September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿ

ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ಹಾಗೂ ಶ್ರೀ ದುರ್ಗಾ ಗಣೇಶ ಸಭಾ ಭವನದ ಲೋಕಾಪ೯ಣೆ:ಮೈಸೂರು ಸಂಸ್ಥಾನದ ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಿಂದ ದೀಪ ಪ್ರಜ್ವಲನೆ – ಗಣ್ಯರ ಉಪಸ್ಥಿತಿ

ಉರುವಾಲು : ಶ್ರೀ ಗಣೇಶ ಭಜನಾ ಮಂದಿರ ಕುಪ್ಪೆಟ್ಟಿ ಇದರ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ಹಾಗೂ ಶ್ರೀ ದುರ್ಗಾ ಗಣೇಶ ಸಭಾ ಭವನದ ಲೋಕಾಪ೯ಣೆಯನ್ನು ಡಿ.7ರಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಹಾರಾಜರು, ಮೈಸೂರು ಸಂಸ್ಥಾನ ನೇರವೇರಿಸಿದರು. ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ದಿವ್ಯ ಉಪಸ್ಥಿತರಿದ್ದರು.

ಡಾ. ಪ್ರಭಾಕರ್ ಭಟ್, ಕಲ್ಲಡ್ಕ, ಸಂಚಾಲಕರು, ವಿವೇಕಾನಂದ ವಿದ್ಯಾಸಂಸ್ಥೆಗಳು ಧಾರ್ಮಿಕ ಭಾಷಣ ಮಾಡಿದರು. ಸಭಾಧ್ಯಕ್ಷತೆಯನ್ನು ಶಶಿಧರ ಶೆಟ್ಟಿ, ಬರೋಡಾ ಅಧ್ಯಕ್ಷರು, ರಾಜಗೋಪುರ ಹಾಗೂ ಶ್ರೀ ದುರ್ಗಾಗಣೇಶ ಸಭಾಭವನ ಲೋಕಾರ್ಪಣಾ ಸಮಿತಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪ್ರಮೋದ್ ಮಧ್ವರಾಜ್, ಮಾಜಿ ಸಚಿವರು, ಕರ್ನಾಟಕ ಸರಕಾರ, ಕೆ. ಮೋಹನ್ ಕುಮಾರ್, ಲಕ್ಷ್ಮೀ ಇಂಡಸ್ಟ್ರೀಸ್, ಕನಸಿನಮನೆ, ಉದ್ಯಮಿಗಳು, ಉಜಿರೆ ಅಶೋಕ್ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಧರ್ಮಸ್ಥಳ ಡಾ|| ಶ್ರೀಕೃಷ್ಣರಾಜ್, ಯು.ಎಸ್.ಎ. ರಾಜಮಂದಿರ, ಉರುವಾಲು,ರವೀಂದ್ರ ಶೆಟ್ಟಿ ಬಜಗೋಳಿ, ರಾಜ್ಯಾಧ್ಯಕ್ಷರು ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ & ಸ್ಟೋನ್‌ಕ್ರಷರ್ ಓನರ್ಸ್ ಅಸೋಸಿಯೇಶನ್ , ಭರತ್ ಶೆಟ್ಟಿ ಕೇರಿ, ಅಧ್ಯಕ್ಷರು, ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನ, ತಣ್ಣೀರುವಂತ, ರಾಜೇಶ್ ಶೆಟ್ಟಿ, ಮಾಲಕರು, ಶಂಕರಿ ಇಲೆಕ್ಟಿಕಲ್ಸ್ ಬೆಂಗಳೂರು, ನಾಗಾರ್ಜುನ್ ರಾವ್, ಉದ್ಯಮಿಗಳು, ಬೆಂಗಳೂರು, ನಟೇಶ್ ಪಾಹಜಾರಿ, ಉದ್ಯಮಿಗಳು, ಬೆಂಗಳೂರು, ಕೆ. ಸಿ. ವಿಜಯ ಕುಮಾರ್, ಉದ್ಯಮಿಗಳು, ಬೆಂಗಳೂರು, ವಿಶ್ವನಾಥ್, ಉದ್ಯಮಿಗಳು, ಬೆಂಗಳೂರು ಪವನ್ ಆಚಾರ್ಯ, ಕ್ಷೇತ್ರ ಪುರೋಹಿತರು, ಗಯಾ ಕ್ಷೇತ್ರ, ಬಿರ್ಲಾ, ಶ್ರೀಮತಿ ಸುಶೀಲ, ಟ್ರಸ್ಟಿ, ಸಿ.ಎಸ್.ಆರ್. ಟ್ರಸ್ಟ್, ಬೆಂಗಳೂರು, ಶ್ರೀಮತಿ ಅರ್ಚನಾ ರಾಜೇಶ್ ಪೈ, ಸಿ.ಇ.ಒ. ಸಂಧ್ಯಾ ಪ್ರೆಶ್ ಉಜಿರೆ,ಶ್ರೀಮತಿ ರೇವತಿ, ಟ್ರಸ್ಟಿ ಶ್ರೀಧಾಮ, ಮಾಣಿಲ, ಉದ್ಯಮಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಕಾಯಾ೯ಧ್ಯಕ್ಷ ಕಿರಣ್ ಚಂದ್ರ ಪುಷ್ಪಗಿರಿ, ಅತುಲ್ ಕುಮಾರ್ ಕೆ.ಎನ್ ಹಲೇಜಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ಸಂಚಾಲಕ ಯೋಗೀಶ್ ಪೂಜಾರಿ ಕಡ್ತಿಲ ಸ್ವಾಗತಿಸಿದರು. ಉಪನ್ಯಾಸಕರಾದ ಕೇಶವ ಬಂಗೇರ ಕಾಯ೯ಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಮೋಹನ್ ಕುಮಾರ್ ಉಜಿರೆ, ಕಿರಣ್ ಚಂದ್ರ ಪುಷ್ಪಗಿರಿ, ಅತುಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

Related posts

ಆನೆದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಗೌಡರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ ಕುಟುಂಬಸ್ಥರಿಗೆ ಸಾಂತ್ವನ – ಪರಿಹಾರ ಧನದ ಚೆಕ್ ಹಸ್ತಾಂತರ

Suddi Udaya

ಯಾವುದೇ ದಾಖಲಾತಿ ಇಲ್ಲದೆ ಅಕ್ರಮ ಮರಳು ಸಾಗಟ: ಪತ್ತೆ

Suddi Udaya

ವೇಣೂರು ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ವೇಣೂರು ಅರಣ್ಯ ಇಲಾಖೆಯಿಂದ ಬೋನು ಅಳವಡಿಕೆ

Suddi Udaya

ಚಾರ್ಮಾಡಿ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ನಾಳೆ(ಮಾ.22): ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಹಕಾರಿ ಅಭ್ಯರ್ಥಿಗಳ ಗೆಲುವಿಗೆ ಹಗಲಿರುಳು ದುಡಿದ ಕಾರ್ಯಕರ್ತರಿಗೆ, ಅಭಿನಂದನಾ ಕಾರ್ಯಕ್ರಮ

Suddi Udaya

ಗೇರುಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿಗೆ ಶೇ.88.24 ಫಲಿತಾಂಶ

Suddi Udaya
error: Content is protected !!