28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೋಳ್ಯೂರು ರಾಮಚಂದ್ರ ರಾಯರ ಮನೆಯಲ್ಲಿ ಯಕ್ಷಭಾರತಿಯಿಂದ ತಾಳಮದ್ದಳೆ

ಬೆಳ್ತಂಗಡಿ: ಯಕ್ಷಭಾರತಿ ಕನ್ಯಾಡಿ ಬೆಳ್ತಂಗಡಿ ಸಂಸ್ಥೆಯ ವತಿಯಿಂದ ಇನ್ನಂಜೆಯಲ್ಲಿರುವ ಕೋಳ್ಯೂರು ಕಾಂಪೌಂಡ್ ನಲ್ಲಿ ಕೋಳ್ಯೂರು ರಾಮಚಂದ್ರ ರಾಯರ 94ನೇ ಜನುಮ ದಿನದ ಅಂಗವಾಗಿ ತಾಳಮದ್ದಳೆ ಪ್ರಸಂಗ: ಶರಸೇತು ಬಂಧನ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ದಿವಾಕರ ಆಚಾರ್ಯ ಧರ್ಮಸ್ಥಳ, ಮಹೇಶ ಕನ್ಯಾಡಿ ಚೆಂಡೆ ಮದ್ದಳೆಯಲ್ಲಿ ವಾಸುದೇವ ಆಚಾರ್ಯ ಉಜಿರೆ, ರಂಜಿತ್ ಪಾಠ್ಕರ್ ಅಜೆಕಾರು ಸಹಕರಿಸಿದರು.
ಮುಮ್ಮೇಳದಲ್ಲಿ ಅರ್ಜುನನಾಗಿ ಹರಿದಾಸ ಗಾಂಭೀರ ಧರ್ಮಸ್ಥಳ, ಹನುಮಂತನಾಗಿ ಸುರೇಶ ಕುದ್ರೆಂತ್ತಾಯ ಉಜಿರೆ, ವೃದ್ಧ ವಿಪ್ರನಾಗಿ ಶಶಿಧರ ಕನ್ಯಾಡಿ, ಶ್ರೀರಾಮನಾಗಿ ಕೋಳ್ಯೂರು ರಾಮಚಂದ್ರ ರಾಯರು ಪಾತ್ರ ನಿರ್ವಹಿಸಿದರು. ಯಕ್ಷಭಾರತಿಯ ಖಾಯಂ ಆಹ್ವಾನಿತ ಸದಸ್ಯರಾದ ಕಶ್ಯಪ್ ಕನ್ಯಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದರು.
ತಂಡದ ಪ್ರತಿ ಸದಸ್ಯರನ್ನು ಶಾಲು, ಫಲಪುಷ್ಪ, ಸ್ಮರಣಿಕೆ ನೀಡಿ ಮನೆಯವರು ಗೌರವಿಸಿದರು.

ತನ್ನ ಅದ್ಭುತ ಪ್ರತಿಭಾ ಸಾಮರ್ಥ್ಯ, ಪರಿಶ್ರಮದಿಂದ ರಂಗಸ್ಥಳದ ಬೆಳಕಾಗಿ ಅಚ್ಚಳಿಯದೇ ದಾಖಲಾದ ಶ್ರೀ ಕೋಳ್ಯೂರು ರಾಮಚಂದ್ರ ರಾಯರು ವೇಷಧಾರಿಯಾಗಿ, ಅರ್ಥಧಾರಿಯಾಗಿ ಸುಮಾರು ಏಳು ದಶಕದ ಸುದೀರ್ಘ ಅವಧಿಯಲ್ಲಿ ರಂಗದಲ್ಲಿ ಮೆರೆದ ಹಾಗೂ ಸ್ತ್ರೀ ವೇಷಗಳಿಗೆ ಮಾದರಿ ಸದೃಶರಾಗಿರುವ ಶ್ರೀಯುತರ 94 ನೇ ಜನುಮ ದಿನವನ್ನು ಮನೆಯವರು ಬಂಧು ಮಿತ್ರರೊಂದಿಗೆ ಸ್ವಗೃಹದಲ್ಲಿ ಆಚರಿಸಿಕೊಂಡರು. ಈ ಶುಭ ಸಂದರ್ಭದಲ್ಲಿ ಬಹುತೇಕ ಅವರ ಶಿಷ್ಯರೇ ಇರುವ ಯಕ್ಷಭಾರತಿ ತಂಡದಿಂದ ತಾಳಮದ್ದಳೆ ಪ್ರಸ್ತುತಿಯಾಗಿರುವುದು ಆಚರಣೆಗೆ ಮೆರುಗು ನೀಡಿತು.

Related posts

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಹಲೇಜಿ ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ಸಿಯಾಳ ಅಭಿಷೇಕ

Suddi Udaya

ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ: ಸಂಸದ ನಳಿನ್ ಕುಮಾರ್ ಕಟೀಲ್ ಗೆ ಆಮಂತ್ರಣ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಸಂಯೋಜಿತ ಸಂಘವಾಗಿ ಕನ್ಯಾಡಿ ರಿಕ್ಷಾ ಪಾರ್ಕ್ ಸೇರ್ಪಡೆ

Suddi Udaya

ಶ್ರೀ ಧ.ಮ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗೆ ಕಾರ್ಯಾಗಾರ

Suddi Udaya

ಗಾಳಿ ಮಳೆಗೆ ಸವಣಾಲು ಬೇಬಿಯವರ ಮನೆಗೆ ಹಾನಿ

Suddi Udaya
error: Content is protected !!