September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ, ಭಕ್ತರಿಗೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ

ಉಡುಪಿ : ರವಿವಾರ ಮುಂಜಾನೆ ಮುಂದಿನ ಎರಡು ವರ್ಷಗಳ ಕಾಲ ಶ್ರೀಕೃಷ್ಣ ಪೂಜಾ ಕೈಂಕರ್ಯಕ್ಕಾಗಿ ಮೊದಲ ಬಾರಿ ಸರ್ವಜ್ಞ ಪೀಠಾರೋಹಣ ಮಾಡಿರುವ ಶೀರೂರು ಮಠದ ಶ್ರೀವೇದವರ್ಧನ ತೀರ್ಥರು ಕೃಷ್ಣ ಮಠವನ್ನು ಪ್ರವೇಶಿಸುವ ಭಕ್ತರಿಗೆ ವಸ್ತ್ರ ಸಂಹಿತೆ (ಡ್ರೆಸ್ ಕೋಡನ್ನು ಕಡ್ಡಾಯಗೊಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಮಹಾಪೂಜೆ ನಡೆಯುವ ಅಪರಾಹ್ನದವರೆಗೆ ಜಾರಿಯಲ್ಲಿದ್ದ ವಸ್ತ್ರಸಂಹಿತೆಯನ್ನು ಇದೀಗ ದಿನ ಪೂರ್ತಿ ಜಾರಿ ಗೊಳಿಸಲಾಗಿದೆ. ಹೀಗಾಗಿ ಇನ್ನು ಮುಂದೆ ಕೃಷ್ಣ ಮುಖ್ಯಪ್ರಾಣರ ದರ್ಶನಕ್ಕಾಗಿ ಮಠ ಪ್ರವೇಶಿ ಸುವ ಮುನ್ನ ಪುರುಷರು ಅಂಗಿಯನ್ನು ತೆಗೆಯಬೇಕಾಗಿದೆ. ಬರ್ಮುಡ, ಹಾಫ್ ಪ್ಯಾಂಟ್‌ಗಳನ್ನು ಧರಿಸುವಂತಿಲ್ಲ. ಶಾಲನ್ನು ಧರಿಸಿ ಮಠದೊಳಗೆ ಬರಬಹುದಾಗಿದೆ ಎಂದು ಶೀರೂರು ಮಠದ ದಿವಾನರಾದ ಡಾ.ಉದಯಕುಮಾ‌ರ್ ಸರಳತ್ತಾಯ ಸ್ವಾಮೀಜಿ ಆದೇಶವನ್ನು ಪ್ರಕಟಿಸುತ್ತಾ ತಿಳಿಸಿದರು.

ಕೃಷ್ಣ ಮಠಕ್ಕೆ ಆಗಮಿಸುವ ಮಹಿಳಾ ಭಕ್ತರೂ ಸಹ ಸಭ್ಯ ಉಡುಪುಗಳನ್ನು ಧರಿಸಬೇಕು.ಜೀನ್ಸ್ ಪ್ಯಾಂಟ್, ಟಿಶರ್ಟ್, ಸ್ಟೀವ್‌ಲೆಸ್ ಉಡುಪುಗಳನ್ನು ಧರಿಸಿ ಬರುವಂತಿಲ್ಲ. ಸಂಜೆಯ ಬಳಿಕವೂ ಕೃಷ್ಣನಿಗೆ ತೊಟ್ಟಿಲು ಪೂಜೆ ಸೇರಿದಂತೆ ಹಲವು ಪೂಜೆಗಳೊಂದಿಗೆ ಸದಾ ವೇದಘೋಷಗಳು ನಡೆಯುತ್ತಿರುವುದರಿಂದ ಕೃಷ್ಣ ಭಕ್ತರಾಗಿ ಎಲ್ಲರೂ ಮಠಕ್ಕೆ ಆಗಮಿಸಬೇಕು ಎಂದು ಡಾ.ಸರಳತ್ತಾಯ ತಿಳಿಸಿದ್ದಾರೆ.

Related posts

ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 19ನೇ ಬೆಳ್ತಂಗಡಿ ಮಹಿಳಾ ಶಾಖೆಯ ಉದ್ಘಾಟನಾ ಸಮಾರಂಭ

Suddi Udaya

ಸರ್ಕಾರಿ ಪದವಿಪೂರ್ವ ಕಾಲೇಜು, ಕೊಯ್ಯೂರು -ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ :

Suddi Udaya

ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಯಕ್ಷ ಶಿಕ್ಷಣ ಯೋಜನೆಯ ವತಿಯಿಂದ ನಿಡ್ಲೆ ಸ.ಪ್ರೌ. ಶಾಲೆಯಲ್ಲಿ ಯಕ್ಷನಾಟ್ಯ ತರಬೇತಿ ಉದ್ಘಾಟನೆ

Suddi Udaya

ಬಳಂಜ ಬಿಜೆಪಿ ಬೂತ್ ಸಮಿತಿ‌ ಅಧ್ಯಕ್ಷರಾಗಿ ಗಣೇಶ್ ದೇವಾಡಿಗ, ಕಾರ್ಯದರ್ಶಿಯಾಗಿ ಪ್ರಕಾಶ್ ಪೂಜಾರಿ

Suddi Udaya

ಕ್ಲಸ್ಟರ್ ಮಟ್ಟದ ಕಬ್ಬಡಿಯಲ್ಲಿ ವೇಣೂರು ಸರ್ಕಾರಿ ಪ್ರೌಢಶಾಲೆಗೆ ಗೆಲುವು

Suddi Udaya

ನಿಡ್ಲೆ: ಪಾರ್ಪಿಕಲ್ ಸಮೀಪ ಕಾರು ಮತ್ತು ಬೈಕ್ ಅಪಘಾತ

Suddi Udaya
error: Content is protected !!