September 6, 2026
ಅಪರಾಧ ಸುದ್ದಿ

ಹೊಸಂಗಡಿ ತೊರ್ಪೆ ಡ್ಯಾಂ ಬಳಿ ನದಿಯಲ್ಲಿ ಕಾರ್ಕಳ ಮಿಯಾರು ನಿವಾಸಿ ಯತೀಶ್ ಪೂಜಾರಿ ಶವ ಪತ್ತೆ : ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಕುಟುಂಬಸ್ಥರಿಂದ ಪೊಲೀಸರಿಗೆ ದೂರು

ಬೆಳ್ತಂಗಡಿ: ಪತ್ನಿ ಮತ್ತು ಆಕೆಯ ಮನೆಯವರ ನಡುವೆ ಗಲಾಟೆ ನಡೆದ ಬಳಿಕ ವ್ಯಕ್ತಿಯೋವ೯ನ ಶವ ನದಿ ನೀರಿನಲ್ಲಿ ಪತ್ತೆಯಾಗಿದ್ದು, ಆತನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಮನೆಯವರು ಪೊಲೀಸರಿಗೆ ದೂರು ನೀಡಿದ ಘಟನೆ ಡಿ.24ರಂದು ವರದಿಯಾಗಿದೆ.

ಕಾರ್ಕಳ ತಾಲೂಕು ಮಿಯಾರು ಗ್ರಾಮದ ಬೈದರ್ಲಬೆಟ್ಟು ಮನೆ ನಿವಾಸಿ
ಯತೀಶ್ ಪೂಜಾರಿ(41) ನದಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದವರಾಗಿದ್ದಾರೆ.

ಪ್ರಕರಣದ ಹಿನ್ನೆಲೆ : ಯತೀಶ್‌ ಪೂಜಾರಿ ಎಂಬವರು ಸುಮಾರು 15 ವರ್ಷಗಳ ಹಿಂದೆ ಹೊಸಂಗಡಿ ಗ್ರಾಮ ಪೆರಿಂಜೆ ಸುಜಯ ಎಂಬವರೊಂದಿಗೆ ವಿವಾಹವಾಗಿದ್ದು, ಎರಡು ಗಂಡು ಮಕ್ಕಳಿದ್ದಾರೆ .
ಯತೀಶ ಮದುವೆಯಾದ ಬಳಿಕ ಹೆಂಡತಿ ಮನೆಯ ಬಳಿಯಲ್ಲೇ ಪ್ರತ್ಯೇಕ ಮನೆ ಮಾಡಿ ವಾಸವಿದ್ದವನು, ಸುಮಾರು ಒಂದೂವರೆ ವರ್ಷದ ಹಿಂದೆ ಗಂಡ ಹೆಂಡತಿ ಮಧ್ಯೆ ಕೌಟುಂಬಿಕ ಮನಸ್ತಾಪ ಉಂಟಾಗಿ ಯತೀಶ್‌ ಮನೆ ಬಿಟ್ಟು ತನ್ನ ಅಕ್ಕನ ಮನೆಯಲ್ಲಿದ್ದ. ಬಳಿಕ ವಿದೇಶಕ್ಕೆ ಹೋಗಿದ್ದು, ಇತ್ತೀಚೆಗೆ ಸುಮಾರು 20 ದಿನಗಳ ಹಿಂದೆ ವಿದೇಶದಿಂದ ಬಂದು ತನ್ನ ಅಕ್ಕನ ಮನೆಯಲ್ಲಿದ್ದವನು, ಒಂದು ವಾರದ ಹಿಂದೆ ಮುಡಿಪು ಎಂಬಲ್ಲಿ ಹೋಟೇಲ್‌ ಕೆಲಸಕ್ಕೆ ಸೇರಿಕೊಂಡಿದ್ದನು. ಈ ನಡುವೆ ಹೆಂಡತಿಯೊಂದಿಗೆ ದೂರವಾಣಿ ಮೂಲಕ ಜಗಳವಾಡಿ ಡಿ.22 ರಂದು ಹೆಂಡತಿಯ ಮನೆಯಾದ ಹೊಸಂಗಡಿ ಗ್ರಾಮದ ಪೆರಿಂಜೆಗೆ ಬಂದು ಹೆಂಡತಿ ಹಾಗೂ ಅವರ ಮನೆಯವರೊಂದಿಗೆ ಜಗಳವಾಡಿ ಬಳಿಕ ಸಂಜೆ ಸುಮಾರು 4 ಗಂಟೆಗೆ ಅಲ್ಲಿಂದ ಹೋಗಿದ್ದ ಎನ್ನಲಾಗಿದೆ. ಇದಾದ ಬಳಿಕ ಡಿ. 24 ರಂದು ಸಂಜೆ ಯತೀಶ್‌ ಪೂಜಾರಿಯ ಮೃತದೇಹವು ಹೊಸಂಗಡಿ ತೊರ್ಪೆ ಡ್ಯಾಂ ಬಳಿ ನದಿ ನೀರಿನಲ್ಲಿ
ಪತ್ತೆಯಾಗಿದ್ದು, ಯತೀಶ್‌ ಪೂಜಾರಿಯು ಡಿ. 22ರಂದು ತನ್ನ ಹೆಂಡತಿ ಮನೆಯಲ್ಲಿ ಜಗಳವಾಡಿ ಹೋದವನು ಹೊಸಂಗಡಿ ಗ್ರಾಮದ ಪೇರಿ ಎಂಬಲ್ಲಿ ತೋರ್ಪೆ ಡ್ಯಾಂ ಬಳಿ ಫಲ್ಗುಣಿ ನದಿ ನೀರಿಗೆ ಆಕಸ್ಮಿಕವಾಗಿ ಬಿದ್ದು ಅಥವಾ ನದಿನೀರಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆಯಿದ್ದರೂ, ಯತೀಶ್‌ ಪೂಜಾರಿಗೂ ಆತನ ಹೆಂಡತಿ ಮನೆಯವರಿಗೂ ಗಲಾಟೆ ನಡೆದ ಬಳಿಕ ನದಿ ನೀರಿನಲ್ಲಿ ಬಿದ್ದು ಮೃತಪಟ್ಟಿರುವುದರಿಂದ ಈತನ ಮರಣದಲ್ಲಿ ಸಂಶಯವಿದ್ದು, ಸೂಕ್ತ ತನಿಖೆ ನಡೆಸುವಂತೆ ಆತನ ಸಹೋದರ ಕಿಶೋರ್ ಕೋಟ್ಯಾನ್ ವೇಣೂರು ಠಾಣೆಗೆ ದೂರು ನೀಡಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಧರ್ಮಸ್ಥಳ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿ ಸೇರಿ ನಾಲ್ವರ ವಿರುದ್ದ ಎಫ್.ಐ.ಆರ್ ಗೆ ಹೈಕೋರ್ಟ್ ಮಧ್ಯಂತರ ತಡೆ

Suddi Udaya

ಅಕ್ರಮ ಕಸಾಯಿಖಾನೆಗೆ ಬೆಳ್ತಂಗಡಿ ಪೊಲೀಸ್ ದಾಳಿ: ದನದ ಮಾಂಸ ಹಾಗೂ ಇಬ್ಬರು ಆರೋಪಿಗಳ ಬಂಧನ

Suddi Udaya

ಕ್ಯಾಂಟಿನ್‌ನಲ್ಲಿ ಅಕ್ರಮ ವೇಶ್ಯಾವಟಿಕೆ ಪ್ರಕರಣ ಆರೋಪಿ ಉಸ್ಮಾನ್ ಗೆ ಜಾಮೀನು ಮಂಜೂರು

Suddi Udaya

ಗುರುವಾಯನಕೆರೆ ಶಕ್ತಿನಗರದ ಬಳಿ ಡಿವೈಡರ್ ಗೆ ಡಿಕ್ಕಿ ಹೊಡೆದ ಬೈಕ್: ಬೈಕ್ ಸವಾರ ಸಾವು

Suddi Udaya

ಬಳಂಜ: ತಾಯಿ-ಮಗನಿಗೆ ಜೀವ ಬೆದರಿಕೆ: ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya

ಸಾವ್ಯ ನೂಜಿಲೋಡಿ ಎಂಬಲ್ಲಿ ನದಿಯ ಪಕ್ಕದಲ್ಲಿ ದನದ ಕರುವಿನ ಅವಶೇಷ ಪತ್ತೆ: ಕೇರಳ ಮೂಲದ ವ್ಯಕ್ತಿಯ ಮೇಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು

Suddi Udaya
error: Content is protected !!