September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜ.11: ಅರಸಿನಮಕ್ಕಿಯಲ್ಲಿ ಮಲ್ಲ ಚಾವಡಿ ಹಬ್ಬ ಮತ್ತು ಸನ್ಮಾನ ಸಮಾರಂಭ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ

ಅರಸಿನಮಕ್ಕಿ: ಮೂಲ್ಯರ ಯಾನೆ ಕುಲಾಲರ ಕೂಟದ ೩೧ನೇ ಮಲ್ಲ ಚಾವಡಿ ಹಬ್ಬ ಮತ್ತು ಸನ್ಮಾನ ಸಮಾರಂಭ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮವು ಜ.11ರಂದು ಅರಸಿನಮಕ್ಕಿ ಕುಂಭಶ್ರೀ ಚಾವಡಿಯಲ್ಲಿ ನಡೆಯಲಿರುವುದು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಕೆ. ಗಂಗಾಧರ ಕುಲಾಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಡೆಪ್ಯುಟಿ ಕಮಾಂಡೆಂಟ್ ಚಂದಪ್ಪ ಮೂಲ್ಯ ಡಿ., ಸಾಹಿತಿ, ಯಕ್ಷಗಾನ ಕಲಾವಿದ ಮಹೇಶ್ ಕುಲಾಲ್ ಅರ್ತಿಮೂಲೆ, ತಾಲೂಕು ತುಳುನಾಡ ಒಕ್ಕೂಟದ ಅಧ್ಯಕ್ಷ ರಾಜೇಶ್ ಕುಲಾಲ್ ಬೈರೊಟ್ಟು, ಅರಸಿನಮಕ್ಕಿ ಸರಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕಿ ಮಂಜುಳಾ, ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆಯ ವಿಭಾಗೀಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಕಾಯರ್ತಡ್ಕ ಕುಂಭಶ್ರೀ ಗೆಳೆಯರ ಬಳಗದ ಗೌರವಾಧ್ಯಕ್ಷ ವಿಜಯ್ ಕೆ., ಮಂಗಳೂರು ಪೊಲೀಸ್ ಇಲಾಖೆಯ ರಾಧಾಕೃಷ್ಣ ಕುಲಾಲ್ ಪಾಣಾಜೆ, ಚಾರ್ಮಾಡಿ ಪಂಚಶ್ರೀ ಕಲಾಕೂಟದ ಅಧ್ಯಕ್ಷ, ರಂಗ ಕಲಾವಿದ ಶ್ರೀನಿವಾಸ ಕುಲಾಲ್ ಕಕ್ಕಿಂಜೆ ಭಾಗವಹಿಸಲಿದ್ದಾರೆ.

ಕೊಕ್ಕಡ ಪಂಚಮಿ ಹಿತಾಯುರ್ಧಾಮದ ಹಿರಿಯ ವೈದ್ಯ ಡಾ| ಮೋಹನದಾಸ ಗೌಡ ಕೊಕ್ಕಡ ಇವರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಮಧ್ಯಾಹ್ನ ಹವ್ಯಾಸಿ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.

Related posts

ಸ್ಕೂಟರ್-ಟಿಪ್ಪರ್ ನಡುವೆ ಅಪಘಾತ: ಕೂಟದಕಲ್ಲು ನಿವಾಸಿ ಸುಧಾಕರ್ ರವರಿಗೆ ಗಾಯ

Suddi Udaya

ಎಸ್.ಡಿ.ಪಿ.ಐ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಕ್ರೀಡಾಕೂಟ

Suddi Udaya

ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇಲ್ಲಿನ ಬಾಲಕರ ತಂಡ ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ

Suddi Udaya

ಮಾಜಿ ಶಾಸಕ ದಿ. ಕೆ. ವಸಂತ ಬಂಗೇರ ಅವರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಿದ ಶಾಸಕ ಹರೀಶ್‌ ಪೂಂಜ

Suddi Udaya

ಡೆನ್ನಾನ ಡೆನ್ನನ – 2023 ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ: ಯುವವಾಹಿನಿ ಬೆಳ್ತಂಗಡಿ ಘಟಕ ಚಾಂಪಿಯನ್

Suddi Udaya

ಜೂ.8-ಜು.22 : ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಉಚಿತ ಕಂಪ್ಯೂಟರ್ ಡಿಟಿಪಿ ತರಬೇತಿ

Suddi Udaya
error: Content is protected !!