September 6, 2026
ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಕ್ಸೆಲ್ ಕಾಲೇಜು ಭರವಸೆಯ ಪ್ರತೀಕ, ಶಕ್ತಿಯ ಮೂಲ,ಭವಿಷ್ಯದ ಕೇಂದ್ರ ಶೈಕ್ಷಣಿಕ ಕ್ಷೇತ್ರದ ಅದ್ಬುತ ಯುವ ಸಾಧಕ ಸುಮಂತ್ ಕುಮಾರ್ ರವರ ಇಚ್ಚಾಶಕ್ತಿ ಮತ್ತು ಬದ್ಧತೆಯನ್ನು ಮೆಚ್ಚುವಂತದ್ದು ಎಕ್ಸೆಲ್ ಕಾಲೇಜಿನ ಶೈಕ್ಷಣಿಕ ಸಾಧನೆಯನ್ನು ಕೊಂಡಾಡಿದ ಖ್ಯಾತ ಚಿತ್ರನಟ ರಮೇಶ್ ಅರವಿಂದ್

ಬೆಳ್ತಂಗಡಿ: ಎಕ್ಸೆಲ್ ಎಂದರೆ ಭರವಸೆ,ಎಕ್ಸೆಲ್ ಎಂದರೆ ಸ್ಪೂರ್ತಿ,ಎಕ್ಸೆಲ್ ಎಂದರೆ ಶಕ್ತಿ,ಎಕ್ಸೆಲ್ ಎಂದರೆ ಭವಿಷ್ಯ, ನಮ್ಮಲ್ಲಿರುವ ಶಕ್ತಿಯನ್ನು ಹೊರಗಿನ ಪ್ರಪಂಚಕ್ಕೆ ತೋರಿಸಬೇಕು,ಆವಾಗ ಮಾತ್ರ ಜಗತ್ತು ಸುಂದರವಾಗಿ ಕಾಣುತ್ತದೆ ಎಂದು ಖ್ಯಾತ ಚಿತ್ರನಟ ರಮೇಶ್ ಅರವಿಂದ ಅವರು ಎಕ್ಸೆಲ್ ಕಾಲೇಜಿನ “ಎಕ್ಸೆಲ್ ಪರ್ಬ” ಸಮಾರಂಭದಲ್ಲಿ ನ.28 ರಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮನ್ನ ನಾವು ಒಂದು ಒಳ್ಳೆಯ ಉದ್ದೇಶಕ್ಕೆ,ಒಳ್ಳೆಯ ಕೆಲಸಕ್ಕೆ ಉಪಯೋಗಿಸಬೇಕು. ನಾವು ಮಾಡುವ ಪ್ರತಿಯೊಂದು ಕೆಲಸವನ್ನು ದೇವರು ನೋಡುತ್ತಾ ಇರುತ್ತಾರೆ. ಹಾಗಾಗಿ ನಾವು ಮಾಡುವ ಕೆಲಸ ಸರಿಯಾಗಿ ಮಾಡಬೇಕು.ಯಾವುದೇ ಕಲೆಯನ್ನು ತೆಗೆದುಕೊಂಡರು,ಯಾವುದೇ ಜಾಗದಲ್ಲಿದ್ದರು ಅದರಲ್ಲಿ ವಿಶೇಷವಾಗಿ ಸಾಧನೆ ಮಾಡಬೇಕು.

ನಮ್ಮಲ್ಲಿ ನಾವು ಮೌಲ್ಯಯುತವನ್ನು ತೊಡಗಿಸಿಕೊಳ್ಳಬೇಕು.ನಮ್ಮ ಬಗ್ಗೆ ನಾವು ಅನುಮಾನ ಪಡಬಾರದು, ಯಾರಿಗೂ, ಏನೇ ಆದರೂ ಹೆದರಬಾರದು ಆವಾಗ ಮಾತ್ರ ನಾವು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ.ಜೀವನದಲ್ಲಿ ನಗು ನಗುತ್ತಾ ಇರಬೇಕು,ಖುಷಿ ಖುಷಿಯಿಂದ ಇರಬೇಕು, ಭಯವನ್ನು ಮೊದಲು ತೆಗೆದು ಹಾಕಿದಾಗ ಯಶಸ್ವಿನ ಶಿಖರವೇರಬಹುದು ಎಂದು ರಮೇಶ್ ಅರವಿಂದ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಎಕ್ಸೆಲ್ ಸುಂದರವಾದ ವಿದ್ಯಾಕೇಂದ್ರ, ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವವರು ನಿಜವಾಗಿಯೂ ಭಾಗ್ಯವಂತರು.ನಮ್ಮ ಭವಿಷ್ಯ ನಮ್ಮ ಕೈಯಲೇ ಇದೇ ಹೊರತು ಬೇರಲ್ಲೂ ಇಲ್ಲಾ. ವಿದ್ಯಾರ್ಥಿಗಳು ಉತ್ತಮವಾಗಿ ಕಲಿತು ದೇಶಕ್ಕೆ ಶಕ್ತಿಯಾಗಬೇಕು‌ ಎಂದರು.ಸುಮಂತ್ ಕುಮಾರ್ ಒರ್ವ ಶೈಕ್ಷಣಿಕ ಕ್ಷೇತ್ರದ ಅದ್ಬುತ ಯುವ ಸಾಧಕ.ಅವರ ತ್ಯಾಗ,ಬದ್ದತೆ,ಇಚ್ಛಾಶಕ್ತಿಯಿಂದ ಇಂದು ಎಕ್ಸೆಲ್ ವಿಜೃಂಬಿಸುತ್ತಿದೆ ಎಂದರು.

Related posts

ಉದ್ಯಮಿ ಎ.ಸಿ.ಕುರಿಯನ್ ರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ವಾಣಿ ಕಾಲೇಜಿನ ತುಳು ಸಂಘದ ಆಶ್ರಯದಲ್ಲಿ ‘ಆಟಿ ಒಂಜಿ ನೆಂಪು’ ಕಾರ್ಯಕ್ರಮ

Suddi Udaya

ಶಿಶಿಲ ಶ್ರೀ ಕ್ಷೇತ್ರ ಚಂದ್ರಪುರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ: ಹಿರಿಯ ಸಂಶೋಧಕ ಡಾ. ಎಸ್.ಡಿ. ಶೆಟ್ಟಿ ದಂಪತಿಗಳಿಗೆ ಗೌರವಾರ್ಪಣೆ

Suddi Udaya

ಯುವವಾಹಿನಿ ವೇಣೂರು ಘಟಕದ “ಆಸರೆ” ಯೋಜನೆಯ ಸಹಾಯಹಸ್ತ ವಿತರಣೆ

Suddi Udaya

ಕೊಯ್ಯೂರು: ಪಾರೊಟ್ಟು ನಿವಾಸಿ ಹೊನ್ನಪ್ಪ ಗೌಡ ನಿಧನ

Suddi Udaya

ಬೆಳ್ತಂಗಡಿ: ಕೆಲ್ಲಗುತ್ತು ಪರಿಸರದಲ್ಲಿ ಚಿರತೆ ಓಡಾಟ : ಎಚ್ಚರಿಕೆ ವಹಿಸುವಂತೆ ಪ.ಪಂ ನಿಂದ ಸೂಚನೆ

Suddi Udaya
error: Content is protected !!