September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿವರದಿ

ಬಂಗಾಡಿ ಅರಮನೆಯ ಹಿರಿಯರಾದ ಶತಾಯುಷಿ ರವಿರಾಜ್ ಬಲ್ಲಾಳ್ ವಿಧಿವಶ

ಇಂದಬೆಟ್ಟು: ಬಂಗಾಡಿ ಅರಮನೆಯ ಹಿರಿಯರಾದ , ಬಾಂಗ್ವಾಡಿ ಬಂಗ ಅರಸರ ವಂಶಸ್ಥರಾದ ಶತಾಯುಷಿ ರವಿರಾಜ್ ಬಲ್ಲಾಳ್ (104ವ) ರವರು ಅಲ್ಪಕಾಲದ ಅಸೌಖ್ಯದಿಂದ ಜ.16 ರಂದು ವಿಧಿವಶರಾಗಿದ್ದಾರೆ.

ಬಂಗ ಅರಸರ ರಾಜಧಾನಿಯಾಗಿದ್ದ ಬಂಗಾಡಿಯ ಅರಮನೆಯನ್ನು ಕೆಲವೊಂದು ಮಾರ್ಪಾಡುಗಳನ್ನು ಮಾಡಿ ಇಂದಿಗೂ ರವಿರಾಜ ಬಲ್ಲಾಳ್ ಅವರು ಬಂಗಾಡಿ ಅರಮನೆಯನ್ನು ಸಂರಕ್ಷಿಸಿಕೊಂಡು ಬಂದಿದ್ದರು. ‘ಬಂಗರಸರ ಮೂಲ ಹಾಗೂ ಪರಿಚಯ, ಇವರ ಆಳ್ವಿಕೆಯಲ್ಲಿ ನಿರ್ಮಿಸಿದ ಶ್ರವಣಗುಂಡ, ಶಾಂತಿನಾಥ ಸ್ವಾಮಿಯ ಬಸದಿ, ಜೈನ ಅರಸರ ಕಾಲದಲ್ಲಿ ಇದ್ದ ಪದ್ಧತಿ, ದಕ್ಷಿಣ ಕನ್ನಡ ಜಿಲ್ಲೆಯನ್ನಾಲಿದ ಜೈನ ಅರಸರು, ಹೆಗ್ಗಡೆ ಹಾಗೂ ಬಲ್ಲಾಳರ ಸರ್ವಧರ್ಮದ ಕೊಡುಗೆ ಬಂಗರಸರ ಕಾಲದ ಕೆಲವು ಶಾಸನಗಳು ಶಾಸನದಲ್ಲಿರುವ ನೂನ್ಯತೆಯ ವಿವರ ಬಂಗರಸರ ವಂಶಾವಳಿ ಲಕ್ಷ್ಮಪ್ಪರಸ ಬಂಗರ ಸ್ವಾತಂತ್ರ್ಯ ಚಳುವಳಿಯ ಎಲ್ಲಾ ವಿವರವೂ ಲಕ್ಷ್ಮಪ್ಪ ಬಂಗರ ಸ್ವಾತಂತ್ರ್ಯ ಚಳುವಳಿಯ ಎಲ್ಲಾ ವಿವರಗಳನ್ನು ಬಿ.ರವಿರಾಜ್ ಬಲ್ಲಾಳರು ಸಂಶೋಧಿಸಿ ‘ ಬಂಗ ಅರಸರ ಇತಿಹಾಸ’ ಪುಸ್ತಕವನ್ನು ಬರೆದು ಅದರಲ್ಲಿ ದಾಖಲಿಸಿದ್ದಾರೆ. ಅಲ್ಲದೆ ಹಲವಾರು ಲೇಖನಗಳನ್ನು, ಬರಹಗಳನ್ನು ರವಿರಾಜ ಬಲ್ಲಾಳ್ ಅವರು ಬರೆದಿದ್ದಾರೆ.

ಮೃತರು ಇಬ್ಬರು ಪುತ್ರರಾದ ಯಶೋಧರ ಬಲ್ಲಾಳ್, ಅಜಿತ್ ಬಲ್ಲಾಳ್, ಪುತ್ರಿ ಜಯರತ್ನ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Related posts

ಪಟ್ರಮೆ ಗೆಳೆಯರ ಬಳಗದಿಂದ ಗಣೇಶ ಚತುರ್ಥಿ ಪ್ರಯುಕ್ತ ಅನಾರು ಶಾಲೆಯಲ್ಲಿ ಶ್ರಮದಾನ

Suddi Udaya

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಎನ್ ಸಿಸಿ. ಎನ್‌ಎಸ್‌ಎಸ್. ರೇಂಜರ್ಸ್ ರೋವರ್ಸ್ ಮತ್ತು ರೆಡ್ ಕ್ರಾಸ್ ಘಟಕಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Suddi Udaya

ಮಾ.1: ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಪಿಂಕ್ ಮ್ಯಾರಥಾನ್ “ನಾರಿ ಇನ್ ಪಿಂಕ್ ಸಾರಿ”ಕ್ಯಾನ್ಸರ್ ಜಾಗೃತಿ ಜಾಥಾ ಕಾರ್ಯಕ್ರಮ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಭಜನಾ ಮಂಡಳಿಯ ಬೆಳ್ಳಿಹಬ್ಬ ವಾರ್ಷಿಕೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗುರಿಪಳ್ಳ ಒಕ್ಕೂಟದ ವತಿಯಿಂದ ನಿಡಿಗಲ್ ದೇವಸ್ಥಾನದಲ್ಲಿ ವನಮಹೋತ್ಸವ ಕಾರ್ಯಕ್ರಮ

Suddi Udaya

ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya
error: Content is protected !!