23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಯೋಜನೆಯ ಸೇವಾಪ್ರತಿನಿಧಿಗಳ ಪ್ರಗತಿ ಪರಿಶೀಲನಾ ಸಭೆ

ಬೆಳ್ತಂಗಡಿ : ಬೆಳ್ತಂಗಡಿ ಮತ್ತು ಗುರುವಾಯನಕೆರೆ ಯೋಜನೆಯ ಮಂಜುನಾಥ ಸ್ವಾಮಿ ಕಲಾಭವನ ಬೆಳ್ತಂಗಡಿಯಲ್ಲಿ ನಡೆದ ಸೇವಾಪ್ರತಿನಿಧಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಶ್ರೀಮತಿ ಶ್ರದ್ಧಾ ಅಮಿತ್ ರವರು ಮಾತನಾಡುತ್ತಾ
ಪೂಜ್ಯರು ಯೋಜನೆಯ ಪ್ರಥಮದ ದಿನಗಳ 1982/83 ರಲ್ಲಿ ರೈತರ ಕೃಷಿ ಭೂಮಿಯ ಅಭಿವೃದ್ಧಿ,ಪ್ರತಿಯೊಬ್ಬರಿಗೂ ಮೂಲಭೂತ ಸೌಕರ್ಯ, ಗ್ರಹ ಬಳಕೆಯ ಸಾಮಾಗ್ರಿಗಳು ಇದರ ಬಗ್ಗೆ ಪ್ರಥಮದ ಕಾರ್ಯಕರ್ತರು ಪ್ರತಿಯೊಬ್ಬರ ಮನೆ ಮನೆಗೆ ಕಾಲುನಡಿಗೆಯ ಮೂಲಕವಾಗಿ ಭೇಟಿಯನ್ನು ನೀಡಿ ಅವರ ಸಮಸ್ಯೆಗಳನ್ನು ಗುರುತಿಸಿ ವರದಿಯನ್ನು ಮಾಡುತ್ತಿದ್ದರು.

ಪೂಜ್ಯರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು, ಈ ವರದಿಗಳನ್ನು ವಿಮರ್ಶಿಸಿ, ಈ ವರದಿಗಳಿಗೆ ಪೂರಕವಾಗಿ ಪ್ರತಿಯೊಬ್ಬರ ಕಷ್ಟಗಳಿಗೆ ಸ್ಪಂದಿಸುವಂತೆ, ಆ ಪಟ್ಟಿಯಲ್ಲಿರುವ ಪ್ರತಿಯೊಬ್ಬರ ಸಾಮರ್ಥ್ಯವನ್ನು ಗುರುತಿಸಿ, ಕ್ಷೇತ್ರದಿಂದ ಇವರಿಗೆ ಬೇಕಾದ ಸಂಪೂರ್ಣವಾದ ಸಹಕಾರ ನೆರವನ್ನು ನೀಡಿ ಪ್ರತಿಯೊಬ್ಬರ ಬದುಕನ್ನು ಬೆಳಗಿಸಿ, ಹೊಸ ಚಿಗುರು ಹಳೆ ಬೇರು ಸೇರಿದಂತೆ ಮರ ಸೊಬಗು ಎನ್ನುವ ಗಾದೆಯಂತೆ, ಒಂದು ಮನೆಯ ಇಡೀ ಕುಟುಂಬಕ್ಕೆ ಒಬ್ಬ ಪಾಲುದಾರ ಸದಸ್ಯನ ಮೂಲಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಅವರ ಪ್ರಗತಿಯ ದಾರಿಗೆ ಯೋಜನೆ ಮೂಲ ಕಾರಣವಾಗಿದೆ. ಇದಕ್ಕೆ ಪೂರಕ ಕಣ್ಣ ಮುಂದೆ ಇಂತಹ ಅನೇಕ ಸಾಧಕರ ನಿದರ್ಶನಗಳಿವೆ ಎಂದು ತಿಳಿಸಿದರು. ಪೂಜ್ಯರು ಕ್ಷೇತ್ರಕ್ಕೆ ಭಕ್ತರು ಬಂದಾಗ ಅವರ ಕಷ್ಟಗಳನ್ನು ಪೂಜ್ಯರೊಂದಿಗೆ ಹೇಳಿಕೊಂಡಾಗ, ಪೂಜ್ಯರು ಪ್ರತಿಯೊಬ್ಬರಿಗೂ ಸಮಯವನ್ನು ನೀಡಿ ವ್ಯಕ್ತಿ ಗೌರವಕ್ಕೆ ಗೌರವವನ್ನು ನೀಡುತ್ತಿರುವುದು ನಮಗೆಲ್ಲರಿಗೂ ಮಾದರಿ ಎಂದರು. ಯೋಜನೆಯ ಪ್ರತಿಯೊಬ್ಬ ಕಾರ್ಯಕರ್ತರಿಗೂ ಗೌರವ ಇದೆ ಅದು ತನ್ನ ಸಾಧನೆಯ ಮೂಲಕವಾಗಿ ಆಗಬೇಕು, ಮಾತುಗಾರಿಕೆ ಮನವರಿಕೆ ವ್ಯಕ್ತಿ ಗೌರವ ಇದನ್ನು ನಾವು ನಮ್ಮಲ್ಲಿ ಮೊದಲಾಗಿ ತೊಡಗಿಸಿಕೊಳ್ಳಬೇಕು. ಸಮರ್ಪಕ ಕೆಲಸವೇ ನಮ್ಮ ಕರ್ತವ್ಯವನ್ನು ಗುರುತಿಸುತ್ತದೆ. ಪ್ರತಿಯೊಂದು ಕೆಲಸ ಎಂದಾಗ ಸವಾಲುಗಳು ಸಹಜ, ಆ ಸವಾಲುಗಳನ್ನು ಎದುರಿಸಿ ಸೇವೆಯನ್ನು ಮಾಡುತ್ತೇನೆ ಎನ್ನುವ ಆಯ್ಕೆ ನಮ್ಮಲ್ಲಿ ಇರಬೇಕು, ಯೋಜನೆಯ ಅಡಿಪಾಯ ಗಟ್ಟಿಯಾಗಿರುವ ಕಾರಣವಾಗಿಯೇ ಇಂದು ಯೋಜನೆ ಭದ್ರವಾಗಿದೆ. ಈ ಮೂಲಕ ಕಾರ್ಯಕರ್ತರಿಗೆ ಮಾರ್ಗದರ್ಶನವನ್ನು ನೀಡಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್ ಎಸ್ ಮಾನವೀಯತೆ ಮತ್ತು ಧರ್ಮದ ವ್ಯಾಖ್ಯಾನವೇ ಇದು.
ನನಗೆ ಯಾರಿಂದ ಯಾವುದನ್ನು ಬಯಸುತ್ತೇನೆಯೋ ಅದನ್ನೇ ನಾನು ಮತ್ತೊಬ್ಬರಿಗೂ ಕೂಡ ಮಾಡಬೇಕು ಬಯಸಬೇಕು,
ನನಗೆ ಯಾರಿಂದ ಯಾವುದನ್ನು ಬಯಸುವುದಿಲ್ಲವೋ ಅದನ್ನು ಮತ್ತೊಬ್ಬರಿಗೂ ಕೂಡ ನಾವು ಬಯಸಬಾರದು.
ಒಂದು ಮನಸ್ಸಿಗೆ ನಾವು ಬೇಸರ ಮಾಡಿದ್ದಲ್ಲಿ ಪ್ರೀತಿ ನಂಬಿಕೆ ಸ್ನೇಹ ಗೌರವ ಸಿಗಲು ಸಾಧ್ಯವಿಲ್ಲ, ನಾವು ಹೃದಯತನದಿಂದ ಸೇವೆಯನ್ನು ನೀಡಬೇಕು, ನಾವೆಲ್ಲರೂ ಕೂಡ ಯುವ ಸಮೂಹದೊಂದಿಗೆ ಒಂದಾಗಿ ಯೋಜನೆಯನ್ನು ಕಟ್ಟಬೇಕಾಗಿದೆ ಎಂದರು.

ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ , ಯೋಜನೆಯ ಕಾರ್ಯಕ್ರಮಗಳ ಮೂಲದಿಂದ ಇಲ್ಲಿಯವರೆಗೆ ಅನುಷ್ಠಾನದ ಹಂತಗಳು ಹಾಗೂ ಇದರಿಂದ ಪಾಲುದಾರ ಮಿತ್ರರು ಅಭಿವೃದ್ಧಿಯ ಪತದದಾರಿಗೆ ಸಾಗಿದ ಪೂರ್ಣ ಚಿತ್ರಣವನ್ನು ತಿಳಿಸಿದರು,
ಮುಂದಕ್ಕೆ ಪಾಲುದಾರ ಬಂಧುಗಳಲ್ಲಿ ಯೋಜನೆಯ ಪೂರ್ಣ ಸಹಕಾರದೊಂದಿಗೆ ಆಗಬೇಕಾದ ಅಭಿವೃದ್ದಿಯ ಬಗ್ಗೆ ಪೂರ್ಣ ಮಾಹಿತಿ ಮಾರ್ಗದರ್ಶನ ನೀಡಿದರು.

ನಿವೃತ್ತ ಪ್ರಾದೇಶಿಕ ನಿರ್ದೇಶಕರಾದ ಮಹಾವೀರ ಅಜ್ರಿ ಉಪಸ್ಥಿತರಿದ್ದರು.
ಜಿಲ್ಲಾ ನಿರ್ದೇಶಕರಾದ ದಿನೇಶ್ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಸ್ವಾಗತಿಸಿದರು,
ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಯಶೋಧರ್ ಮತ್ತು ಗುರುವಾಯನಕೆರೆ ತಾಲೂಕಿನ ಯೋಜನಾಧಿಕಾರಿ ಅಶೋಕ್, ಯೋಜನೆಯ ಬೆಳ್ತಂಗಡಿ ತಾಲೂಕಿನ ಮತ್ತು ಗುರುವಾಯನಕೆರೆ ತಾಲೂಕಿನ ಮೇಲ್ವಿಚಾರಕರು ಮತ್ತು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

Related posts

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ಕ್ಷೇತ್ರದ ವತಿಯಿಂದ ರಸ್ತೆಗೆ ಅಳವಡಿಸಿದ ಗೇಟು ತೆರವು

Suddi Udaya

ಕುತ್ಲೂರು: ಅಕ್ರಮ ಗೋಮಾಂಸ ಸಾಗಾಟ : ಇಬ್ಬರು ಆರೋಪಿಗಳು ಪೊಲೀಸರ ವಶ

Suddi Udaya

ಯೂಟ್ಯೂಬ್ ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಸಂಬಂಧ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ಮಹೇಶ್ ಶೆಟ್ಟಿ ತಿಮರೋಡಿ ಯವರನ್ನು ಬಂಧಿಸಿದ ಬ್ರಹ್ಮಾವರ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಜಾಮೀನು ಅರ್ಜಿ ವಜಾಗೊಳಿಸಿ ನ್ಯಾಯಾಂಗ ಬಂಧನ

Suddi Udaya

ಬೆಳ್ತಂಗಡಿ ಕರ್ನಾಟಕ ಗಮಕ ಕಲಾ ಪರಿಷತ್, ವತಿಯಿಂದ ‘ಮನೆ ಮನೆ ಗಮಕ’ ವಿನೂತನ ಕಾರ್ಯಕ್ರಮ

Suddi Udaya

ಓಡಿಲ್ನಾಳ: ವಲೇರಿಯನ್ ಪಾಯಸ್ ನಿಧನ

Suddi Udaya

ಚಾರ್ಮಾಡಿ ಬೂತ್ ಸಂಖ್ಯೆ 21ರಲ್ಲಿ ಕೈ ಕೊಟ್ಟ ಮತ ಯಂತ್ರ

Suddi Udaya
error: Content is protected !!