September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಡಿ.7: ಬೆಳ್ತಂಗಡಿಯಲ್ಲಿ ಜೇಸಿ ಉತ್ಸವ, ವಿವಿಧ ಸ್ಪರ್ದೆಗಳು, ಸಾಂಸ್ಕೃತಿಕ ಕಾರ್ಯಕ್ರಮ, ಸಾಧನಾಶ್ರೀ ಪ್ರಶಸ್ತಿ

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ಪ್ರಾಂತ್ಯ ‘ಡಿ’ ವಲಯ 15, ಜೆಸಿಐ ಭಾರತ ಇದರ ಜೇಸಿ ಉತ್ಸವ ಇದು ಸಾಂಸ್ಕೃತಿಕ ಮತ್ತು ಕ್ರೀಡಾ ಆರಾಧನೆ 2025 ಕಾರ್ಯಕ್ರಮವು ಡಿ.7ರಂದು ಬೆಳ್ತಂಗಡಿ ಸಂತೆಕಟ್ಟೆ ಸಮಾಜ ಮಂದಿರ ಬಯಲು ರಂಗಮಂದಿರದಲ್ಲಿ ನಡೆಯಲಿರುವುದು ಎಂದು ಅಧ್ಯಕ್ಷರಾದ ಜೆಸಿ ಆಶಾಲತಾ ಪ್ರಶಾಂತ್ ತಿಳಿಸಿರುತ್ತಾರೆ.

ಸಾಂಸ್ಕೃತಿಕ ಆರಾಧನೆಯ ಉದ್ಘಾಟನೆಯನ್ನು ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಉದ್ಘಾಟಿಸಲಿರುವರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಮಂಗಳೂರು ವಿದ್ಯುಚ್ಛಕ್ತಿ ಮಂಡಳಿ ಅಧ್ಯಕ್ಷ ಕೆ. ಹರೀಶ್ ಕುಮಾರ್, ಜೆಎಫ್ಎಫ್ ಸಂತೋಷ್ ಶೆಟ್ಟಿ ವಲಯಾಧ್ಯಕ್ಷರು-2026, ವಲಯ 15 ಜೆಸಿಐ ಭಾರತ, ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್, ವಕೀಲರು, ಜಿಲ್ಲಾ ಕೆಡಿಪಿ ಸದಸ್ಯರು ಸಂತೋಷ್ ಕುಮಾರ್ ಲಾಯಿಲ, ಉದ್ಯಮಿ
ರಾಜೇಶ್ ಶೆಟ್ಟಿ, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ, ಜೆಎಫ್ಎಂ ರಂಜಿತ್ ಎಚ್ ಡಿ ವಲಯ ಉಪಾಧ್ಯಕ್ಷರು, ವಲಯ 15 ಜೆಸಿಐ ಭಾರತ ಭಾಗವಹಿಸಲಿರುವರು.

ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಬೆಳ್ತಂಗಡಿ ಪೊಲೀಸ್‌ ಉಪವಿಭಾಗ ಡಿವೈಎಸ್ಪಿ ರೋಹಿಣಿ ಸಿಕೆ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾ‌ರ್ ಜೈನ್‌, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆಎನ್ ಜನಾರ್ಧನ್, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ವಕೀಲರುಗಳಾದ ಧನಂಜಯ್ ರಾವ್, ಅನಿಲ್ ಕುಮಾರ್ ಯು, ಪೂರಣ್ ವರ್ಮ ಸಿಇಒ, ಐಟಿ ಮತ್ತು ವಸತಿ ನಿಲಯ ಆಡಳಿತ ಎಸ್ ಡಿ ಎಂ ಎಜುಕೇಶನ್ ಸೊಸೈಟಿ, ಉಜಿರೆ ಭಾಗವಹಿಸಲಿರುವರು.

ಸಾಧನಾಶ್ರೀ ಪ್ರಶಸ್ತಿ ಪುರಸ್ಕಾರ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಸುಂದರ ಹೆಗ್ಡೆ ವೇಣೂರು( ಸಾಂಸ್ಕೃತಿಕ), ಡಾ. ಗೋಪಾಲಕೃಷ್ಣ ಕಾಂಚೋಡು(ಕೃಷಿ), ಡಾ. ಮುರಳಿ ಕೃಷ್ಣ ಇರ್ವತ್ರಾಯ( ವೈದ್ಯಕೀಯ), ಅವಿನಾಶ್ ರಾವ್(ಉದ್ಯಮ), ಪ್ರಕಾಶ್ ಫೆರ್ನಾಂಡಿಸ್(ಸಮಾಜ ಸೇವೆ), ಅಶೋಕ್ ಕುಮಾರ್ ಲಾಯಿಲ( ಪರಿಸರ), ರಕ್ಷಿತಾ ಜೆ(ಕ್ರೀಡೆ) ರವರುಗಳಿಗೆ ಸಾಧನಾಶ್ರೀ ಪ್ರಶಸ್ತಿ ಪುರಸ್ಕಾರ, ಡಾ. ಅಂಕಿತ ಜಿ. ಭಟ್ ರವರಿಗೆ ಅತ್ಯುತ್ತಮ ಯುವ ಸಾಧಕ ಪ್ರಶಸ್ತಿ, ದೀಪಕ್ ಜಿ. ರವರಿಗೆ ಯುವ ಪ್ರೇರಣಾ ಪ್ರಶಸ್ತಿಗೆ ಪಾತ್ರರಾಗಿಸುತ್ತಾರೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷ ತೆಲಿಕೆ ತಂಡದಿಂದ ಯಕ್ಷ ಯುವರತ್ನ ಧೀರಜ್ ರೈ ಸಂಪಾಜೆ ಇವರ ಸಾರಥ್ಯದಲ್ಲಿ ಯಕ್ಷ ಹಾಸ್ಯ ವೈಭವ, ಜೇಸಿ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ತಾಲೂಕು ಮಟ್ಟದ ಭಾವಗೀತೆ ಸ್ಪರ್ಧೆ, ಜಿಲ್ಲಾ ಮಟ್ಟದ ಜೇಸಿ ಸ್ಟಾರ್ ಸಿಂಗರ್ ಸ್ಪರ್ಧೆ, ಜಿಲ್ಲಾ ಮಟ್ಟದ ಜನಪದ ಸಮೂಹ ಗಾಯನ ಸ್ಪರ್ಧೆ, ಮುಕ್ತ ಕೇರಂ ಸ್ಪರ್ಧೆ, ತಾಲೂಕು ಮಟ್ಟದ ಮುಕ್ತ ಚೆಸ್ ಸ್ಪರ್ಧೆ, ತಾಲೂಕು ಮಟ್ಟದ ಡ್ರಾಯಿಂಗ್ ಸ್ಪರ್ಧೆ, ರಾಜ್ಯ ಮಟ್ಟದ ಫಿಲ್ಮಂ ಡ್ಯಾನ್ಸ್ ಸ್ಪರ್ಧೆ ಜರುಗಲಿದೆ. ಜೇಸಿ ಸಾಂಸ್ಕೃತಿಕ ಉತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿ ಸ್ಟ್ರೀಟ್ ಫುಡ್ ಆಹಾರಮೇಳ ಹಾಗೂ ವ್ಯಾಪಾರ ಮಳಿಗೆ ಮತ್ತು ಪ್ರದರ್ಶನ ಮಳಿಗೆ, ವ್ಯಂಗ್ಯ ಚಿತ್ರ ರಚನೆ ಇರುವುದು ಎಂದು ಸಂಘಟಕರು ತಿಳಿಸಿರುತ್ತಾರೆ.

Related posts

ರುಡ್ ಸೆಟ್ ಸಂಸ್ಥೆಯಲ್ಲಿ ಗೃಹೋಪಯೋಗಿ ವಿದ್ಯುತ್‌ ಉಪಕರಣ ಸೇವಾ ಉದ್ಯಮಿ ತರಬೇತಿಯ ಸಮಾರೋಪ

Suddi Udaya

ಮಡಂತ್ಯಾರು ವಲಯದ ಬಸವನಗುಡಿ ಒಕ್ಕೂಟದ ವತಿಯಿಂದ ಸ್ವಚ್ಛತಾ ಕಾರ್ಯ

Suddi Udaya

ಶ್ರೀ ಕ್ಷೇತ್ರ ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಉಜಿರೆ ಲಕ್ಷ್ಮೀ ಗ್ರೂಪ್ ಗೆ ಭೇಟಿ

Suddi Udaya

ಬೆಳ್ತಂಗಡಿ ಕೋಟಿ-ಚೆನ್ನಯ ಕ್ರೀಡಾಕೂಟ: ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಾವಳಿ ಜಿಲ್ಲಾ ರಾಜ್ಯೋತ್ಸವ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಪ್ರಥಮ ಪ್ರಶಸ್ತಿ

Suddi Udaya

ಕಾಯರ್ತಡ್ಕ: ಹದಗೆಟ್ಟ ರಸ್ತೆ, ಶಿಲಾನ್ಯಾಸಗೊಂಡ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ, ಪ್ರತಿಭಟನೆಗೆ ಗ್ರಾಮಸ್ಥರ ಸಿದ್ದತೆ

Suddi Udaya

ಬೆಳ್ತಂಗಡಿ: ಸಂತ ತೆರೇಸಾ ಶಾಲಾ ಹಳೆ ವಿದ್ಯಾರ್ಥಿಗಳ ಸಮ್ಮಿಲನ

Suddi Udaya
error: Content is protected !!