24 C
ಪುತ್ತೂರು, ಬೆಳ್ತಂಗಡಿ
July 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಸಿಐ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ವಲಯ ನಿರ್ದೇಶಕರಾಗಿ ರಂಜಿತ್ ಎಚ್ ಡಿ ಬಳಂಜ ಆಯ್ಕೆ

ಬೆಳ್ತಂಗಡಿ: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನೊಳಗೊಂಡ ಜೆಸಿಐ ಭಾರತದ ವಲಯ 15 ರ 2026 ನೇ ಸಾಲಿನ ಅಭಿವೃದ್ಧಿ ಮತ್ತು ಬೆಳವಣಿಗೆ (G&D) ವಿಭಾಗದ ವಲಯ ನಿರ್ದೇಶಕರಾಗಿ ಆಯ್ಕೆಗೊಂಡರು.

2015 ರಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮುಖಾಂತರ ಜೆಸಿಐ ಸಂಸ್ಥೆಗೆ ಪಾದಾರ್ಪಣೆಗೊಂಡು, 2024ನೇ ವರ್ಷ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಯ ಯಶಸ್ವಿ ಅಧ್ಯಕ್ಷರಾಗಿ ವರ್ಷಪೂರ್ತಿ ಹಲವಾರು ಕಾರ್ಯಕ್ರಮಗಳೊಂದಿಗೆ ಸಮಾಜಮುಖಿಯಾಗಿ ತೊಡಗಿಸಿಕೊಂಡು ವಲಯ ಸಮ್ಮೇಳನದಲ್ಲಿ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿಯನ್ನು ಪಡೆದುಕೊಂಡವರು. ಬಳಂಜ ಶಾಲಾ ಅಮೃತ ಮಹೋತ್ಸವದ ಸವಿನೆನಪಿಗಾಗಿ ಜೆಸಿಐ ಭಾರತದ ರಾಷ್ಟ್ರಧ್ಯಕ್ಷರನ್ನು ಬಳಂಜ ಶಾಲೆಗೆ ಬರಮಾಡಿಕೊಂಡು ಸುಮಾರು ಒಂದು ಲಕ್ಷ ವೆಚ್ಚದ ಕೊಡುಗೆಗಳನ್ನು ಬಳಂಜ ಶಾಲೆ ಹಾಗೂ ಇತರ ಸಂಸ್ಥೆ ಗಳಿಗೆ ನೀಡಿರುತ್ತಾರೆ.

ಈ ವರ್ಷ ವಲಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ 11 ಘಟಕಗಳ ಮೇಲುಸ್ತುವಾರಿಯನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಒಂದು ಹೊಸ ಘಟಕ ವನ್ನು ಕೂಡ ನೀಡುವಲ್ಲಿ ಯಶಸ್ವಿಯಾಗಿದ್ದರೆ.

ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಕಳೆದ 13 ವರ್ಷಗಳಿಂದ ಮೂಡುಬಿದ್ರಿಯ ಮೈಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Related posts

ದ.ಕ. ಜಿಲ್ಲೆಯಲ್ಲಿ ಗಣೇಶ ಚತುರ್ಥಿಗೆ ಸೆ.19 ರಂದು ಸರ್ಕಾರಿ ರಜೆ

Suddi Udaya

ನಾವೂರು ಹಿ.ಪ್ರಾ. ಶಾಲಾ ಹಳೇ ವಿದ್ಯಾರ್ಥಿ ಸಂಘ ರಚನೆ ಅಧ್ಯಕ್ಷರಾಗಿ ಸೆಬಾಸ್ಟಿನ್ ವಿ.ಪಿ., ಪ್ರಧಾನ ಕಾರ್ಯದರ್ಶಿ ರಜತ್ ಮೋರ್ತಾಜೆ

Suddi Udaya

ಶಿಶಿಲ: ನವರಾತ್ರಿ ಪ್ರಯುಕ್ತ ಕುಣಿತ ಭಜನಾ ಸಪ್ತಾಹ ಶುಭಾರಂಭ

Suddi Udaya

ಫೆ.7-8: ಮಿಯ್ಯಾರು ಶ್ರೀ ವನದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮಹೋತ್ಸವ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ರಂಗಪೂಜೆ

Suddi Udaya

ಶಿಬಾಜೆ ಪತ್ತಿಮಾರಿನ ರಾಘವೇಂದ್ರ ಅಭ್ಯಂಕರ್ ತೋಟಕ್ಕೆ ತಡರಾತ್ರಿ ಕಾಡಾನೆ ದಾಳಿ: ಪಸಲು ಬರುವ 10 ತೆಂಗಿನ ಮರ 40 ಅಡಿಕೆ ಮರ ನಾಶ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷರಾಗಿ ಲ| ದೇವದಾಸ್ ಶೆಟ್ಟಿ ಆಯ್ಕೆ

Suddi Udaya
error: Content is protected !!