂದ ಸಹಾಯ ಯೋಗ್ಯ ಕುಟುಂಬವನ್ನು ಗುರುತಿಸಿ, ಬಂಟರ ಸಂಘಕ್ಕೆ ಶಿಫಾರಸು ಮಾಡಬೇಕು ಹಾಗೂ ಬಡ ಬಂಟ ಕುಟುಂಬಗಳಿಗೆ ನೆರವು ನೀಡಲು ಒದಗಿ ಬಂದ ಈ ಅಪೂರ್ವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಬೆಳ್ತಂಗಡಿ ಬಂಟರ ಸಂಘ ವಿನಂತಿಸಿಕೊಂಡಿದೆ.

Related posts

ಗಿನ್ನಿಸ್ ವಿಶ್ವ ದಾಖಲೆ ಮಾಡಿದ ಶೌರ್ಯ ಎಸ್ ವಿ ರವರಿಗೆ ಮತ್ತೊಂದು ಪ್ರಶಸ್ತಿಯ ಗರಿ

Suddi Udaya

ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ನಾಟಿ ನೆಡುವ ಪ್ರಾತ್ಯಕ್ಷಿಕೆ

Suddi Udaya

ಕೊಯ್ಯೂರು ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ದೀಪಾವಳಿ ಹಬ್ಬ ಆಚರಣೆ

Suddi Udaya

ಶಿಶಿಲ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ: ಲೋಕಕಲ್ಯಾಣಕ್ಕಾಗಿ ಚವ್ವಿಶ ತೀರ್ಥಂಕರರ ಆರಾಧನೆ

Suddi Udaya

ಶಿಶಿಲ: ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯೆಯರಿಂದ ನೇಜಿ ನಾಟಿ ಕಾರ್ಯಕ್ರಮ

Suddi Udaya
error: Content is protected !!