32.9 C
ಪುತ್ತೂರು, ಬೆಳ್ತಂಗಡಿ
March 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಿಟ್ಟಡೆ ಕುಂಭಶ್ರೀ ಆಂ.ಮಾ. ವಸತಿ ಶಾಲೆ ಮತ್ತು ಕಾಲೇಜಿನ ಸಂಸ್ಥಾಪಕ ಗಿರೀಶ್ ಕೆ ಹೆಚ್ ರವರು ಶಿಕ್ಷಣ ಸಿಂಧೂರ ಪ್ರಶಸ್ತಿಗೆ ಆಯ್ಕೆ

ಕುಂಭಶ್ರೀ ಆಂಗ್ಲ ಮಾಧ್ಯಮ ವಸತಿ ಶಾಲೆ ಮತ್ತು ಕಾಲೇಜು ನಿಟ್ಟಡೆ ವೇಣೂರು ಇಲ್ಲಿನ ಸಂಸ್ಥಾಪಕ ಗಿರೀಶ್ ಕೆ ಹೆಚ್ ರವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಅಮೋಘ ಸಾಧನೆಗಾಗಿ ಶಿಕ್ಷಣ ಸಿಂಧೂರ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.

ಹಳ್ಳಿ ಪ್ರದೇಶದಲ್ಲಿ ಬಡ ವಿದ್ಯಾರ್ಥಿಗಳಿಗೆ ಉತ್ತಮ ಮಟ್ಟದ ವಿದ್ಯಾಭ್ಯಾಸವನ್ನು ಪಡೆಯುವ ಉದ್ದೇಶಕ್ಕಾಗಿ 1996 ರಲ್ಲಿ ಪ್ರಾರಂಭಗೊಂಡ ವಿದ್ಯಾಸಂಸ್ಥೆಯು ಉತ್ತಮ ಮಟ್ಟದ ವಿದ್ಯಾಭ್ಯಾಸವನ್ನು ನೀಡುತ್ತಿದೆ. ಶಿಕ್ಷಣಕ್ಕೆ ಮಾತ್ರ ಪ್ರಶಸ್ತಿಯನ್ನು ನೀಡುವುದಲ್ಲದೆ ಸಂಗೀತ, ಭರತನಾಟ್ಯ, ಕರಾಟೆ ,ಯೋಗ, ಡ್ಯಾನ್ಸ್ ತರಗತಿಗಳು ನುರಿತ ತರಬೇತುದಾರದಿಂದ ನಡೆಯುತ್ತದೆ. ಅನುಭವಿ ಶಿಕ್ಷಕರು ಮತ್ತು ಉಪನ್ಯಾಸಕರಿಂದ ಉತ್ತಮ ಮಟ್ಟದ ಶಿಕ್ಷಣ ನೀಡಲಾಗುತಿದ್ದು,ಶೈಕ್ಷಣಿಕ ಸಾಧನೆಗೆ ಸ್ಟಾರ್ ಆಫ್ ಏಷ್ಯಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ,ಪ್ರಭುದ್ಧ ಭಾರತ ಶಿಕ್ಷಣ ಬೀಷ್ಮ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ .

ಈ ಎಲ್ಲಾ ಸಾಧನೆಯನ್ನು ಗುರುತಿಸಿ, ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಚಾರಿಟೇಬಲ್ ಸೇವಾ ಟ್ರಸ್ಟ್ ಮಂಗಳೂರು ಸಯೋಗದಲ್ಲಿ 2026 ರ ಜನವರಿ 4 ರಂದು ಮಂಗಳೂರು ಕುದ್ಮುಲ್ ರಂಗರಾವ್ ಪುರಭವನ ವೇದಿಕೆಯಲ್ಲಿ ನಡೆಯಲಿರುವ ಕುಂಭ ಕಲಾವಳಿ ಕುಲಾಲ ಕಲಾ ಸೇವಾಂಜಲಿ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರಧಾನ ನಡೆಯಲಿದೆ .ಇದು ಶಾಲಾ ಆಡಳಿತ ಮಂಡಳಿಗೆ ತುಂಬಾ ಹೆಮ್ಮೆಯ ವಿಷಯವಾಗಿದೆ.

Related posts

ಅರಸಿನಮಕ್ಕಿ: ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡನಾಟಿ ಕಾರ್ಯಕ್ರಮ

Suddi Udaya

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ವತಿಯಿ೦ದ ರಾಜ್ಯ ಮಹಿಳಾಗೋಷ್ಠಿ

Suddi Udaya

ಮೇ.8(ನಾಳೆ): ಎಸ್.ಡಿ.ಪಿ.ಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ರವರಿಂದ ಬೃಹತ್ ರೋಡ್ ಶೋ ಮತ್ತು ಮತ ಯಾಚನೆ

Suddi Udaya

ಎಸ್‌ಡಿಯಂ ಇಂಜಿನಿಯರಿಂಗ್ ಕಾಲೇಜು: ಸ್ಟಾರ್ಟಅಪ್‌ಗಾಗಿ ಒಡಂಬಡಿಕೆ ಸಹಿ

Suddi Udaya

ಡಿ.2 : ಕಾಪಿನಡ್ಕದಲ್ಲಿ 65 ಕೆಜಿ ವಿಭಾಗದ ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ: ಸ.ಕಿ.ಪ್ರಾ.ಶಾಲೆ ಮತ್ತು ಗೆಳೆಯರ ಬಳಗ ಕಾಪಿನಡ್ಕ ಇದರ 25 ನೇ ವರ್ಷದ ರಜತ ಮಹೋತ್ಸವ ಸಂಭ್ರಮ

Suddi Udaya

ಭಗವದ್ಗೀತೆಯ ಕಂಠಪಾಠ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯನ್ನು ಪಡೆದ ಕುಮಾರಿ ಅದ್ವಿತಿ ರಾವ್ ರವರಿಗೆ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ವತಿಯಿಂದ ಸನ್ಮಾನ

Suddi Udaya
error: Content is protected !!