September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಡಂತ್ಯಾರಿನಲ್ಲಿ ಉಚಿತ ಯೋಗ ಶಿಕ್ಷಣ ಶಿಬಿರ

ಮಡಂತ್ಯಾರು : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ ಇದರ ವತಿಯಿಂದ ಶ್ರೀ ವಿಶ್ವಕರ್ಮ ಸಭಾಭವನ ಬಸವನಗುಡಿ ಮಡಂತ್ಯಾರು ಇಲ್ಲಿ ಉಚಿತ ಯೋಗ ಶಿಕ್ಷಣ ಶಿಬಿರವು ನಡೆಯುತ್ತಿದ್ದು, ಸಮಿತಿಯ ವತಿಯಿಂದ ಮಾತೃವಂದನ, ಮಾತೃಧ್ಯಾನ ಮತ್ತು ಮಾತೃ ಭೋಜನ ಕಾರ್ಯಕ್ರಮವು ಜ. 11 ರಂದು ಜರಗಿತು.

ಮುಖ್ಯ ಅತಿಥಿಯಾಗಿ ಪ್ರಾಂತ ಪ್ರಶಿಕ್ಷಣ ಪ್ರಮುಖರಾದ ಲಕ್ಷ್ಮೀನಾರಾಯಣ, ಪಾರೆಂಕಿಯ ನಿವೃತ್ತ ಅಂಗನವಾಡಿ ಶಿಕ್ಷಕಿ ಸುಶೀಲ ಮತ್ತು ಅಧ್ಯಕ್ಷರಾಗಿ ಬೆಳ್ತಂಗಡಿ ಶಾಖೆಯ ಶಿಕ್ಷಕಿ ಪುಷ್ಪ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ಗಣೇಶ್ , ಸುಕೇಶ್ ,ಸತೀಶ್ ಉಪಸ್ಥಿತರಿದ್ದರು. ಸ್ಥಳೀಯ ಶಾಖೆಗಳಾದ ಪುಂಜಾಲಕಟ್ಟೆ, ಬೆಳ್ತಂಗಡಿ, ಗುರುವಾಯನಕೆರೆ ಮತ್ತು ಕಳಿಯ ಶಾಖೆಯ ಯೋಗ ಬಂಧುಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಮಿತಾ ನಿರೂಪಿಸಿ, ಮಮತಾ ಸ್ವಾಗತಿಸಿ, ಭವಾನಿ ವರದಿ ವಾಚಿಸಿ, ಯೋಗ ಬಂಧುಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡು, ಭಾರತಿ ವಂದಿಸಿದರು.

Related posts

ಧರ್ಮಸ್ಥಳದಲ್ಲಿ 55ನೇ ವರ್ಷದ ಪುರಾಣ ಕಾವ್ಯ ವಾಚನ-ಪ್ರವಚನ ಉದ್ಘಾಟನೆ

Suddi Udaya

ಬಿಜೆಪಿ ಪಕ್ಷದ ಅಭ್ಯರ್ಥಿ ಶಾಸಕ ಹರೀಶ್ ಪೂಂಜ ರವರಿಗೆ ಪ್ರಮಾಣಪತ್ರ ವಿತರಣೆ

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ನಿಂದ ಮಕ್ಕಳ ರಜಾ ಶಿಬಿರ 2025: ಮಕ್ಕಳಿಗೆ ಉಚಿತ ಪುಸ್ತಕ ವಿತರಣೆಯೊಂದಿಗೆ ಮಾಹಿತಿ ಕಾರ್ಯಕ್ರಮ

Suddi Udaya

ಮುಂಡಾಜೆ: ವಿವೇಕಾನಂದ ಶಿಕ್ಷಣ ಸಂಸ್ಥೆಗಳಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಅರಸಿನಮಕ್ಕಿಯಲ್ಲಿ ಹತ್ಯಡ್ಕ – ರೆಖ್ಯ ಗ್ರಾಮಗಳ ಬಿಜೆಪಿ ಶಕ್ತಿಕೇಂದ್ರದ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕಬ್,ಬುಲ್ ಬುಲ್, ವಿದ್ಯಾರ್ಥಿಗಳಿಂದ ಪೋಷಕರ ದಿನಾಚರಣೆ

Suddi Udaya
error: Content is protected !!