September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನ.9: ಬೆಳ್ತಂಗಡಿ ರೋಟರಿ ಕ್ಲಬ್‌ನಿಂದ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ

ಬೆಳ್ತಂಗಡಿ: ಮಂಗಳೂರಿನ ಶಕ್ತಿನಗರದಲ್ಲಿರುವ ಎನಿಮಲ್ ಕೇರ್ ಟ್ರಸ್ಟ್ ಬೆಳ್ತಂಗಡಿ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ನ. 9ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಉಜಿರೆ ಬಸ್‌ ಸ್ಟ್ಯಾಂಡ್ ಬಳಿ ಸಂಧ್ಯಾ ಟ್ರೇಡರ್ಸ ಎದುರು, ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ ಏರ್ಪಡಿಸಿದೆ.

ಎಲ್ಲಾ ಮರಿಗಳಿಗೆ ರೋಗ ನಿರೋಧಕ ಚುಚ್ಚು ಮದ್ದುಗಳನ್ನು ನೀಡಲಾಗಿರುತ್ತದೆ. ಎನಿಮಲ್ ಕೇರ್ ಟ್ರಸ್ಟನವರು ಆದಷ್ಟು ಸಂತಾನವಾಗದಂತೆ ಚಿಕಿತ್ಸೆ ಮಾಡಿದ ಬೆಕ್ಕು/ನಾಯಿ ಮರಿಗಳನ್ನು ತರುವ ಭರವಸೆ ಇತ್ತಿದ್ದಾರೆ. ಒಂದು ವೇಳೆ ಶಿಬಿರಕ್ಕೆ ತಂದಿರುವ ಬೆಕ್ಕು/ ನಾಯಿ ಮರಿಗಳಿಗೆ ಸಂತಾನವಾಗದಂತೆ ಚಿಕಿತ್ಸೆ ಆಗಿರದಿದ್ದರೆ, ಅವರ ಕೇಂದ್ರಕ್ಕೆ ಅವುಗಳನ್ನು ತಂದಲ್ಲಿ, ಉಚಿತವಾಗಿ ಮಾಡಿಕೊಡಲಾಗುವುದು. ಆರ್ಥಿಕವಾಗಿ ದುರ್ಬಲರು ಇದರ ಪ್ರಯೋಜನ ಪಡೆಯಬಹುದು.
ಶಿಬಿರದಲ್ಲಿ ಬೆಕ್ಕು/ನಾಯಿ ಮರಿಗಳನ್ನು ಉಚಿತವಾಗಿ ಪಡೆದುಕೊಳ್ಳ ಬಯಸುವವರು ತಮ್ಮ ವಿಳಾಸದ ನಕಲು ಪತ್ರ ಕೊಡಬೇಕು., ಪಡೆದುಕೊಳ್ಳುವ ಬೆಕ್ಕು/ನಾಯಿ ಮರಿಗಳಿಗೆ ಸಂತಾನವಾಗದAತೆ ಚಿಕಿತ್ಸೆ ಆಗಿರದಿದ್ದರೆ ಅದನ್ನು ಮಾಡಿಸಬೇಕು, ತಿಂಗಳಿಗೊಮ್ಮೆ ಅವುಗಳ ಆರೋಗ್ಯ ವರದಿ ನೀಡಬೇಕು.


ಹೆಚ್ಚಿನ ವಿವರಗಳಿಗೆ ಎನಿಮಲ್ ಕೇರ್ ಟ್ರಸ್ಟ ಸಂಖ್ಯೆ 9902253064 ಸಂಪರ್ಕಿಸಬಹುದು ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೊ. ಪ್ರಕಾಶ ಪ್ರಭುರವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

ಮಚ್ಚಿನ ಗ್ರಾ.ಪಂ. ನ ಪ್ರಥಮ ಹಂತದ ಗ್ರಾಮ ಸಭೆ

Suddi Udaya

ಬೆಳ್ತಂಗಡಿ ಶ್ರೀ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಜಾತ್ರೋತ್ಸವ

Suddi Udaya

ಉಜಿರೆ : ರುಡ್ ಸೆಟ್ ಸಂಸ್ಥೆಯಲ್ಲಿ “ರಬ್ಬರ್‌ ಟ್ಯಾಪಿಂಗ್‌ ʼʼ ತರಬೇತಿಯ ಸಮಾರೋಪ

Suddi Udaya

ನರೇಂದ್ರ ಮೋದಿ ಸರಕಾರಕ್ಕೆ 12 ವರ್ಷ: ನಾವೂರು ಶಕ್ತಿ ಕೇಂದ್ರದ ವತಿಯಿಂದ ದೇವರಿಗೆ ವಿಶೇಷ ಪೂಜೆ

Suddi Udaya

ಎಸ್‌ಡಿಎಂ ಪ.ಪೂ. ಕಾಲೇಜಿನಲ್ಲಿ ಸಂಸ್ಕೃತ ದಿನಾಚರಣೆ ಹಾಗೂ ಸಂಸ್ಕೃತ ಸಪ್ತಾಹ ಉದ್ಘಾಟನೆ

Suddi Udaya

ಅಧರ್ಮಿಗಳ ಅಟ್ಟಹಾಸ ಅಂತ್ಯವಾಗಬೇಕು: ಅನಿಲ್ ಕುಮಾರ್ ಯು

Suddi Udaya
error: Content is protected !!