September 6, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರೋಟರಿ ಕ್ಲಬ್ ವಲಯ ಮಟ್ಟದ ಕ್ರಿಕೆಟ್ ಸ್ಪರ್ಧೆ

ಬೆಳ್ತಂಗಡಿ : ಬೆಳ್ತಂಗಡಿ ರೋಟರಿ ಕ್ಲಬ್ ನ ಸಹಯೋಗದೊಂದಿಗೆ ರೋಟರಿ ಕ್ಲಬ್ ವಲಯ ಮಟ್ಟದ ಕ್ರಿಕೆಟ್ ಸ್ಪರ್ಧೆಯು ಉಜಿರೆಯ ಅಜ್ಜರ ಕಲ್ಲು ಮೈದಾನದಲ್ಲಿ ವ್ಯವಸ್ಥಿತವಾಗಿ ನಡೆಯಿತು.


ಕಾರ್ಯಕ್ರಮದ ಉದ್ಛಾಟನೆಯನ್ನು ಉಜಿರೆಯ ಸಂಧ್ಯಾ ಟ್ರೇಡರ್ಸ ಮಾಲಕ ರಾಜೇಶ್ ಪೈಯವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಬೆಳ್ತಂಗಡಿ ರೋಟರಿ ಕ್ಲಬ್ ತುಂಬಾ ಜನ ಹಿತ ಕಾರ್ಯಕ್ರಮಗಳನ್ನು ನಡೆಸುವುದರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಅದರ ಜತೆಗೆ ಆರೋಗ್ಯಕರ ಇಂತಹ ಪಂದ್ಯಾಟಗಳು ಕೂಡ ತುಂಬಾ ಅವಶ್ಯಕ ಎಂದು ನುಡಿದರು.

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೊ. ಪ್ರೊ. ಪ್ರಕಾಶ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ. ಎ. ಜಯಕುಮಾರ್ ಶೆಟ್ಟಿ, ಬೆನಕಾ ಆಸ್ಪತ್ರೆಯ ಮಾಲಕ ರೋ. ಡಾ. ಗೋಪಾಲಕೃಷ್ಣ ಮತ್ತು ವರಾಹಿ ಬಿಲ್ಡರ್ಸ ಮಾಲಕ ಬಸವರಾಜ, ಕಾರ್ಯದರ್ಶಿ ಡಾ ಎಂ ಎಂ ದಯಾಕರ್, ರೋಟರಿ ಸ್ಪೋರ್ಟ್ಸ ಚೆಯರ್ ಮ್ಯಾನ್ ರೊ. ಆದರ್ಶ ಕಾರಂತರು ಭಾಗವಹಿಸಿದರು.

ವಲಯ ನಾಲ್ಕರಡಿಯಲ್ಲಿ ಬರುವ ರೋಟರಿ ಕ್ಲಬ್ ಗಳಿಗೆ ನಡೆದ ಈ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗುರುವಾಯನಕೆರೆಯ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ ಕುಮಾರ್ ಜೈನ್ ರವರು ವಹಿಸಿ, ಇಂತಹ ಕಾರ್ಯಕ್ರಮಗಳು ರೋಟರಿ ಕ್ಲಬ್ ನಡುವಿನ ಬಾಂಧವ್ಯವನ್ನು ಹೆಚ್ಚಿಸಲು ಸಹಕಾರಿ ಎಂದು ಹೇಳಿದರು.


ಫಲಿತಾಂಶಃ ಪ್ರಥಮ ಬಹುಮಾನವನ್ನು ರೋಟರೀ ಕ್ಲಬ್ ಪುತ್ತೂರು ಸಿಟಿ ಗಳಿಸಿದ್ದು, ದ್ವಿತೀಯ ಬಹುಮಾನವನ್ನು ಮೂಡಬಿದ್ರೆ ಟೆಂಪಲ್ ಟೌನ್ ರೋಟರಿ ಕ್ಲಬ್ ಪಡೆದರು. ಇದಲ್ಲದೆ ಅತ್ಯುತ್ತಮ ದಾಂಡಿಗ ರೋಟರೀ ಕ್ಲಬ್ ಪುತ್ತೂರು ಸಿಟಿಯ ಲೋಹಿತ್ ಕುಮಾರ್, ಅತ್ಯುತ್ತಮ ಬೌಲರ್ ರೋಟರೀ ಕ್ಲಬ್ ಪುತ್ತೂರು ಸಿಟಿಯ ಕಾರ್ತಿಕ್ ರೈ, ಅತ್ಯುತ್ತಮ ಫೀಲ್ಡರ್ ರೋಟರೀ ಕ್ಲಬ್ ಪುತ್ತೂರು ಸಿಟಿಯ ಕವನ್ ನಾಯ್ಕ, ಅತ್ಯುತ್ತಮ ವಿಕೇಟ್ ಕೀಪರ್ ರೋಟರೀ ಕ್ಲಬ್ ಮೂಡಬಿದ್ರೆ ಟೆಂಪಲ್ ಟೌನಿನ ವಿಶು ಪೂಹಾರಿ, ಮ್ಯಾನ್ ಆಫ್ ದಿ ಸಿರೀಸ್ ರೋಟರೀ ಕ್ಲಬ್ ಪುತ್ತೂರು ಸಿಟಿಯ ಲೋಹಿತ್ ಕುಮಾರ್ ಪಡೆದರು.

Related posts

ಬೆಳ್ತಂಗಡಿ ಯೋಜನೆಯ ಸೇವಾಪ್ರತಿನಿಧಿಗಳ ಪ್ರಗತಿ ಪರಿಶೀಲನಾ ಸಭೆ

Suddi Udaya

ವಸಂತ ಬಂಗೇರ ನಿಧನಕ್ಕೆ ಕೆ ಎಸ್ ಎಂ ಸಿ ಎ ಬೆಳ್ತಂಗಡಿ ಧರ್ಮ ಪ್ರಾಂತ್ಯ ಸಂತಾಪ

Suddi Udaya

ಉಜಿರೆ ಬದ್ರಿಯಾ ಜುಮ್ಮಾ ಮಸ್ಜಿದ್ ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

Suddi Udaya

ವೇಣೂರು ಗ್ರಾಮ ಪಂಚಾಯತ್ ನ ಮೊದಲ ಹಂತದ ಗ್ರಾಮಸಭೆ

Suddi Udaya

ನಾಳ: ದ್ವಿತೀಯ ವರ್ಷದ ಶ್ರೀ ದುರ್ಗಾ ಕಪ್ ಹಿರಿಯರ ಕ್ರಿಕೆಟ್ ಪಂದ್ಯಾಟ

Suddi Udaya

ಪುಂಜಾಲಕಟ್ಟೆ ಸ.ಪ.ಪೂ. ಕಾಲೇಜಿನ ಹಳೆ ವಿದ್ಯಾರ್ಥಿಗಳಿಂದ ನಿವೃತ್ತ ಯೋಧ ವಿಕ್ರಂ ಜೆ.ಎನ್ ರಿಗೆ ಸನ್ಮಾನ

Suddi Udaya
error: Content is protected !!