September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನ.22: ಶ್ರೀ ಶಿಶಿಲೇಶ್ವರ ಯಕ್ಷ ಕಲಾ ಕೂಟದಿಂದ ಸಂಪೂರ್ಣ ಶಬರಿಮಲೆ ಅಯ್ಯಪ್ಪ ಯಕ್ಷಗಾನ ಬಯಲಾಟ

ಶಿಶಿಲ : ಶ್ರೀ ಶಿಶಿಲೇಶ್ವರ ಯಕ್ಷ ಕಲಾ ಕೂಟ, ಶಿಶಿಲ ಹಾಗೂ ಜಿಲ್ಲೆಯ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಸಂಪೂರ್ಣ ಶಬರಿಮಲೆ ಅಯ್ಯಪ್ಪ ಎಂಬ ತುಳು ಯಕ್ಷಗಾನ ಕಥಾ ಪ್ರಸಂಗವು ನ.22ರಂದು ಶಿಶಿಲ ವೈಕುಂಠಪುರ ಚಾಮುಂಡೇಶ್ವರೀ ಕ್ರೀಡಾಂಗಣದಲ್ಲಿ ನಡೆಯಲಿದೆ.

ಅಧ್ಯಕ್ಷತೆಯನ್ನು ಧಾರ್ಮಿಕ ಮುಖಂಡ ಕಿರಣ್‌ ಚಂದ್ರ ಡಿ. ಪುಷ್ಪಗಿರಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಂಚಿನಡ್ಕ ಸ್ವಾಮಿ ಕೊರಗಜ್ಜ ದೈವ ಸನ್ನಿಧಿ ಧರ್ಮದರ್ಶಿಗಳು ವೀರಪ್ಪ ಗೌಡ ಕೆ, ಶಿಶಿಲ ಗ್ರಾಮ ಪಂಚಾಯತು ಅಧ್ಯಕ್ಷ ಸುಧಿನ್ ಡಿ., ಶ್ರೀ ಶಿಶಿಲೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ಗೋಖಲೆ, ಶ್ರೀ ಶಿಶಿಲೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೂರಜ್ ನೆಲ್ಲಿತ್ತಾಯ ಹಾಗೂ ಇತರರು ಭಾಗವಹಿಸಲಿದ್ದಾರೆ.

ದಿಕ್ಕೂಚಿ ಭಾಷಣ ವಿಟ್ಲ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬೊಳಂತಿ ಮುಗೇರು ಶಿಕ್ಷಕ ವಿಠಲ್ ನಾಯಕ್ ವಹಿಸಲಿದ್ದಾರೆ.

ಹಿರಿಯ ಗುರುಸ್ವಾಮಿಗಳಾದ ಅಣ್ಣಿ ಯಾನೇ ಪದ್ಮಯ್ಯ ಗೌಡ ಮುಚ್ಚಿರಡ್ಕ, ಬಾಲಕೃಷ್ಣ ಗೌಡ ಗಾಣದಕೊಟ್ಟಿಗೆ, ಶಿಶಿಲ, ರಾಮಾನಾಥ ರೈ ಶಿಬರಾಜೆ, ವಿಠಲ್ ಗೌಡ ಉಪ್ಪರಡ್ಕ, ನೋಣಯ್ಯ ಗೌಡ ಮುಚ್ಚಿರಡ್ಕ, ಶಿಶಿಲ (ಇಂಡಿಯನ್ ಆರ್ಮಿಯಲ್ಲಿ ಸುಬೇದಾರ್ ರಾಗಿ 29 ವರ್ಷಗಳ ಸೇವೆ) ಗೌರವಾರ್ಪಣೆ ನಡೆಯಲಿದೆ.

Related posts

ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ : ರೂ.144ಕೋಟಿ ವ್ಯವಹಾರ, ಸದಸ್ಯರಿಗೆ ಶೇ.11 ಡಿವಿಡೆಂಟ್

Suddi Udaya

ಕಳಿಯ ವೈಷ್ಣವಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಮಹಾಸಭೆ

Suddi Udaya

ಎಸ್ಸೆಸ್ಸೆಲ್ಸಿ ಫಲಿತಾಂಶ: ಹೋಲಿ ರಿಡೀಮರ್ ಶಾಲೆಗೆ ಸತತ 11ನೇ ಬಾರಿಗೆ ಶೇ.100 ಫಲಿತಾಂಶ

Suddi Udaya

ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿಗಳಾಗಿ ಸೀತಾರಾಮ್ ಬೆಳಾಲು ಹಾಗೂ ವಸಂತಿ ಮಚ್ಚಿನ ಆಯ್ಕೆ

Suddi Udaya

ಧರ್ಮಸ್ಥಳ ಕಾಮಧೇನು ಸಂಘದ ವತಿಯಿಂದ ಆಟಿಡೊಂಜಿ ದಿನ ಆಚರಣೆ

Suddi Udaya

ನೆರಿಯ: 36ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರ ಸಂಪನ್ನ

Suddi Udaya
error: Content is protected !!