September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕೊಕ್ಕಡ : ರಸ್ತೆಯ ಬದಿ ನಿಲ್ಲಿಸಿದ್ದ ಬೈಕ್ ಕಳವು

ಬೆಳ್ತಂಗಡಿ: ಕೊಕ್ಕಡದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳರು ಅಪಹರಿಸಿದ ಘಟನೆ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

ಆಲಂಕಾರು ನಿವಾಸಿ ಶಿವಪ್ರಸಾದ್ ಎಂಬವರು ನ 6 ರಂದು ಬೆಳಗ್ಗೆ ತನ್ನ ಬೈಕ್ ಅನ್ನು ಕೊಕ್ಕಡ ಪೇಟೆಯಲ್ಲಿ ಅಂಗಡಿಯೊಂದರ ಆವರಣದಲ್ಲಿ ನಿಲ್ಲಿಸಿ ಉಜಿರೆಗೆ ತೆರಳಿದ್ದರು. ಸಂಜೆ ಹಿಂತಿರುಗಿ ಬಂದು ನೋಡಿದಾಗ ಬೈಕ್ ನಿಲ್ಲಿಸಿದ್ದ ಸ್ಥಳದಲ್ಲಿ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬಳಿಕ ಬೈಕ್ ಕಳ್ಳತನವಾಗಿರುವ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ. ಕಳವಾದ ಬೈಕ್ ನ ಮೌಲ್ಯ ರೂ20,000 ಎಂದು ಅಂದಾಜಿಸಲಾಗಿದ್ದು ಘಟನೆಯ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ 303(2)ಬಿಎನ್.ಎಸ್. ನಂತೆ ಪ್ರಕರಣ‌ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಮುಂಡೂರು: ಕರುವಿನ ಮೇಲೆ ಚಿರತೆ ದಾಳಿ: ಆತಂಕದಲ್ಲಿ ಗ್ರಾಮಸ್ಥರು

Suddi Udaya

ಮೊಗ್ರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ-2026ರ ಸಮಾರೋಪ

Suddi Udaya

ಉಜಿರೆಯ ರವೀಂದ್ರ ನಾಯಕ್ ನಿಧನ

Suddi Udaya

ಸಂದೀಪ್ ಸುಂದರ್ ನೀರಲ್ಕೆರವರಿಂದ ಬಡಗಕಾರಂದೂರು ಶಾಲೆಗೆ ಕಂಪ್ಯೂಟರ್ ಟೇಬಲ್ ಗಳ ಕೊಡುಗೆ

Suddi Udaya

ಬಾರ್ಯ: ಶ್ರೀ ಮಹಾವಿಷ್ಣುಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಧರ್ಮಸ್ಥಳ: ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ “ಪರ್ಯೂಷಣ ಪರ್ವ” ಕೃತಿ ಬಿಡುಗಡೆ

Suddi Udaya
error: Content is protected !!