September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾಳೆಯಿಂದ ಬಂಡಾಜೆ ಜಲಪಾತ ವೀಕ್ಷಣೆಗೆ ಅವಕಾಶ

ಬೆಳ್ತಂಗಡಿ: ಚಾರಣಪ್ರಿಯರಿಗೆ ನ.20ರಿಂದ ಬಂಡಾಜೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಕಳೆದ ಹಲವು ತಿಂಗಳಿನಿಂದ ಕಾಡ್ಗಿಚ್ಚು ಭಯ, ಮಳೆಗಾಲ ಇತ್ಯಾದಿ ಕಾರಣಗಳಿಂದ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಹೇರಲಾಗಿತ್ತು. ಪ್ರಸ್ತುತ ಮಳೆ ಕಡಿಮೆಯಾಗಿದ್ದು, ಇದೀಗ ಮತ್ತೆ ಅವಕಾಶ ಕಲ್ಪಿಸಲಾಗಿದೆ.

ನೂರಾರು ಅಡಿ ಎತ್ತರದಿಂದ ನೀರು ಬಂಡಾಜೆ ಜಲಪಾತ ಧುಮ್ಮಿಕ್ಕುವ ಪ್ರದೇಶಕ್ಕೆ ಬೆಳ್ತಂಗಡಿ ತಾಲೂಕಿನ ಕಡಿರು ದ್ಯಾವರದಿಂದ ಚಾರಣದ ಮೂಲಕ ತಲುಪಬಹುದು. ಕುದುರೆಮುಖ ರಾಷ್ಟ್ರೀಯ ಉದ್ಯಾನ ವನದ ವ್ಯಾಪ್ತಿ ಯಲ್ಲಿರುವ ಈ ಜಲಪಾತಕ್ಕೆ ಹೋಗ ಬೇಕಾದರೆ 11 ಕಿ.ಮೀ. ದೂರವನ್ನು ಚಾರಣದ ಮೂಲಕವೇ ತಲುಪಬೇಕು.

ಕಡಿರುದ್ಯಾವರದಿಂದ ಕಡಿದಾದ ಹಾದಿ, ಜಾರುವ ಬಂಡೆಗಳು, ಅರಣ್ಯ ಪ್ರದೇಶ, ಸುತ್ತಲೂ ಬೆಳೆದಿರುವ ಮುಳಿ ಹುಲ್ಲು ಪೊದೆಗಳು ಅಲ್ಲಲ್ಲಿ ಹರಿಯುವ ನೀರು, ಇಂಬಳಗಳ ಕಾಟದೊಂದಿಗೆ ಚಾರಣ ನಡೆಸಿ ಆಕರ್ಷಕವಾದ ಬಂಡಾಜೆ ಜಲಪಾತವನ್ನು ತಲುಪಬಹುದು.

ರಮಣೀಯವಾದ ಈ ಜಲಪಾತ ವೀಕ್ಷಣೆಗೆ ತೆರಳುವ ವೇಳೆ ಕಾಡಾನೆ ಸಹಿತ ಇತರ ವನ್ಯಜೀವಿಗಳು ಎದುರಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಅತಿ ಅಗತ್ಯ, ಜಲಪಾತಕ್ಕೆ ತೆರಳುವ ದಾರಿಯ ಮಾಹಿತಿ ಇರುವ ಸ್ಥಳೀಯರು ಜತೆಗಿದ್ದರೆ ತಲುಪುವುದು ಸುಲಭ, ಚಾರಣದ ವೇಳೆ ಒಂದಿಷ್ಟು ದಾರಿ ತಪ್ಪಿದರೂ ಯಾವುದೇ ಮೊಬೈಲ್ ನೆಟ್ವಕ್ ೯ ಇಲ್ಲದ ಈ ಪರಿಸರದಲ್ಲಿ ಅಲೆಯ ಬೇಕಾಗಬಹುದು. ಈ ಹಿಂದೆ ಇಂತಹ ಹಲವಾರು ಪ್ರಕರಣಗಳು ನಡೆದಿವೆ.

ಚಾರ್ಮಾಡಿ ಗ್ರಾಮ ವ್ಯಾಪ್ತಿಯ ಲ್ಲಿರುವ ಈ ಜಲಪಾತಕ್ಕೆ ಕೊಟ್ಟಿಗೆಹಾರದ ಮೂಲಕವೂ ಹೋಗಬಹುದು. ಈ ಭಾಗದಿಂದ ಯಾವುದೇ ಪ್ರವೇಶ ನಿಷೇಧ ಇರಲಿಲ್ಲವಾದ ಕಾರಣ ಇಲ್ಲಿಗೆ ಸಾಕಷ್ಟು ಮಂದಿ ಬರುತ್ತಿದ್ದಾರೆ. ಆದರೆ ಕಡಿರು ದ್ಯಾವರದ ಮೂಲಕ ಚಾರಣ ನಡೆಸಿ ಜಲಪಾತ ವೀಕ್ಷಿಸುವ ಆನಂದ ಇಲ್ಲಿ ಸಿಗುವುದು ಕಡಿಮೆ.

Related posts

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್: ವಸಂತ ಗಿಳಿಯಾರ್ ವಿರುದ್ದ ಕಾನೂನು ಕ್ರಮಕ್ಕೆ ವಸಂತ ಬಂಗೇರ ಅಭಿಮಾನಿ ಬಳಗದಿಂದ ಒತ್ತಾಯ: ಸೌಜನ್ಯ ಆತ್ಯಚಾರ ಮತ್ತು ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಬೇಕೆಂಬುದು ವಸಂತ ಬಂಗೇರ ಅಭಿಮಾನಿ ಬಳಗದ ನಿಲುವು

Suddi Udaya

ಎಲ್.ಸಿ. ಆರ್. ಇಂಡಿಯನ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಅಖಿಲ ಭಾರತ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಅಮೋಘ ಸಾಧನೆ.

Suddi Udaya

ಎ.30-ಮೇ.3: ಮಾನ್ಯ ಸತ್ಯಚಾವಡಿ ತರವಾಡು ಮನೆಯ ಗೃಹಪ್ರವೇಶ: ಸ್ಥಳ ದೇವತಾ ಸಾನಿಧ್ಯಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಚಪ್ಪರ ಮೂಹೂರ್ತ

Suddi Udaya

ಬೆಳಾಲು ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಕೆಸರುಗದ್ದೆ ಕ್ರೀಡಾಕೂಟದ ಸಮಾರೋಪ ಸಮಾರಂಭ

Suddi Udaya

ಬೆಂಗಳೂರು ಯುವವಾಹಿನಿ ಘಟಕದಿಂದ ಯುವ ವೈಭವ 2025

Suddi Udaya

ಕೊರಂಜ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಮೆಟ್ರಿಕ್ ಮೇಳ

Suddi Udaya
error: Content is protected !!