September 6, 2026
ಗ್ರಾಮಾಂತರ ಸುದ್ದಿ

ಬಂಟರ ಸಂಘ ಕಾವಳಕಟ್ಟೆ ವಲಯ : ಸಾಧಕರಿಗೆ ಸನ್ಮಾನ ಮತ್ತು ಮಾಹಿತಿ ಕಾರ್ಯಕ್ರಮ

ಬಂಟ್ವಾಳ : ಬಂಟರ ಸಂಘ ಕಾವಳಕಟ್ಟೆ ವಲಯದ ಬಂಟ್ಟಾಳ ತಾಲೂಕು ಮಟ್ಟದ ಬಂಟರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಮತ್ತು ರಾಷ್ಟ್ರೀಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬಂಟ್ಟಾಳ ತಂಡವನ್ನು ಪ್ರತಿನಿಧಿಸಿದ ವಲಯದ ಕಲಾವಿದರ ‘ಬಂಟರ ಸಮ್ಮಿಲನ – 2026’ ಕೆದ್ದಲಿಕೆಯ ಸಭಾ ಭವನದಲ್ಲಿ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಕಾವಳಪಡೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ಮಾತನಾಡಿ, ಸಮಾಜದ ಬಲವರ್ಧನೆಗೆ ಕೂಡು ಕುಟುಂಬ ಮತ್ತು ಹಿರಿಯರ ಮಾರ್ಗದರ್ಶನ ಅತ್ಯಂತ ಅವಶ್ಯ. ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವುದರ ಜೊತೆಗೆ ಯುವಕರು ದುಶ್ಚಟಗಳಿಂದ ದೂರ ಸರಿಯಬೇಕು. ಬಂಟರ ಸಂಘದ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕೂಡು ಕುಟುಂಬಭರಿತ ಹಳ್ಳಿ ಜೀವನ ಅನುಭವಗಳ ತೊಟ್ಟಿಲು. ಅದರೆ ಪ್ರಸ್ತುತ ಯುವ ಸಮುದಾಯದ ನಗರ ಜೀವನದ ಒತ್ತಾಸೆಯಿಂದ ಹಳ್ಳಿ ಬದುಕನ್ನು ಮೂಲೆಗುಂಪು ಮಾಡುತ್ತಿದೆ. ಇದು ನಮ್ಮ ನೆಲದ ಸಂಸ್ಕೃತಿ, ಸಾಂಪ್ರದಾಯ, ಭಾಷೆ ಮತ್ತು ಕಲೆಗಳ ಬೆಳವಣಿಗೆಗೆ ಮಾರಕ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರದಲ್ಲಿ ಬಂಟರ ಸಂಘ ಕಾವಳಕಟ್ಟೆ ವಲಯದ ಸಂಘಟನಾ ಕಾರ್ಯದರ್ಶಿ ಪುನೀತ್ ಶೆಟ್ಟಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಘಟನೆಗಳು ಊರಿನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸಮಾಜಮುಖಿ ಕಾರ್ಯ, ಕ್ರೀಡಾ ಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ಚಟುವಟಿಕೆಗಳನ್ನು ಬಂಟರ ಸಂಘ ಕಾವಳಕಟ್ಟೆ ವಲಯ ಆಯೋಜಿಸುತ್ತಿದ್ದು ಇದರಲ್ಲಿ ಹೆಚ್ಚಿನ ಯುವ ಬಂಟರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲವರ್ಧಗೊಳಿಸಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ಬಂಟ್ಟಾಳ ತಾಲೂಕು ಮಟ್ಟದ ಬಂಟರ ಕ್ರೀಡಾಕೂಟದಲ್ಲಿ ಹಾಗು ಬಜ್ಪೆಯಲ್ಲಿ ನಡೆದ ರಾಷ್ಟ್ರೀಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬಂಟ್ಟಾಳ ತಂಡವನ್ನು ಪ್ರತಿನಿಧಿಸಿ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರಾದವರಿಗೆ ಮತ್ತು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ ಮೆರಿಟ್ನಲ್ಲಿ ಸೀಟ್ ಪಡೆದ ಶ್ರೀ ಗುರುದತ್ತ್ ಜಗನ್ನಾಥ ಶೆಟ್ಟಿ, ಹಾಗೂ ಯಕ್ಷಗಾನದಲ್ಲಿ ಆಮಂತ್ರಣ ಪರಿವಾರದಿಂದ ಸತ್ಯಶ್ರೀ ಪ್ರಶಸ್ತಿಯನ್ನು ಪಡೆದ ಸಹನ ಶೆಟ್ಟಿ ಪಣೆಕಲ ಇವರನ್ನು ಸರ್ವರ ಸಮ್ಮುಖದಲ್ಲಿ ಅಭಿನಂದಿಸಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘ ಕಾವಳಕಟ್ಟೆ ವಲಯದ ಅಧ್ಯಕ್ಷ ಮೋಹನ್ ಶೆಟ್ಟಿ ನರ್ವಲ್ದಡ್ಡ ವಹಿಸಿದ್ದರು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಗೌರವ ಅಧ್ಯಕ್ಷ ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಉಪಾಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಬಿಯಂತಬೆಟ್ಟು ಹಾಗೂ ಚಂದ್ರಶೇಖರ ಪುಳಿಮಜಲು, ಹಿರಿಯರಾದ ತಿಮ್ಮಪ್ಪ ಶೆಟ್ಟಿ ಪೆರಿಯೇಲು, ಕಾರ್ಯದರ್ಶಿ ಉದಯಕುಮಾರ್ ಮೇಲ್ಮನೆ, ಹಾಗೂ ಯುವ ವಿಭಾಗ ಅಧ್ಯಕ್ಷ ಕಿಶೋರ್ ರೈ ಕಾಡಬೆಟ್ಟು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 7 ಗ್ರಾಮಗಳ ಬಂಟರ ಸಂಘ ಕಾವಳಕಟ್ಟೆ ವಲಯದ ಸದಸ್ಯರು ಭಾಗಿಯಾಗಿದ್ದರು. ಶ್ರೀಮತಿ ಯಶೋದ ಸದಾನಂದ ಪೂಂಜ ಪ್ರಾರ್ಥಿಸಿ, ಗಣೇಶ್ ಶೆಟ್ಟಿ ಸೇವಾ ಕಾರ್ಯಕ್ರಮ ನಿರೂಪಿಸಿದರು. ಉದಯಕುಮಾರ್ ಶೆಟ್ಟಿ ಮೇಲ್ಮನೆ ವಂದಿಸಿದರು.

Related posts

ಅರಸಿನಮಕ್ಕಿ: ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಕಾಳಿ ರವರಿಗೆ ವಾತ್ಸಲ್ಯ ಮನೆ ಹಸ್ತಾಂತರ

Suddi Udaya

ಉಜಿರೆ: ಬ್ರಹ್ಮಶ್ರೀ ನಾರಾಯಣ ಗುರುಗಳ ಪೀಠ ಪ್ರತಿಷ್ಠೆ, ಕಲಶಾಭಿಷೇಕ, ಶ್ರೀ ನಾರಾಯಣ ಗುರುಮಂದಿರ ಲೋಕಾರ್ಪಣೆ

Suddi Udaya

ನಡ: ನಿವೃತ್ತ ಶಿಕ್ಷಕ ವೆಂಕಪ್ಪ ಗೌಡ ನಿಧನ

Suddi Udaya

ಜೂ.21: ವೇಣೂರು ವಿದ್ಯುತ್ ನಿಲುಗಡೆ

Suddi Udaya

ಮದ್ದಡ್ಕ ಸಮೃದ್ಧಿ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

Suddi Udaya

ಬೆಳ್ತಂಗಡಿ ಪಟ್ಟಣದಲ್ಲಿ ನಿಲ್ಲದ ಚಿರತೆ ಹಾವಳಿ: ದಾಳಿಗೆ ಸುದೆಮುಗೇರುವಿನಲ್ಲಿ ನಾಯಿ ಬಲಿ

Suddi Udaya
error: Content is protected !!