ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಂತರಾಷ್ಟ್ರೀಯ ಉದ್ಯಮಿ,‌ ಧಾರ್ಮಿಕ ಮುಖಂಡ ಕುಟ್ಟೂರ್ ಹಾಜಿ ಬೆಳ್ತಂಗಡಿಗೆ ಭೇಟಿ

ಬೆಳ್ತಂಗಡಿ: ಕೇರಳದ ಪ್ರಖ್ಯಾತ “ನಾಲೆಡ್ಜ್ ಸಿಟಿ” ಇಲ್ಲಿನ ಗ್ರ್ಯಾಂಡ್ ಮಸ್ಜಿದ್ ಆಫ್ ಇಂಡಿಯಾ “ಜಾಮಿಯಲ್ ಫುತೂಹ್” ಇದರ ಚೇರ್ಮೆನ್, ಅಂತಾರಾಷ್ಟ್ರೀಯ ಉದ್ಯಮಿ ಸಿ.ಪಿ ಅಬ್ದುಲ್ ರಹಿಮಾನ್ ಹಾಜಿ (ಕೂಟ್ಟೂರ್ ಹಾಜಿ) ಅವರು ಡಿ.14 ರಂದು ಬೆಳ್ತಂಗಡಿಗೆ ಭೇಟಿ ನೀಡಿದರು.

ಅವರನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕರಾದ ಅಬ್ಬೋನು ಮದ್ದಡ್ಕ, ಖ್ಯಾತ ಉದ್ಯಮಿ ಉಸ್ಮಾನ್ ಹಾಜಿ ಆಲಂದಿಲ, ಹಿರಿಯ ಪತ್ರಕರ್ತ ಹಾಗೂ ಎಸ್‌ವೈಎಸ್ ಝೋನ್ ಮಾಜಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಮುಂಡಾಜೆ ಬರಮಾಡಿಕೊಂಡು ಗೌರವಿಸಿದರು.

ಸಿ.ಪಿ‌ ಅಬ್ದುಲ್ ರಹಿಮಾನ್ ಅವರು ಅಬುದಾಬಿಯ ಬನಿಯಾಸ್ ಸ್ಲೈಕ್ ಗ್ರೂಪ್ ಆಫ್ ಕಂಪೆನಿ ಹಾಗೂ ಫಾಲ್ಕನ್ ಇಂಡಸ್ಟ್ರೀಸ್
ಪ್ರೈ ಲಿಮಿಟೆಡ್ ಇದರ ಸಂಸ್ಥಾಪಕರು ಹಾಗೂ ಚೇರ್ಮೆನ್ ಕೂಡ ಆಗಿದ್ದಾರೆ.


ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್ ಅವರ ಅತ್ಯಾಪ್ತರಲ್ಲಿ ಓರ್ವರಾಗಿರುವ ಅವರು ತನ್ನ ಕರ್ನಾಟಕ ಪ್ರವಾಸದ ಮಧ್ಯೆ ಮಾಣಿ ದಾರುಲ್ ಇರ್ಷಾದ್ ಸಂಸ್ಥೆಗೆ ಹಾಗೂ ತೈಬಾ ಗಾರ್ಡನ್ ಈಶ್ವರಮಂಗಳ ಇಲ್ಲಿಗೂ ಭೇಟಿ ನೀಡಿ ಬಳಿಕ ಚಿಕ್ಕಮಗಳೂರಿಗೆ ನಿರ್ಗಮಿಸಿದರು.

Related posts

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನೂತನ ಕಟ್ಟಡದ ಶಿಲಾನ್ಯಾಸ

Suddi Udaya

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿ ಜಾಮೀನು ಅರ್ಜಿ ವಜಾ

Suddi Udaya

ಮುಳಿಯ ಜ್ಯುವೆಲ್ಲರ್ಸ್ ವತಿಯಿಂದ ಪಡ್ಲಾಡಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

Suddi Udaya

ರಾಜ್ಯದ ಜನರ ತೀರ್ಮಾನ, ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ: ಪ್ರತಾಪಸಿಂಹ ನಾಯಕ್

Suddi Udaya

ಕಡಿರುದ್ಯಾವರದಲ್ಲಿ ಗಾಳಿ ಮಳೆಗೆ ಮನೆಯ ಮೇಲೆ ಬಿದ್ದ ಬೃಹದಾಕಾರದ ಮರ: ವಾಸ್ತವ್ಯದ ಮನೆಗೆ ಭಾಗಶಃ ಹಾನಿ, ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರು

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ‘ದೆಸಿಲ್ದರತಿ’ ಶಿಶಿಲೇಶ್ವರ ದೇವರ ಭಕ್ತಿಗೀತೆಯ ಚಿತ್ರೀಕರಣ

Suddi Udaya
error: Content is protected !!