ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪಡಂಗಡಿಯ ಮನೆಯೊಂದರಿಂದ ರೂ.25 ಸಾವಿರ ನಗದು ಹಾಗೂ ರೂ.9.50 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಪಡಂಗಡಿ: ಮನೆಯಲ್ಲಿ ಯಾರು ಇಲ್ಲದ ಸಮಯ ಒಳನುಗ್ಗಿದ ಕಳ್ಳರು ಸುಮಾರು ರೂ.9.50 ಲಕ್ಷ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಜ.6ರಂದು ಪಡಂಗಡಿ ಗ್ರಾಮದ ಬದ್ಯಾರು ಎಂಬಲ್ಲಿ ನಡೆದಿದೆ.

ಪಡಂಗಡಿ ಗ್ರಾಮದ ಬದ್ಯಾರು ಐಬಿ ರೆಸಿಡೆನ್ಸಿ ನಿವಾಸಿ ಇಸ್ಮಾಯಿಲ್ ಎಂಬವರು ಮನೆಯಲ್ಲಿ ಈ ಕಳ್ಳತನ ನಡೆದಿದೆ. ಜ.6ರಂದು ರಾತ್ರಿ 7 ಗಂಟೆಗೆ ಇಸ್ಮಾಯಿಲ್ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಮನೆಗೆ ಬೀಗ ಹಾಕಿ ಮೂಡಬಿದ್ರೆಗೆ ಕಾರ್ಯಕ್ರಮಕ್ಕೆ ಹೋದವರು ಮರಳಿ ರಾತ್ರಿ 11.50ಕ್ಕೆ ವಾಪಾಸ್ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಇಸ್ಮಾಯಿಲ್ ಅವರು ಮೂಡಬಿದ್ರೆಗೆ ಹೋಗಿರುವುದನ್ನು ತಿಳಿದ ಯಾರೋ ಕಳ್ಳರು ಮನೆಯಲ್ಲಿ ಯಾರೂ ಇಲ್ಲದಿರುವ ಸಮಯ ಮನೆಯ ಹಿಂಬಾಗಿಲ ಚಿಲಕ ಮುರಿದು ಒಳ ಪ್ರವೇಶಿಸಿ ಮನೆಯ ಬೆಡ್ ರೂಮಿನಲ್ಲಿದ್ದ ಕಪಾಟಿನ ಬೀಗ ಮುರಿದು ಕಪಾಟಿನಲ್ಲಿರಿಸಿದ್ದ 24 ಗ್ರಾಂ ತೂಕದ 2 ಚಿನ್ನದ ಬಳೆ, 20ಗ್ರಾಂ ತೂಕದ ಚಿನ್ನದ ಮುತ್ತಿನ ಹಾರ, ೪ಗ್ರಾಂ ತೂಕದ ಬ್ರಾಸ್‌ಲೈಟ್-1, ಮೂರು ಗ್ರಾಂ ತೂಕದ 2 ಉಂಗುರ, ಒಂದೂವರೆ ಗ್ರಾಂ 1 ಉಂಗುರ, 4 ಗ್ರಾಂ ತೂಕದ ಕಿವಿಯ ಓಲೆ ಸೇರಿದಂತೆ ಒಟ್ಟು 83.5 ಗ್ರಾಂ ತೂಕದ ಚಿನ್ನಭಾರಣ ಕಳವುಗೈದಿದ್ದು, ಇದರ ಮೌಲ್ಯ 9,50,೦೦೦ ಎಂದು ಅಂದಾಜಿಸಲಾಗಿದೆ. ಜೊತೆಗೆ ಕಪಾಟಿನಲ್ಲಿದ್ದ ರೂ.25,೦೦೦ ನಗದು ಹಣ ಕಳವು ಮಾಡಿವುದಾಗಿ ವರದಿಯಾಗಿದೆ.

Related posts

ಉಜಿರೆ: ಕುಂಟಿನಿ ಮದ್ರಸದಲ್ಲಿ ಸ್ಥಾಪಕ ದಿನಾಚರಣೆ

Suddi Udaya

ಭಾರಿ ಮಳೆಗೆ ಅರಸಿನಮಕ್ಕಿಯ ಕಾನದಲ್ಲಿ ಗುಡ್ಡದಿಂದ ರಭಸವಾಗಿ ಬಂದ ನೀರಿನಿಂದ ಮನೆಗೆ ಹಾನಿ

Suddi Udaya

ಕನ್ಯಾಡಿಯಲ್ಲಿ ಪ್ರತಿಷ್ಠಿತ ಸೇವಕ್ ಸರ್ವಿಸಸ್ ಶುಭಾರಂಭ

Suddi Udaya

ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಸಮೀಕ್ಷೆ, ಕಾಶಿಪಟ್ಣ ಗ್ರಾಮ ಪಂಚಾಯತಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಮೇಲಂತಬೆಟ್ಟು ಕಾರ್ಯಕ್ಷೇತ್ರದ ವಾತ್ಸಲ್ಯ ಸದಸ್ಯೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲಾ ಪುಸ್ತಕ, ಬ್ಯಾಗ್ ವಿತರಣೆ

Suddi Udaya

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಸಾಮೂಹಿಕ ವಿವಾಹ ನಿಶ್ಚಿತಾರ್ಥ

Suddi Udaya
error: Content is protected !!