September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ 48ನೇ ವರ್ಷದ ಭಜನಾ ಸಪ್ತಾಹ : ಧಾರ್ಮಿಕ ಸಭೆ

ಮಚ್ಚಿನ: ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ, ಇದರ 48ನೇ ವರ್ಷದ ಭಜನಾ ಸಪ್ತಾಹ ಅ. 30 ರಿಂದ ಪ್ರಾರಂಭಗೊಂಡು ನ. 6 ವರೆಗೆ ಭಜನೆಯೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮದ ಧಾರ್ಮಿಕ ಉಪನ್ಯಾಸಕರಾಗಿ ಶ್ರೀ ದೇವಾಲಯದ ತಂತ್ರಿಗಳು ಹಾಗೂ ಜ್ಯೋತಿಷ್ಯ ಶಾಸ್ತ್ರ ಪ್ರಾಧ್ಯಾಪಕರು ಸಂಸ್ಕೃತ ಮಹಾವಿದ್ಯಾಲಯ ಉಡುಪಿಯ ಬ್ರಹ್ಮಶ್ರೀ ಬೇರೆಬೈಲು ಡಾ. ಶಿವಪ್ರಸಾದ್ ತಂತ್ರಿ ಇವರು ಮಾತನಾಡಿ ದೇವರ ನಾಮ ಸ್ಮರಣೆಯಿಂದ ಸಿಗುವ ಪುಣ್ಯದ ಫಲ ಬೇರೆ ಯಾವುದರಲ್ಲೂ ಸಿಗಲು ಸಾಧ್ಯವಿಲ್ಲ.ದೇವರನ್ನು ಭಕ್ತಿಯಿಂದ ಕೊಂಡಾಡಲು ಭಜನೆಯಿಂದ ಮಾತ್ರ ಸಾಧ್ಯ ಎಂದರು.

ವೇದಿಕೆಯಲ್ಲಿ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಶರರಾದ ಡಾ| ಹರ್ಷ ಸಂಪಿಗೆತ್ತಾಯ, ಭಜನಾ ಮಂಡಳಿಯ ಅಧ್ಯಕ್ಷ ಪುಷ್ಪಕ ರಾವ್ ಉಪಸಿದ್ಧರಿದ್ದರು. ಈ ಸಂದರ್ಭದಲ್ಲಿ ಮಚ್ಚಿನ ಪ್ರೌಢ ಶಾಲೆ ಹಾಗೂ ವಿದ್ಯಾಸಾಗರ ಸಿಬಿಎಸ್.ಇ ಬಳ್ಳಮಂಜ ಇಲ್ಲಿಯ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಭಜನಾ ಮಂಡಳಿಯ ಮುಖ್ಯ ಸಲಹೆಗಾರರಾದ ಬಾಲಕೃಷ್ಣ ಭಟ್ ಸ್ವಾಗತಿಸಿದರು. ಧನುಷ್ ವಾರ್ಷಿಕ ವರದಿ ಮಂಡಿಸಿದರು. ಯತೀಶ್ ರೈ ವಂದಿಸಿದರು. ಹರ್ಷ ಬಳ್ಳಮಂಜ ಕಾರ್ಯಕ್ರಮ ನಿರೂಪಿಸಿದರು. 48 ಗಂಟೆಗಳ ಅಖಂಡ ಭಜನೆಯೊಂದಿಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಿತು. ಶ್ರೀ ದೇವರಿಗೆ ರಂಗ ಪೂಜೆ ದೀಪೋತ್ಸವ, ವಿಶೇಷ ಪೂಜೆ ನಡೆಯಿತು. ಭಜನಾ ಕಾರ್ಯಕ್ರಮದಲ್ಲಿ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

✍️ವರದಿ: ಹರ್ಷ ಬಳ್ಳಮಂಜ

Related posts

ಕೊಯ್ಯೂರು ಗ್ರಾ.ಪಂ. ಅಧ್ಯಕ್ಷರಾಗಿ ದಯಾಮಣಿ, ಉಪಾಧ್ಯಕ್ಷರಾಗಿ ಹರೀಶ್ ಗೌಡ ಆಯ್ಕೆ

Suddi Udaya

ಕುಕ್ಕೇಡಿ: ಮಡಿಲೊಟ್ಟು ನಿವಾಸಿ ಲಿಂಗಮ್ಮ ದೇವಾಡಿಗ ನಿಧನ

Suddi Udaya

ಮೂಡುಬಿದಿರೆ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ರಾಜ್ಯ ಸರಕಾರದ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪುರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಸಾವು

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಪೋಕ್ಸೋ ಕಾಯಿದೆಯ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya
error: Content is protected !!