September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ- ಶಕ್ತಿನಗರ ನಗರಲಂಕಾರ ದೀಪ ಲೋಕಾರ್ಪಣೆ

ಬೆಳ್ತಂಗಡಿ: ಗುರುವಾಯನಕೆರೆ ಮೂಡಬಿದ್ರೆ ರಸ್ತೆಯಲ್ಲಿ ರೂ. 1 ಕೋಟಿ ವೆಚ್ಚದ ನಗರಲಂಕಾರ ದೀಪವನ್ನು ಬರೋಡ ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ ಅವರು ಡಿ 26 ರಂದು ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು ಅಭಿವೃದ್ಧಿಯ ಸಂಕಲ್ಪ ಹೊತ್ತು ಶಾಸಕ ಹರೀಶ್ ಪೂಂಜರವರು ತಾಲೂಕಿಗೆ
ಸಾವಿರಾರು ಕೋಟಿ ಅನುದಾನದ ತಂದಿರುವುದಲ್ಲದೇ ಕುವೆಟ್ಟು ಗ್ರಾಮದ ಅಭಿವೃದ್ಧಿಗೆ ಅತೀ ಹೆಚ್ಚು ಅನುದಾನ ನೀಡಿ ಗುರುವಾಯನಕೆರೆ-ಮೂಡಬಿದ್ರೆ ರಸ್ತೆಯ ಶಕ್ತಿನಗರದಲ್ಲಿ ರಸ್ತೆ ಸೌಂದರ್ಯಕ್ಕಾಗಿ ಉತ್ತಮ ರೀತಿಯ ದೀಪಲಂಕಾರ ವ್ಯವಸ್ಥೆ ಮಾಡಿದ್ದಾರೆ. ಅವರಿಗೆ ಕುವೆಟ್ಟು ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲು ಸಂತೋಷ ಪಡುತ್ತೇನೆ.ಮುಂದಿನ ದಿನಗಳಲ್ಲಿ ಈ ದೀಪಾಲಂಕಾರ ಉತ್ತಮ ವ್ಯವಸ್ಥಿತ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಅದಕ್ಕಾಗಿ ಸಂಪೂರ್ಣ ಸಹಕಾರ ನೀಡಲು ಸದಾ ಸಿದ್ಧ ಎಂದರಲ್ಲದೇ ರಸ್ತೆಯ ನಡುವೆ ಇರುವ ವಿಭಾಜಕದಲ್ಲಿ ಪ್ರತಿಯೊಬ್ಬರು ಹೂವಿನ ಗಿಡ ನೆಟ್ಟು ಪೋಷಿಸಿ ನಗರಲಂಕಾರ ಹೆಚ್ಚಿಸುವ ಕೆಲಸ ಸ್ಥಳೀಯರು ಮಾಡಬೇಕಿದೆ ಎಂದರು.

ಶಾಸಕ ಹರೀಶ್ ಪೂಂಜ ಮಾತನಾಡಿ ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯರ ಬೇಡಿಕೆಗೆ ಸ್ಪಂದಿಸಿ ಉತ್ತಮ ರೀತಿಯ ದೀಪದ ವ್ಯವಸ್ಥೆ ಕಲ್ಪಿಸಿ ಶಕ್ತಿನಗರಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕುವೆಟ್ಟು ಗ್ರಾಮ‌ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ, ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಸೂರಜ್ ಹಾನಿಂಜ,ಗುರುವಾಯನಕೆರೆ ಸಿಎ ಬ್ಯಾಂಕ್ ಅದ್ಯಕ್ಷ ಮುಗುಳಿ ನಾರಾಯಣ ರಾವ್,ಜಿ.ಪಂ ಮಾಜಿ ಸದಸ್ಯೆ ಮಮತಾ ಎಂ ಶೆಟ್ಟಿ, ಕುವೆಟ್ಟು ಗ್ರಾ.ಪಂ ಉಪಾಧ್ಯಕ್ಷ ಗಣೇಶ್ ಕುಲಾಲ್, ಸದಸ್ಯರಾದ ನಿತೀಶ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಆಶಾಲತಾ, ಹೇಮಂತ್ ಶೆಟ್ಟಿ, ನಿತೀನ್ ಬರಾಯ ಉಪಸ್ಥಿತರಿದ್ದರು.

Related posts

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಗುವಿನ ವಕ್ರ ಪಾದಕ್ಕೆ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ| ಪ್ರತೀಕ್ಷ್. ಬಿ ರವರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

Suddi Udaya

ವಾಣಿ ಕಾಲೇಜಿನ ತುಳು ಸಂಘದ ಆಶ್ರಯದಲ್ಲಿ ‘ಆಟಿ ಒಂಜಿ ನೆಂಪು’ ಕಾರ್ಯಕ್ರಮ

Suddi Udaya

ದಾರುಸ್ಸಲಾಂ ಕ್ಯಾಂಪಸ್ಸ್ ನಲ್ಲಿ ಲೈಬ್ರರಿ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

Suddi Udaya

ವಿಶ್ವಕರ್ಮ ಸಮಾಜದ ಮಹಿಳಾ ರಾಜ್ಯಾಧ್ಯಕ್ಷೆ ವಸಂತ ಮುರುಳಿ ಆಚಾರ್ಯ ಧರ್ಮಸ್ಥಳಕ್ಕೆ ಭೇಟಿ

Suddi Udaya

ವೇಣೂರು: ಅಕ್ರಮವಾಗಿ ಸಾಗಿಸುತ್ತಿದ್ದ 125 ಕೆ‌ಜಿ ರಕ್ತ ಚಂದನ: ವಾಹನ ಸಮೇತ ರಕ್ತ ಚಂದನ ವಶಕ್ಕೆ ಪಡೆದ ವೇಣೂರು ಅರಣ್ಯಧಿಕಾರಿಗಳು

Suddi Udaya

ಗುರುವಾಯನಕೆರೆ ಅಯ್ಯಪ್ಪ ದೇವಸ್ಥಾನದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya
error: Content is protected !!