ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕೊಕ್ಕಡ ಅಮೃತ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ

ಕೊಕ್ಕಡ: ಪಂಚಾಯತ್ ನಿಧಿಯ ಮೂಲಕ ಅಡೈ ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆ ರೂ. 2 ಲಕ್ಷ , ಹಳ್ಳಿಂಗೇರಿ ಸೌತಡ್ಕ ಸಂಪರ್ಕ ರಸ್ತೆ ಮಲ್ಲಿಗೆ ಮಜಲ್ ಎಂಬಲ್ಲಿ ಕಾಂಕ್ರೀಟ್ ರೂ.1 ಲಕ್ಷ, ಹಾರಪದ್ದಡ್ಕ ಒಳ ರಸ್ತೆಯ ಕಾಂಕ್ರೀಟ್ ರೂ.,1 ಲಕ್ಷ ಅನುದಾನಗಳಲ್ಲಿ ಕಾಮಗಾರಿಗಳಿಗೆ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ಹಾಗೂ ಕೊಕ್ಕಡ ಸಿ ಎ ಬ್ಯಾಂಕ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭ ಕೊಕ್ಕಡ ಪಂಚಾಯತಿ ಉಪಾಧ್ಯಕ್ಷ ಪ್ರಭಾಕರ ಗೌಡ ಮಲ್ಲಿಗೆ ಮಜಲು, ಕೊಕ್ಕಡ ಗ್ರಾಮ ಪಂಚಾಯತಿನ ನಿಕಟ ಪೂರ್ವ ಅಧ್ಯಕ್ಷ ಯೋಗೀಶ್ ಆಳಂಬಿಲ, ಉಪಾಧ್ಯಕ್ಷೆ ಶ್ರೀಮತಿ ಪವಿತ್ರ, ಸದಸ್ಯರುಗಳಾದ ಶ್ರೀಮತಿ ವನಜಾಕ್ಷಿ, ಜಗದೀಶ್ ಕೆಂಪಕೋಡಿ, ಶ್ರೀಮತಿ ಲತಾ, ಪುರುಷೋತ್ತಮ, ಶ್ರೀಮತಿ ಜಾನಕಿ, ಕೊಕ್ಕಡ ಸಿ. ಎ ಬ್ಯಾಂಕಿನ ನಿರ್ದೇಶಕರಾದ ಶ್ರೀನಾಥ್ ಬಡಕೈಲು, ರವಿಚಂದ್ರ, ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ ಪ್ರಶಾಂತ್ ಪೂವಾಜೆ, ಬೆಳ್ತಂಗಡಿ ಮಂಡಲ ಎಸ್.ಟಿ ಮೋರ್ಚಾ ಕಾರ್ಯದರ್ಶಿ ವಿಠಲ್ ಕುರ್ಲೆ, ಬೂತ್ ಸಮಿತಿಯ ಅಧ್ಯಕ್ಷ ಲಿಂಗಪ್ಪಗೌಡ ಕಡಿರ, ಕಾರ್ಯದರ್ಶಿ ಶ್ರೀಧರ ಬಳಕ, ಕಿಶೋರ್ ಪೋಯ್ಯೋಳೆ, ಪಂಚಾಯತ್ ಸಿಬ್ಬಂದಿ ಕೇಶವ ಉಪಸ್ಥಿತರಿದ್ದರು.

Related posts

ಅರಸಿನಮಕ್ಕಿ: ಮುದ್ದಿಗೆಯಲ್ಲಿ ಪ್ರೇಮಚಂದ್ರರವರ ವಿದ್ಯುತ್ ಪಂಪ್ ಶೆಡ್ ಕುಸಿತ : ಅಪಾರ ಹಾನಿ

Suddi Udaya

ಸಿರಿ ಸಂಸ್ಥೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಹಾಗೂ “ಸಿರಿ ಕ್ಲಬ್” ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಬಜಿಲ ಕಿ.ಪ್ರಾ. ಶಾಲೆಯಲ್ಲಿ ಶ್ರಮದಾನ, ಪೋಷಕರಿಂದ ಮಾದರಿ ಶಾಲಾ ಕೈತೋಟ ನಿರ್ಮಾಣ

Suddi Udaya

ಅಕ್ಷರ ಕಲಿಸುವ ವಿದ್ಯಾ ದೇಗುಲಕ್ಕೆ ಖದೀಮರ ಕನ್ನ, ಕಣಿಯೂರಿನ ಪಿಲಿಗೂಡು ಶಾಲೆ ಬೀಗ ಒಡೆದು‌ ಕಳ್ಳತನ:

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ಪಿ.ಯು ಕಾಲೇಜಿಗೆ ಶೇ.93 ಫಲಿತಾಂಶ

Suddi Udaya

ಬೆಳ್ತಂಗಡಿ ಭಾರತೀಯ ಕಿಸಾನ್ ಸಂಘದ ಮಾಸಿಕ ಸಭೆ ಹಾಗೂ ಶ್ರೀ ಬಲರಾಮರ ಜಯಂತಿ ಆಚರಣೆ

Suddi Udaya
error: Content is protected !!