25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರಸಿನಮಕ್ಕಿಯಲ್ಲಿ ಮಲ್ಲ ಚಾವಡಿ ಹಬ್ಬ , ಸನ್ಮಾನ ಸಮಾರಂಭ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ

ಅರಸಿನಮಕ್ಕಿ: ಮೂಲ್ಯರ ಯಾನೆ ಕುಲಾಲರ ಕೂಟದ 31ನೇ ಮಲ್ಲ ಚಾವಡಿ ಹಬ್ಬ ಮತ್ತು ಸನ್ಮಾನ ಸಮಾರಂಭ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮವು ಜ.11ರಂದು ಅರಸಿನಮಕ್ಕಿ ಕುಂಭಶ್ರೀ ಚಾವಡಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಕೆ. ಗಂಗಾಧರ ಕುಲಾಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಡೆಪ್ಯುಟಿ ಕಮಾಂಡೆಂಟ್ ಚಂದಪ್ಪ ಮೂಲ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಹಿತಿ, ಯಕ್ಷಗಾನ ಕಲಾವಿದ ಮಹೇಶ್ ಕುಲಾಲ್ ಅರ್ತಿಮೂಲೆ, ತಾಲೂಕು ತುಳುನಾಡ ಒಕ್ಕೂಟದ ಅಧ್ಯಕ್ಷ ರಾಜೇಶ್ ಕುಲಾಲ್ ಬೈರೊಟ್ಟು, ಅರಸಿನಮಕ್ಕಿ ಸರಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕಿ ಮಂಜುಳಾ, ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆಯ ವಿಭಾಗೀಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಕಾಯರ್ತಡ್ಕ ಕುಂಭಶ್ರೀ ಗೆಳೆಯರ ಬಳಗದ ಗೌರವಾಧ್ಯಕ್ಷ ವಿಜಯ್ ಕೆ., ಚಾರ್ಮಾಡಿ ಪಂಚಶ್ರೀ ಕಲಾಕೂಟದ ಅಧ್ಯಕ್ಷ, ರಂಗ ಕಲಾವಿದ ಶ್ರೀನಿವಾಸ ಕುಲಾಲ್ ಕಕ್ಕಿಂಜೆ, ಕಲಾವಿದ ಎಚ್. ಕೆ. ನಯನಾಡು, ರಾಮ ಕುಲಾಲ್ ಉಪ್ಪಿನಂಗಡಿ ಭಾಗವಹಿಸಿದರು.

ಕೊಕ್ಕಡ ಪಂಚಮಿ ಹಿತಾಯುರ್ಧಾಮದ ಹಿರಿಯ ವೈದ್ಯ ಡಾ| ಮೋಹನದಾಸ ಗೌಡ ಕೊಕ್ಕಡ ಇವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು. ಅಂಗನವಾಡಿಯಿಂದ ಪಿ. ಯು. ಸಿ ವರೆಗಿನ ಮಕ್ಕಳಿಗೆ ಪುಸ್ತಕ ವಿತರಣೆ, ವಿವಿಧ ಸ್ಪರ್ಧೆ ಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಎಸ್. ಎಸ್. ಎಲ್. ಸಿ ಯಲ್ಲಿ ಹೆಚ್ಚು ಅಂಕ ಪಡೆದ ತೇಜಸ್ವಿ ಬಡೆಕ್ಕಲ, ಮಂಗಳೂರಿನಲ್ಲಿ ನಡೆದ ಕುಲಾಲ ಕಲಾವಳಿಯಲ್ಲಿ ನಾಟಕದಲ್ಲಿ ಪ್ರಶಸ್ತಿ ಪಡೆದ ರುಕ್ಮಯ್ಯ ಕುಲಾಲ್ ಮತ್ತು ತಂಡವನ್ನು ಗೌರವಿಸಲಾಯಿತು. ವಿದ್ಯಾ ನಿಧಿಯನ್ನು ಉನ್ನತ ವಿದ್ಯಾಭ್ಯಾಸಕ್ಕಾಗಿ ಬಿಂಧು ಕುಲಾರ್ ರವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಡೆಪ್ಯುಟಿ ಕಮಾಂಡೆಂಟ್ ಚಂದಪ್ಪ ಮೂಲ್ಯರವರು ಹಿಂದುಗಳು ಭಗವದ್ಗೀತೆ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ನೀಡುವ ಪುಸ್ತಕಗಳನ್ನು ಹಂಚಲಾಯಿತು.

ಮಕ್ಕಳು ಪ್ರಾರ್ಥಿಸಿದರು. ರುಕ್ಮಯ್ಯ ಕುಲಾಲ್ ಸ್ವಾಗತಿಸಿದರು. ಗಣೇಶ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಿಜಯ ಯು. ಸಿ. ಕುಲಾಲ್ ವರದಿ ವಾಚಿಸಿದರು. ಪ್ರವೀಣ್ ಯು. ಸಿ. ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಅಶೋಕ್ ಕುಲಾಲ್ ಧನ್ಯವಾದವಿತ್ತರು.
ಮಧ್ಯಾಹ್ನ ನಂತರ ಮಕ್ಕಳು ಹಾಗೂ ಹವ್ಯಾಸಿ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

Related posts

ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ರವರು ಭೇಟಿ

Suddi Udaya

ಏಷಿಯನ್ ನೆಟ್ ಬಾಲ್ ಚಾಂಪಿಯನ್ಶಿಪ್’ ಕ್ರೀಡಾಕೂಟ: ಭಾರತ ತಂಡದ ಪ್ರಾಥಮಿಕ ತರಬೇತಿ ಶಿಬಿರಕ್ಕೆ ಎಸ್.ಡಿ.ಎಂ ಕಾಲೇಜಿನ ಚಿಂತನ್ ಬಿ ಸಿ, ಪುನೀತ್ ಆಯ್ಕೆ

Suddi Udaya

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷರಾಗಿ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷರಾಗಿ ಅಶೋಕ ಪಿ ಆಯ್ಕೆ

Suddi Udaya

ಉಜಿರೆ :ಶ್ರೀ ಧ.ಮಂ. ವಸತಿ ಪ.ಪೂ. ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲುವ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ತುಳುನಾಡ್ ಜವಾನೆರ್ ವೇಣೂರು ಮತ್ತು ಗೋಳಿಯಂಗಡಿ ಕೇದಗೆ ಯುವಕೇಸರಿ ಫ್ರೆಂಡ್ಸ್ ಕ್ಲಬ್‌ನಿಂದ ಪುಸ್ತಕ ವಿತರಣೆ

Suddi Udaya

ಗೋವಿಂದೂರು ಮಿತ್ರ ಬಳಗದ ಸದಸ್ಯರಿಂದ ಪಾರೆಂಕಿ ಅಭಿಲಾಷ್ ರವರಿಗೆ ಆರ್ಥಿಕ ನೆರವು

Suddi Udaya
error: Content is protected !!