September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬದ್ಯಾರ್ ಕಡೆಗೆ ಹೋಗುವ ಸಂಪರ್ಕ ರಸ್ತೆ ಪೂರ್ತಿ ಕಸ ಕಡ್ಡಿ: ಕಸ ಎಸೆಯುವವರ ವಿರುದ್ಧ ಕ್ರಮಕ್ಕೆ ನಾಗರಿಕರ ಆಗ್ರಹ

ಬೆಳ್ತಂಗಡಿ: ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಯವರ ಕನಸು ಸ್ವಚ್ಛ ಭಾರತ್ ನಿರ್ಮಾಣ ದ ಕನಸು.. ವಿದ್ಯಾವಂತ ರ ನಾಡು ಬುದ್ದಿವಂತರ ಜಿಲ್ಲೆ ನಮ್ಮ ಜಿಲ್ಲೆ ಎಂದು ಹೇಳೆಕೊಳ್ಳಲು ನಮೆಗೆಲ್ಲರೂ ಹೆಮ್ಮೆಯ ವಿಷಯ… ಇದೆಲ್ಲಾ ತಿಳಿದಿರುವ ವಿದ್ಯಾವಂತ ಬುದ್ದಿವಂತ ಜನರು ಮಾಡುವ ಕೆಲಸ ನೀವೇ ನೋಡಿ. ಕುವೆಟ್ಟು ಗ್ರಾಮದ ಗುರುವಾಯನಕೆರೆ -ಕಾರ್ಕಳ ರಸ್ತೆಯ ಶಕ್ತಿನಗರ ವೃತ್ತದ ಸಮೀಪ ಇರುವ ದೈಕುಕ್ಕು ಎಂಬಲ್ಲಿ ಹೆದ್ದಾರಿ ಬದಿಯಿಂದ ಬದ್ಯಾರ್ ಕಡೆಗೆ ಇರುವ ಸಂಪರ್ಕ ರಸ್ತೆ ಪೂರ್ತಿ ಕಸ ಕಡ್ಡಿ, ಕೊಳೆತು ನಾರುವ ಪ್ರಾಣಿಗಳು, ಇನ್ನಿತರ ವಸ್ತು ಗಳನ್ನು ಬಿಸಾಕಿ ತ್ಯಾಜ್ಯ ವಿಲೇವಾರಿ ಘಟಕ ದಂತಾಗಿದೆ..

ಈ ರಸ್ತೆಯಲ್ಲಿ ಮೂಗು ಮುಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಕಸ ಎಸೆಯದಂತೆ ಒಂದು ಎಚ್ಚರಿಕೆಯ ಬೋರ್ಡ್ ಅಳವಡಿಸಲಾಗಿದೆ .ಆದರೂ ಇಲ್ಲಿ ಕಸ ತಂದು ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರದೇಶದಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಿ ತ್ಯಾಜ್ಯ ಹಾಗೂ ಕಸ ಕಡ್ಡಿ ಬಿಸಾಕುವವರ ಮೇಲೆ ಸೂಕ್ತ ಕ್ರಮ ಜರಗಿಸಿ ದಂಡ ವಿಧಿಸಬೇಕಾಗಿ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

  • ವರದಿ: ನೇಸರ ಕಟ್ಟೆ

Related posts

ಜ.22: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ 108 ಕಾಯಿ ಗಣಹೋಮ ಹಾಗೂ ಮೂಡಪ್ಪ ಸೇವೆ

Suddi Udaya

ಶಿಬಾಜೆ: ಬರ್ಗುಳದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವದ ಗುರುತು ಪತ್ತೆ: ಪತ್ತಿಮಾರು ನಿವಾಸಿ ಪ್ರಸಾದ್ ಪೂಜಾರಿ ಮೃತ ವ್ಯಕ್ತಿ

Suddi Udaya

ಕಲ್ಮಂಜ ಸರಕಾರಿ ಪ್ರೌಢಶಾಲೆಯಲ್ಲಿ ಹದಿಹರೆಯದ ಆರೋಗ್ಯ ಮತ್ತು ಶುಚಿತ್ವ ಕಾರ್ಯಕ್ರಮ

Suddi Udaya

ಬೆಳಾಲು: ಮಾಯ ಮಹಾದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆ

Suddi Udaya

ಬೆಳ್ತಂಗಡಿಯಲ್ಲಿ 80ನೇ ಸ್ವಾತಂತ್ರ್ಯ ಸಂಭ್ರಮ: ಹಿರಿಯ ಕಾಂಗ್ರೆಸ್ ಮುಖಂಡರಿಗೆ ಸನ್ಮಾನ

Suddi Udaya

ಕನ್ಯಾಡಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ರಕ್ಷಿತ್ ಶಿವರಾಮ್

Suddi Udaya
error: Content is protected !!