22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಆಮಂತ್ರಣ ದಶಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ : ಆಮಂತ್ರಣ ಪರಿವಾರ ಇಡೀ ಕರ್ನಾಟಕದಾದ್ಯಂತ ಕಲಾ ಸೇವೆ ಹಾಗೂ ಸಾಮಾಜಿಕ ಚಟುವಟಿಕೆ, ಸಾಹಿತ್ಯ ಇನ್ನಿತರ ನೂರಾರು ಕಾರ್ಯಕ್ರಮ ಸದ್ದಿಲ್ಲದೆ ಮಾಡಿ ಸುದ್ದಿಯಾಗಿದೆ. ಅದುವೇ 10 ವರ್ಷಗಳ ಹೆಜ್ಜೆ. ಇದರ ಯಶಸ್ವಿಗೆ ಆಮಂತ್ರಣ ದಶಮಾನೋತ್ಸವ ಸಮಿತಿ ಅಧ್ಯಕ್ಷರನ್ನಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಇವರನ್ನು ಆಮಂತ್ರಣ ಸೇವಾ ಪ್ರತಿಷ್ಠಾನ ಆಯ್ಕೆ ಮಾಡಲಾಗಿದೆ.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರವರ ಮಾರ್ಗದರ್ಶನದೊಂದಿಗೆ
ಆಮಂತ್ರಣ ಪರಿವಾರದ ವಿಜೃಂಭಣೆಯ ದಶಮಾನೋತ್ಸವ ಸಮಾರಂಭ ಜನವರಿ 17 ರಂದು ಅಳದಂಗಡಿ ಸತ್ಯ ದೇವತಾ ದೇವಸ್ಥಾನ ಎದುರು ಮೈದಾನದಲ್ಲಿ ನಡೆಯಲಿದೆ.

ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಂದರ್ಭದಲ್ಲಿ ನಡೆಯುವ ಈ ಸಮಾರಂಭ ಹತ್ತು ವರ್ಷಗಳ ಸೇವಾ ಚಟುವಟಿಕೆ ಹಾಗೂ ಅನಿತಾ ಶೆಟ್ಟಿ ಮೂಡುಬಿದಿರೆ, ಪ್ರಜ್ಞಾ ವಾಣಿಗೋರೆ ಮಾಳ, ಶಾಲಿನಿ ಕೆಮ್ಮಣ್ಣು, ದೇವರ ಮಕ್ಕಳು, ಆಮಂತ್ರಣ ಸ್ಮರಣ ಸಂಚಿಕೆ ಪುಸ್ತಕ ಬಿಡುಗಡೆ ಮತ್ತು ಅರುವಶ್ರೀ, ಸತ್ಯಶ್ರೀ ಪುರಸ್ಕಾರ, ಚಿತ್ರಕಲೆ, ಸನ್ಮಾನ, ಸಾಂಸ್ಕೃತಿಕ, ಸಾಹಿತ್ಯ, ಭಜನೆ , ದೋಸೆ ಕ್ಯಾಂಪ್ ಇನ್ನಿತರ ಕಾರ್ಯಕ್ರಮಗಳು ನಡೆಯಲಿರುವುದು ಎಂದು ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ತಿಳಿಸಿದ್ದಾರೆ.

ಆಮಂತ್ರಣ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶಿವಪ್ರಸಾದ್ ಅಜಿಲರು, ಹಿರಿಯರಾದ ಬಿ.ಭುಜಬಲಿ ಧರ್ಮಸ್ಥಳ, ಟ್ರಸ್ಟಿಗಳಾದ ಅರುಣ್ ಅರುವ, ಸದಾನಂದ ಬಿ.ಕುದ್ಯಾಡಿ, ಹಾಗೂ ಸದಾನಂದ ಪೂಜಾರಿ ಉಂಗಿಲಬೈಲು ಸುಪ್ರೀತ್ ಜೈನ್ ಅಳದಂಗಡಿ, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕದ ರಾಜ್ಯ ಪ್ರತಿನಿಧಿಗಳು, ಉಡುಪಿ , ದ.ಕ ಜಿಲ್ಲಾ ಪದಾಧಿಕಾರಿಗಳು ಆಯ್ಕೆಯಲ್ಲಿ ಒಮ್ಮತ ಸೂಚಿಸಿದ್ದಾರೆ.

Related posts

ಹಜ್ ಯಾತ್ರಿಗೆ ಪೆರಾಲ್ದರಕಟ್ಟೆ ಜುಮಾ ಮಸ್ಜಿದ್ ಕಮಿಟಿಯಿಂದ ಬೀಳ್ಕೊಡುಗೆ

Suddi Udaya

ಧರ್ಮಸ್ಥಳ: ಕಲ್ಲೇರಿಯಲ್ಲಿ ನೂತನ ‘ಓಂಕಾರ’ ಮಲ್ಟಿ ಸ್ಟೋರ್ ಶುಭಾರಂಭ

Suddi Udaya

ಕಡಿರುದ್ಯಾವರ: ಕೊಪ್ಪದ ಗಂಡಿಯಲ್ಲಿ ಧರೆ ಕುಸಿತ : ಅಪಾರ ನಷ್ಟ

Suddi Udaya

ಕೊಕ್ಕಡದಲ್ಲಿ ವ್ಯಾಪಾರ ಆಭಿವೃದ್ಧಿ ಯೋಜನೆಯ ತರಬೇತಿ ಕಾರ್ಯಕ್ರಮ

Suddi Udaya

ಹೊಸಂಗಡಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಜಗದೀಶ್ ಹೆಗ್ಡೆ, ಉಪಾಧ್ಯಕ್ಷರಾಗಿ ಶಾಂತಾ ಕೃಷ್ಣಪ್ಪ ಅವಿರೋಧವಾಗಿ ಆಯ್ಕೆ

Suddi Udaya

“ನಮ್ಮೂರು ನಮ್ಮ ಕೆರೆ” ವಿಶಿಷ್ಟ ಸೇವೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ವಿಜಯವಾಣಿ ವಿಜಯರತ್ನ ಅಂತರಾಷ್ಟ್ರೀಯ ಪ್ರಶಸ್ತಿ

Suddi Udaya
error: Content is protected !!